ವಿಶಾಖಪಟ್ಟಣಂನಲ್ಲಿ ಲಘು ಭೂಕಂಪನಕ್ಕೆ ಬೆಚ್ಚಿ ಬಿದ್ದ ಜನ | Mild tremors reports several parts of Visakhapatnam on Sunday morning


ವಿಶಾಖಪಟ್ಟಣಂನಲ್ಲಿ ಲಘು ಭೂಕಂಪನಕ್ಕೆ ಬೆಚ್ಚಿ ಬಿದ್ದ ಜನ

ಪ್ರಾತಿನಿಧಿಕ ಚಿತ್ರ

ವಿಶಾಖಪಟ್ಟಣಂ: ಭಾನುವಾರ ಬೆಳಗ್ಗೆ ವಿಶಾಖಪಟ್ಟಣಂನ (Visakhapatnam )ಕೆಲವು ಭಾಗಗಳಲ್ಲಿ ಲಘು ಭೂಕಂಪನ (Mild tremors) ಸಂಭವಿಸಿದ್ದು, ಆಂಧ್ರಪ್ರದೇಶದ (Andhra Pradesh)ನಗರದ ಹಲವಾರು ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಓಡಿದ್ದಾರೆ. ವರದಿಗಳ ಪ್ರಕಾರ ವಿಶಾಖಪಟ್ಟಣದ ಸಾಗರ್ ನಗರ, ಎಂವಿಪಿ ಕಾಲೋನಿ, ಪೇಡಾ ವಾಲ್ಟೇರ್, ಒನ್ ಟೌನ್, ಅಕ್ಕಯ್ಯಪಾಲೆಂ, ಕಂಚರಪಾಲೆಂ, ಎನ್‌ಎಡಿ, ಗಜುವಾಕ ಮತ್ತು ವೆಪ್ಸ್‌ಗಿಂಟಾ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದಿದ್ದಾರೆ.  ಭೂಕಂಪನದ ರಾಷ್ಟ್ರೀಯ ಕೇಂದ್ರವು ಇದು 1.8 ತೀವ್ರತೆಯ ಭೂಕಂಪ ಎಂದು ಹೇಳಿದೆ. ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ (GVMC) 7:13 ಕ್ಕೆ ಕಂಪನಗಳು ವರದಿಯಾದ ನಂತರ “ಮುನ್ನೆಚ್ಚರಿಕೆ ಕ್ರಮಗಳನ್ನು” ತೆಗೆದುಕೊಳ್ಳುವಂತೆ ಜನರನ್ನು ಕೇಳಿಕೊಂಡಿದೆ. “ಆತ್ಮೀಯ ನಾಗರಿಕರೇ, ಇಂದು ಬೆಳಿಗ್ಗೆ 7.14 ರ ಸುಮಾರಿಗೆ ನಗರದಾದ್ಯಂತ ಕಂಪನ ಅನುಭವವಾಯಿತು. ಸಂಭವನೀಯ ಭೂಕಂಪದ ಪ್ರಭಾವವನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿನಂತಿಸಲಾಗಿದೆ” ಎಂದು ಜಿವಿಎಂಸಿ ಟ್ವೀಟ್‌ ಮಾಡಿದೆ.

“ಯಾವುದೇ ಭೂಕಂಪದಂತಹ ಅನುಭವದ ಸಂದರ್ಭದಲ್ಲಿ ಮನೆಗಳಿಂದ ಹೊರಗೆ ಬಂದು ತೆರೆದ ಸುರಕ್ಷಿತ ಸ್ಥಳಗಳಲ್ಲಿ ಇರಿ. ಗಾಬರಿಯಾಗಬೇಡಿ, ಸುರಕ್ಷಿತವಾಗಿರಿ” ಎಂದು ಜಿವಿಎಂಸಿ ಹೇಳಿದೆ.

