ವಿವಿಧ ಹುದ್ದೆಗಳ ಭರ್ತಿಗೆ ಸಿದ್ದರಾಮಯ್ಯನವರ ಅವಧಿಯಲ್ಲಿ ಮಾತ್ರ ಅಧಿಸೂಚನೆಗಳು ಹೊರಬಿದ್ದಿದ್ದವು: ನಿರುದ್ಯೋಗಿ ಯುವಕರು | Notifications for recruitment of various posts releases only during Siddaramaiah’ s tenure: Unemployed Youthsಅವರನ್ನು ಮಾತಾಡಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅಲ್ಲಿಗೆ ತೆರಳಿದಾಗ ನೈತಿಕ ಬೆಂಬಲ ಪಡೆದುಕೊಂಡ ಯುವಕರು ಹುಮ್ಮಸ್ಸಿನಿಂದ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು.

TV9kannada Web Team


| Edited By: Arun Belly

Sep 20, 2022 | 2:23 PM
ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ (PSI recruitment scam) ನಡೆದ ಅಕ್ರಮದಿಂದ ನೊಂದ ವಿದ್ಯಾರ್ಥಿಗಳು ಮತ್ತು ಇನ್ನೂ ಸಾವಿರಾರು ನಿರುದ್ಯೋಗಿ ಯುವಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ (Freedom Park) ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಮಾತಾಡಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಅಲ್ಲಿಗೆ ತೆರಳಿದಾಗ ನೈತಿಕ ಬೆಂಬಲ ಪಡೆದುಕೊಂಡ ಯುವಕರು ಹುಮ್ಮಸ್ಸಿನಿಂದ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ, ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಗಳು ಹೊರಬೀಳುತಿತ್ತು, ಈಗ ನಿಂತು ಹೋಗಿದೆ, ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಅವುಗಳ ಭರ್ತಿಗಾಗಿ ಸರ್ಕಾರವನ್ನು ಸಿದ್ದರಾಮಯ್ಯನವರು ಸದನದಲ್ಲಿ ಆಗ್ರಹಿಸಬೇಕೆಂದು ಒಬ್ಬ ಯುವಕ ಆಗ್ರಹಿಸಿದರು. ಸಿದ್ದರಾಮಯ್ಯ ಯುವಕರ ಅಳಲನ್ನು ಗಮನವಿಟ್ಟು ಆಲಿಸಿದರು.

TV9 Kannada


Leave a Reply

Your email address will not be published.