ವಿಶ್ವಕಪ್​​ ತಂಡಕ್ಕೆ ಅಚ್ಚರಿ ಹೆಸರುಗಳ ಪ್ರವೇಶ.. ಇವತ್ತು ಅಥವಾ ನಾಳೆ ಭಾರತ ತಂಡ ಪ್ರಕಟ!

ಇಂಡಿಯನ್​ ಪ್ರೀಮಿಯರ್​ ಲೀಗ್​, ರೋಚಕದ ಘಟ್ಟ ತಲುಪಿದೆ. T20 ವಿಶ್ವಕಪ್​ಗೂ ತಂಡಗಳು ಭರದಿಂದ ಸಿದ್ಧತೆ ಮಾಡಿಕೊಳ್ತಿವೆ. ಇದೆಲ್ಲದರ ಜೊತೆಗೆ ಆಟಗಾರರ ಬದಲಾವಣೆ ಕುರಿತು ಚರ್ಚೆಗಳು, ಜೋರಾಗೇ ನಡೀತಿವೆ. ದಿನಕ್ಕೊಂದು ಆಟಗಾರರ ಹೆಸರು ಬೆಳಕಿಗೆ ಬರ್ತಿವೆ. ಆದರೀಗ ಮತ್ತೆ ಅಚ್ಚರಿಯ ಹೆಸರುಗಳು ಹೊರ ಬಿದ್ದಿವೆ.

YES​.! IPL​​​ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ, ಬಿಸಿಸಿಐ ಮಣೆ ಹಾಕ್ತಿದೆ ಎಂದು ವರದಿಯಾಗಿತ್ತು. ಶ್ರೇಯಸ್​ ಅಯ್ಯರ್​, ಶಿಖರ್​ ಧವನ್​, ರವಿ ಬಿಷ್ಣೋಯ್, ಋತುರಾಜ್​ ಗಾಯಕ್ವಾಡ್ ಸೇರಿ ಹಲವರನ್ನ ಸ್ವ್ಕಾಡ್​ಗೆ ಸೇರಿಸಲಾಗುತ್ತೆ ಎನ್ನಲಾಗಿತ್ತು. ಈ ವರದಿ ಕುರಿತು ರನ್​​ಭೂಮಿ ಕಾರ್ಯಕ್ರಮದಲ್ಲೂ ಪ್ರಸಾರ ಮಾಡಿದ್ವಿ. ಇದೀಗ ಬಿಸಿಸಿಐ ಮತ್ತು ಸೆಲೆಕ್ಷನ್​ ಕಮಿಟಿ ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನೆ ನಡೆಸಿದೆ.

ಸಂಜು ಸ್ಯಾಮ್ಸನ್, ವೆಂಕಟೇಶ್​ ಅಯ್ಯರ್​​ ಮೇಲೆ ಬಿಸಿಸಿಐ ಕಣ್ಣು.!
14ನೇ ಆವೃತ್ತಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ಸಂಜು ಸ್ಯಾಮ್ಸನ್, ನಾಯಕತ್ವ ಜವಾಬ್ದಾರಿ ಜೊತೆಗೆ ಬ್ಯಾಟಿಂಗ್​​​ನಲ್ಲೂ ಕಮಾಲ್​ ಮಾಡಿದ್ದಾರೆ. 14 ಪಂದ್ಯಗಳಲ್ಲಿ 484 ರನ್​ ಸಿಡಿಸಿದ ಸಂಜು ಮೇಲೆ ಇದೀಗ ಬಿಸಿಸಿಐ ಕಣ್ಣು ಬಿದ್ದಿದೆ. ಹಾಗೇ ದ್ವಿತಿಯಾರ್ಧದ IPL​ನಲ್ಲಿ ಗಮನ ಸೆಳೆದ KKR​ನ ವೆಂಕಟೇಶ್​ ಅಯ್ಯರ್​​ಗೆ, ಮಣೆ ಹಾಕೋದಕ್ಕೂ ಬಿಸಿಸಿಐ ಒಲವು ತೋರಿದೆ. ಬೌಲಿಂಗ್​​ನಲ್ಲೂ ಅಯ್ಯರ್​ ಮಾರಕ ದಾಳಿ ನಡೆಸಿದ್ದಾರೆ.