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕೆಲವು ಸೆಕೆಂಡುಗಳ ಕಾಲ ನಡೆದ ನಡುಕವನ್ನು ಅನುಭವಿಸಿದ್ದಾರೆ ಮತ್ತು ವಿಶಾಖಪಟ್ಟಣಂನಲ್ಲಿ “ಜೋರಾಗಿ ಸ್ಫೋಟದಂತಹ” ಶಬ್ದವನ್ನು ಕೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. “ಸರಿ. ಅದು ಏನಾಗಿತ್ತು?! ವಿಚಿತ್ರವಾದ ದೊಡ್ಡ ಶಬ್ದದ ನಂತರ ಏನೋ ಭೂಕಂಪನದಂತೆ ಭಾಸವಾಯಿತು,” ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ. “ಬೆಳಿಗ್ಗೆ 7:15 ರ ಸುಮಾರಿಗೆ ಭೂಕಂಪನವನ್ನು ಅನುಭವಿಸಿದೆ, ಕೆಲವು ಶಬ್ದಗಳು ಕೇಳಿಸಿದೆ ” ಎಂದು ಇನ್ನೊಬ್ಬ ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವರು ಸಣ್ಣಪುಟ್ಟ ಕಂಪನವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ.

“ರಿಕ್ಟರ್ ಮಾಪಕದಲ್ಲಿ 1.8 ಎಂಬುದು ಚಿಕ್ಕ ಪ್ರಮಾಣದ ಕಂಪನ ಎಂದು ಭಾವಿಸಲಾಗಿದೆ. ವಿಶಾಖಪಟ್ಟಣಂನಲ್ಲಿ ಕೆಲವು ಭೂಕಂಪನ ಚಟುವಟಿಕೆ ಎಂದು ಯಾವುದೇ ಮೂಲವನ್ನು ಉಲ್ಲೇಖಿಸಿಲ್ಲ. ಇದು ಭೂಕಂಪ ಆದರೆ ಸಮುದ್ರದಲ್ಲಿ ಅಥವಾ ಭೂಗರ್ಭದಲ್ಲಿ ಕೆಲವು ಸ್ಫೋಟಗಳು ಸಂಭವಿಸುವ ಸಾಧ್ಯತೆ ಹೆಚ್ಚು. ನೌಕಾಪಡೆ ಅಥವಾ ಇತರ ಕೈಗಾರಿಕಾ ಸ್ಥಾಪನೆಯಿಂದ ದೃಢೀಕರಣಕ್ಕಾಗಿ ಕಾಯೋಣ, ”ಎಂದು ಬಳಕೆದಾರರು ಬರೆದಿದ್ದಾರೆ.

“ನಾವು 14 ನವೆಂಬರ್ 2021 (GMT) ರಂದು ಸರಿಸುಮಾರು 01:43 ಕ್ಕೆ ಭಾರತದ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅಥವಾ ಅದರ ಸಮೀಪದಲ್ಲಿ ಭೂಕಂಪನ ಚಟುವಟಿಕೆಯಿಂದ ಉಂಟಾಗಬಹುದಾದ ಭೂಕಂಪನದ ಬಗ್ಗೆ ಪರಿಶೀಲಿಸದ ಆರಂಭಿಕ ವರದಿಗಳನ್ನು ಪಡೆಯುತ್ತಿದ್ದೇವೆ.  ಈ ಸಂಭವನೀಯ ಭೂಕಂಪದ ತೀವ್ರತೆ ಅಥವಾ ಆಳದ ಬಗ್ಗೆ ಇನ್ನೂ ಯಾವುದೇ ವಿವರಗಳಿಲ್ಲ ”ಎಂದು Volcanodiscovery.com ವೆಬ್‌ಸೈಟ್ ವರದಿ ಮಾಡಿದೆ.

ಇದನ್ನೂ ಓದಿ: ಬಿಹಾರದ ಪತ್ರಕರ್ತ, ಆರ್‌ಟಿಐ ಕಾರ್ಯಕರ್ತನ ಮೃತದೇಹ ಸುಟ್ಟು ರಸ್ತೆ ಬದಿ ಎಸೆದ ಸ್ಥಿತಿಯಲ್ಲಿ ಪತ್ತೆ

TV9 Kannada


Leave a Reply

Your email address will not be published. Required fields are marked *