ಧಾರವಾಡ: ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಸಾಮರ್ಥ್ಯವಿದ್ದು, ಅದನ್ನು ಪ್ರಬುದ್ಧ ಮಟ್ಟಕ್ಕೆ ಬೆಳೆಸಲು ಪಾಲಕರು ಪ್ರಯತ್ನಿಸುವದರೊಂದಿಗೆ ಜೀವನ ಕೌಶಲ್ಯಗಳನ್ನು ರೂಢಿ ಮಾಡಿಸಬೇಕು. ಅವರೊಂದಿಗೆ ಸದಾ ಶಿಕ್ಷಣ ಇಲಾಖೆ ಇದೆ ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್‍ಕುಮಾರ್ ಹಂಚಾಟೆಯವರು ಭರವಸೆ ನೀಡಿದ್ದಾರೆ.

ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಫೋರ್ಥ್ ವೇವ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಇಂದು ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಲಯದ ಶಾಲಾ ಸಿದ್ಧತಾ ಕೇಂದ್ರದ 50 ವಿಶೇಷ ಚೇತನ ಮಕ್ಕಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಇದನ್ನೂ ಓದಿ: ಕಣ್ಣು ಬಿಟ್ಟಿದ್ದ ದೇವರ ಕಣ್ಣನ್ನು ಪೂಜಾರಿ ಕೈಯಿಂದಲೇ ತೆಗೆಸಿದ ತಹಶೀಲ್ದಾರ್

ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಂಚಾಟೆ ಅವರು, ವಿಶೇಷ ಚೇತನ ಮಕ್ಕಳಲ್ಲಿ ವಿಶೇಷಸಾಮರ್ಥ್ಯವಿರುತ್ತದೆ, ಅದನ್ನು ಪಾಲಕರು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯಾಗದಂತೆ ಎಚ್ಚರವಹಿಸಬೇಕು. ವಿಶೇಷ ಚೇತನ ಮಕ್ಕಳು ಆರೋಗ್ಯವಾಗಿರಲು ಪಾಲಕರೆಲ್ಲ ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಿ. ಫೋರ್ಥ್ ವೇವ್ ಫೌಂಡೇಶನ್‍ನವರು ನಮ್ಮ ಜಿಲ್ಲೆಯ 200 ಮಕ್ಕಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದ್ದು, ಅವರ ಕೆಲಸ ಶ್ಲಾಘನೀಯವಾದುದು ಎಂದು ಅಭಿಪ್ರಾಯಪಟ್ಟರು.

The post ವಿಶೇಷ ಚೇತನ ಮಕ್ಕಳೊಂದಿಗೆ ಶಿಕ್ಷಣ ಇಲಾಖೆ ಇದೆ: ಡಿಡಿಪಿಐ ಹಂಚಾಟೆ appeared first on Public TV.

Source: publictv.in

Source link