ವಿವೇಕ ಶಾಲೆಗೆ ಕೇಸರಿ ಬಣ್ಣ ವಿವಾದ: ರಾಜಕೀಯ ಕೆಸರೆರಚಾಟಕ್ಕೆ ಸಿದ್ಧವಾಯ್ತಾ ಮತ್ತೊಂದು ಹೊಸ ಅಖಾಡ? – Muslims opposing for Vivek School paint saffronವಿವೇಕ ಶಾಲೆಯ ಕೊಠಡಿಗಳಿಗೆ ವಿವೇಕಾನಂದರ ಉಡುಗೆಯ ಬಣ್ಣವಾದ ಕೇಸರಿ ಬಣ್ಣ ಬಳಿಸಲು ಮುಂದಾಗಿದ್ದು, ಇದಕ್ಕೆ ಮುಸ್ಲಿಂ ಮುಖಂಡರು ತೀರ್ವ ವಿರೋಧ ವ್ಯಕ್ತಪಡಿಸುತ್ತಿದ್ದಾರೆ

TV9kannada Web Team


| Edited By: Vivek Biradar

Nov 13, 2022 | 7:56 PM
ಶಿಕ್ಷಣ ಇಲಾಖೆ (Education Department) ಹೊಸದಾಗಿ ರಾಜ್ಯದಾದ್ಯಂತ 7000ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ (Swami Vivekananda)ರ ನೆನಪಿನಲ್ಲಿ ವಿವೇಕ ಶಾಲೆ ಅಂತಾ ಹೆಸರಿಡಲು ಮುಂದಾಗಿದೆ. ಕೊಠಡಿಗಳಿಗೆ ವಿವೇಕಾನಂದರ ಉಡುಗೆಯ ಬಣ್ಣವನ್ನೇ ಏಕರೂಪವಾಗಿ ಕೇಸರಿ ಬಣ್ಣ ಬಳಿಸಲು ಚಿಂತಿಸಿದೆ. ಆದರೆ ವಿವೇಕ ಶಾಲೆ (Vivek School)ಕ್ಕೆ ಕೇಸರಿ ಬಣ್ಣ ಬಳೆಯುವುದಕ್ಕೆ ತೀರ್ವ ವಿರೋಧ ವ್ಯಕ್ತವಾಗುತ್ತಿದೆ.

ಈ ಕುರಿತು ಮಾತನಾಡಿದ ಮುಸ್ಲಿಂ ಚಿಂತಕ ಅಬ್ದುಲ್ ರಜಾಕ್ ಚುನಾವಣೆಗೆ ಇನ್ನು ಕೆಲವೆ ತಿಂಗಳು ಬಾಕಿ ಇರುವಾಗಲೇ ಸರ್ಕಾರ ಈ ಕಾರ್ಯವನ್ನು ಮಾಡಲು ಹೊರಟಿದೆ. 7000ಕ್ಕೂ ಅಧಿಕ ಕೊಠಡಿಗಳನ್ನು ಕಟ್ಟುತ್ತೇವೆ ಎನ್ನುವುದು ಉಢಾಪೆ ಮಾತಾಗಿದೆ. ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಸರ್ಕಾರದ ಹಣದಲ್ಲಿ ಕೊಠಡಿಗಳನ್ನು ಕಟ್ಟುತ್ತಿರುವುದರಿಂದ ಕೇಸರಿ ಬಣ್ಣ ಹಚ್ಚಬಾರದು. ರಾಷ್ಟ್ರ ಧ್ವಜದ ಮೂರು ಬಣ್ಣಗಳನ್ನು ಹಚ್ಚಲಿ. ಕೇಸರಿ ಬಣ್ಣ ಹಚ್ಚೋಕೆ ಬಿಡಲ್ಲ, ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *