ವಿಶ್ವಕಪ್​ನಿಂದ ಹೊರಬಿದ್ದ ಟೀಂ ಇಂಡಿಯಾ; ಕಿಂಗ್ ಕೊಹ್ಲಿ ಮತ್ತೆ ಎಮೋಷನಲ್ 


ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡದ ಪಯಣ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿಗೆ ಟಿ20 ನಾಯಕರಾಗಿ ಇದು ಕೊನೆಯ ಪಂದ್ಯಾವಳಿ ಆಗಿತ್ತು. ಆದರೆ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸದೇ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ. ಟೂರ್ನಿಯಿಂದ ಭಾರತದ ಪಯಣ ಅಂತ್ಯಗೊಂಡ ಬೆನ್ನಲ್ಲೇ ವಿರಾಟ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ಟೂರ್ನಿಯಿಂದ ಈ ರೀತಿ ಹೊರ ಬರುವುದರಿಂದ ತಂಡಕ್ಕಿಂತ ಯಾರೂ ಹೆಚ್ಚು ನಿರಾಸೆಗೊಳ್ಳುವುದಿಲ್ಲ ಎಂದಿದ್ದಾರೆ.

ನಾವು ಒಟ್ಟಾಗಿ ಒಂದು ಗುರಿಯನ್ನು ಸಾಧಿಸಲು ಬಯಸುತ್ತೇವೆ. ದುರಾದೃಷ್ಟವಶಾತ್ ನಾವು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಒಂದು ತಂಡವಾಗಿ ನಮಗಿಂತ ಹೆಚ್ಚು ನಿರಾಸೆಯನ್ನು ಯಾರೂ ಹೊಂದಿರುವುದಿಲ್ಲ. ನೀವೆಲ್ಲರೂ ನಮಗೆ ಸಾಕಷ್ಟು ಬೆಂಬಲ ನೀಡಿದ್ದೀರಿ ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಮತ್ತೆ ಗೆಲುವಿನ ಹಳಿಗೆ ಹಿಂತಿರುಗುವುದು ಮತ್ತು ಗೆಲುವಿನ ದಾಪುಗಾಲುಗಳನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್ 2021ರ ಆರಂಭವು ಟೀಮ್ ಇಂಡಿಯಾಕ್ಕೆ ಉತ್ತಮವಾಗಿರಲಿಲ್ಲ. ಇದರಿಂದಾಗಿ ಸೆಮಿಫೈನಲ್‌ ಕೂಡ ಪ್ರವೇಶ ಮಾಡದೇ ಹೊರಬೇಕಾಯಿತು. ಟೀಮ್ ಇಂಡಿಯಾ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸೋತಿತ್ತು. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು.

News First Live Kannada


Leave a Reply

Your email address will not be published. Required fields are marked *