ಟಿ20 ವಿಶ್ವಕಪ್ ಗೆಲುವಿನ ಕುರಿತು ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಮಾತನಾಡಿದರು. ಈ ವೇಳೆ ತಮ್ಮ ಗೆಲುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಭಾವ ಭಾರೀ ಬೀರಿತ್ತು ಎಂದರು.
ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಜೋಶ್ ಹೇಜಲ್ವುಡ್ ಆಡಿದ ಅನುಭವ ಬೌಲಿಂಗ್ ವಿಭಾಗಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿತು. ಎಷ್ಟು ಅಂತರದಲ್ಲಿ ಚೆಂಡನ್ನು ಎಸೆಯಬೇಕು. ಅಂತಿಮ ಓವರ್ಗಳಲ್ಲಿ ಯಾವ ರೀತಿ ಬೌಲ್ ಮಾಡಬೇಕು ಎಂದು ಜೋಶ್ ಹೇಜಲ್ವುಡ್ ಸಿಎಸ್ಕೆಯಿಂದಲೇ ಕಲಿತಿದ್ದು ಎಂದು ಹೇಳಿದರು.
ವಿಶ್ವಕಪ್ನ 7 ಪಂದ್ಯಗಳಲ್ಲಿ ಹೇಜಲ್ವುಡ್, 7.29 ಎಕಾನಮಿಯಲ್ಲಿ 11 ವಿಕೆಟ್ ಪಡೆದು ಮಿಂಚಿದ್ರು. ಅದರಲ್ಲೂ ಫೈನಲ್ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಜೋಶ್ ಹೇಜಲ್ವುಡ್ ಕೇವಲ 16 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದಿದ್ದರು.