ಹರ್ಷಲ್​ ಎಂಟ್ರಿಗೆ – ಚಹಲ್ ರೀ ಎಂಟ್ರಿಗೆ ಸಿಗುತ್ತಾ ಚಾನ್ಸ್​.?
ಈ IPL​​​​ ಶುರುವಾದಾಗಿನಿಂದ ಇಲ್ಲಿಯವರೆಗೂ RCBಯ ಹರ್ಷಲ್​​ ಪಟೇಲ್​​, ಡೆತ್​ ಓವರ್​​ನಲ್ಲಿ ಮ್ಯಾಜಿಕ್​ ಮಾಡ್ತಿದ್ದಾರೆ. ಸ್ಲೋ ಯಾರ್ಕರ್​​ಗಳ ಮೂಲಕ ಬ್ಯಾಟ್ಸ್​​ಮನ್​ಗಳಿಗೆ ಕಂಟಕವಾಗಿರುವ ಹರ್ಷಲ್, ರೆಡ್​ ಆರ್ಮಿಯ ಗೆಲುವಿನ ರೂವಾರಿ.​ ಮೊದಲ ಹಂತದ IPL​​ನಲ್ಲಿ ನಡೆಯದ ಯುಜುವೇಂದ್ರ ಚಹಲ್​ರ ಆಟ, ಯುಎಇನಲ್ಲಿ ವಿಕೆಟ್​ ಬೇಟೆಯಾಡೋ ಮೂಲಕ ಸೆಲೆಕ್ಟರ್ಸ್​ಗೆ ಚಮಕ್​ ನೀಡಿದ್ದಾರೆ. ಹರ್ಷಲ್​​ 29 ವಿಕೆಟ್​ ಪಡೆದಿದ್ರೆ, ಚಹಲ್​ 15 ವಿಕೆಟ್​ ಕಬಳಿಸಿದ್ದಾರೆ. ಇದರಲ್ಲಿ 11 ವಿಕೆಟ್​ ಯುಎಇನಲ್ಲಿ ಪಡೆದಿರೋದು ಅನ್ನೋದು ವಿಶೇಷ.! ಇಬ್ಬರ ಆಯ್ಕೆ ಕುರಿತು ಮಾತುಕತೆ ನಡೆದಿದೆ ಎನ್ನಲಾಗ್ತಿದೆ.

ಆವೇಶ್​​-ಆರ್ಷ್​​ದೀಪ್​ ಮೇಲೂ ಇದೆ ಸೆಲೆಕ್ಟರ್ಸ್​ ಒಲವು.?
ಹೌದು.! ಯುವ ವೇಗಿಗಳಾದ ಡೆಲ್ಲಿ ಕ್ಯಾಪಿಟಲ್ಸ್​ನ ಆವೇಶ್​ ಖಾನ್​ ಮತ್ತು ಪಂಜಾಬ್​​ ಕಿಂಗ್ಸ್​ನ ಆರ್ಷ್​ದೀಪ್ ಸಿಂಗ್​​​​​ ಮೇಲೆ ಕೂಡ, ಸೆಲೆಕ್ಟರ್ಸ್​ ಒಲವು ಹೆಚ್ಚಾಗಿದೆ. ಆವೇಶ್​ ಡೆಲ್ಲಿ ತಂಡದ ಮ್ಯಾಚ್​ ವಿನ್ನರ್​​ ಆಗಿ ರೂಪುಗೊಂಡಿದ್ರೆ, ಆರ್ಷ್​ದೀಪ್​​ ಪಂಜಾಬ್​ನ ಗೇಮ್​ ಚೇಂಜರ್​ ಆಗಿ ಮಾರ್ಪಟ್ಟಿದ್ರು. ಆವೇಶ್​​​ ಖಾತೆಯಲ್ಲಿ 22 ವಿಕೆಟ್​ ಇದ್ರೆ, ಆರ್ಷ್​ದೀಪ್​​ 18 ವಿಕೆಟ್​ ಕಬಳಿಸಿದ್ದಾರೆ. ಹಾಗಾಗಿಯೇ ಇವರಿಬ್ಬರ ಮೇಲೆ ಸೆಲೆಕ್ಷನ್​ ಕಮಿಟಿ ಒಲವು ಹೆಚ್ಚಾಗಿದೆ.

ಇವತ್ತು ಅಥವಾ ನಾಳೆ, ಟೀಮ್​ ಇಂಡಿಯಾ ಹೊಸಬರ ಪಟ್ಟಿಯನ್ನ ಪ್ರಕಟಿಸುವ ಸಾಧ್ಯತೆ ಇದೆ. IPL​ನಲ್ಲಿ ಕಳಪೆಯಾಟವಾಡಿದ ಆಟಗಾರರಿಗೆ ಕೊಕ್​​ ನೀಡಿ, ಅಬ್ಬರಿಸಿದ ಆಟಗಾರರು ಇಲ್ಲಿ ಅವಕಾಶ ಗಿಟ್ಟಿಸಿಕೊಳ್ಳೋ ಸಾಧ್ಯತೆ ಇದೆ. ಸದ್ಯ ಈ ಆಟಗಾರರ ಪಟ್ಟಿಯೇನೋ ದೊಡ್ಡದಿದೆ. ಆದರೆ ಯಾರೆಲ್ಲಾ ಚಾನ್ಸ್​ ಗಿಟ್ಟಿಸಿಕೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.

News First Live Kannada

Leave a comment

Your email address will not be published. Required fields are marked *