ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಇದಕ್ಕೆ ಕಾರಣ ಅವರ ಪತ್ನಿ ಮತ್ತು ಮಗನ ಜೊತೆಗಿನ ಫೋಟೋ. ಇರ್ಫಾನ್ ಪಠಾಣ್ ಪುತ್ರ ಇಮ್ರಾನ್ ಪಠಾಣ್ ಇನ್​ಸ್ಟಾಗ್ರಾಂ ಅಕೌಂಟ್​ನಿಂದ ಪೋಸ್ಟ್ ಆಗಿರೋ ಫೋಟೋದಲ್ಲಿ ಇರ್ಫಾನ್ ಪಠಾಣ್, ಪತ್ನಿ ಸಫಾ ಬೇಗ್ ಹಾಗೂ ಪುತ್ರ ಇಮ್ರಾನ್ ಪಠಾಣ್ ಇದ್ದಾರೆ. ಆದರೆ ಪತ್ನಿ ಸಫಾ ಬೇಗ್ ಅವರ ಮುಖವನ್ನ ಫೋಟೋದಲ್ಲಿ ಅರ್ಧ ಬ್ಲರ್ ಮಾಡಲಾಗಿದೆ.

ಈ ಫೋಟೋ ಇನ್​ಸ್ಟಾಗ್ರಾಂನಲ್ಲಿ ಅಪ್ಡೇಟ್ ಆಗ್ತಿದ್ದಂತೆಯೇ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಕುತೂಹಲ ಹೆಚ್ಚಾಗಿದೆ. ಎಲ್ಲರೂ ಇರ್ಫಾನ್ ಪಠಾಣ್ ಪತ್ನಿಗೆ ಏನಾಯ್ತು ಅಂತ ಸಾಲು ಸಾಲು ಪ್ರಶ್ನೆಗಳನ್ನ ಮಾಡಿದ್ದಾರೆ. ಅಲ್ಲದೇ ಸಫಾ ಬೇಗ್ ಅವರ ಬ್ಲರ್ ಆಗಿರೋ ಫೋಟೋಗೆ ಇರ್ಫಾನ್ ಪಠಾಣ್ ಕಾರಣ ಇರಬಹುದು ಎಂದು ಹಲವರು ಇರ್ಫಾನ್ ಪಠಾಣ್ ವಿರುದ್ಧ ಕಿಡಿಕಾರಿದ್ದಾರೆ.

ಇದೆಲ್ಲ ನಡೆದ ನಂತರ ಮತ್ತೆ ಅದೇ ಫೋಟೋವನ್ನೇ ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್.. ಈ ಫೋಟೋವನ್ನ ನನ್ನ ರಾಣಿ ನನ್ನ ಮಗನ ಅಕೌಂಟ್​ನಿಂದ ಪೋಸ್ಟ್ ಮಾಡಿದ್ದಾರೆ. ಇದಕ್ಕಾಗಿ ನಮ್ಮನ್ನು ಹಲವು ಜನರು ದ್ವೇಷಿಸುತ್ತಿದ್ದಾರೆ. ಇಲ್ಲೂ ನಾನು ಇದನ್ನು ಪೋಸ್ಟ್ ಮಾಡುತ್ತೇನೆ. ಅವಳು ಬೇಕಂತಲೇ ಈ ಫೋಟೋವನ್ನು ತನ್ನ ಆಯ್ಕೆಯಂತೆ ಬ್ಲರ್ ಮಾಡಿದ್ದಾಳೆ. ಮತ್ತು ನಾನು ಅವಳ ಪಾರ್ಟ್​ನರ್ ಹೊರತು ಮಾಸ್ಟರ್ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಷ್ಟೆಲ್ಲ ಆದ ಮೇಲೂ ಸಫಾ ಬೇಗ್ ಈ ಫೋಟೋವನ್ನು ಬ್ಲರ್ ಮಾಡಿರುವುದೇಕೆ ಎನ್ನುವ ಸೋಷಿಯಲ್ ಮೀಡಿಯಾ ಬಳಕೆದಾರರ ಪ್ರಶ್ನೆ ಹಾಗೆಯೇ ಉಳಿದು ಹೋಗಿದೆ.

The post ವಿವಾದದ ಬಿರುಗಾಳಿ ಎಬ್ಬಿಸಿದ ಫೋಟೋ; ಪತ್ನಿ ಮುಖ ಬ್ಲರ್ ಮಾಡಿಸಿದ್ರಾ ಇರ್ಫಾನ್ ಪಠಾಣ್? appeared first on News First Kannada.

Source: newsfirstlive.com

Source link