ಶಿವಮೊಗ್ಗ: ವಿವಾಹವಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಕೊರೊನಾ ಸೋಂಕಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಜಿಲ್ಲೆಯ ನಿದಿಗೆಯಲ್ಲಿ ನಡೆದಿದೆ.

ಪೂಜಾ (24) ಕೊರೊನಾ ಸೋಂಕಿಗೆ ಬಲಿಯಾದ ನವ ವಿವಾಹಿತೆ. ಸಂಭ್ರಮವಿದ್ದ ಮನೆಯಲ್ಲಿ ಇದೀಗ ದುಃಖ ಮಡುಗಟ್ಟಿದೆ. ನಿದಿಗೆಯ ಪೂಜಾ ಹಾಗೂ ಹರಿಗೆಯ ಮಹೇಶ್ ಜೊತೆ ಸೋಮವಾರ ವಿವಾಹವಾಗಿತ್ತು. ಸೋಮವಾರ ವಿವಾಹವಾಗಿದ್ದು, ಗುರುವಾರ ಸಂಜೆ ಯುವತಿ ಸಾವನ್ನಪ್ಪಿದ್ದಾಳೆ. ವಿವಾಹವಾದ ಎರಡೇ ದಿನಕ್ಕೆ ಪೂಜಾಗೆ ಮೈಕೈ ನೋವು ಕಾಣಿಸಿಕೊಂಡಿದೆ. ನಿನ್ನೆ ಮಲವಗೊಪ್ಪದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಗುಣಮುಖವಾಗಿಲ್ಲ, ಬಳಿಕ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ: ಬಿಎಸ್‍ವೈ

ಮೃತಪಟ್ಟ ನಂತರ ವೈದ್ಯರು ಕೊರೊನಾ ಪರೀಕ್ಷೆ ನಡೆಸಿದ್ದು, ಈ ವೇಳೆ ನವವಿವಾಹಿತೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೊಸ ಜೀವನದ ಕನಸು ಕಾಣುತ್ತಿದ್ದ ಯುವತಿಯನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಈ ಮೂಲಕ ಸಂತಸದಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ದುಃಖ ಮಡುಗಟ್ಟಿದೆ.

Source: publictv.in

Source link