ವಿಶ್ವಕಪ್ ಟ್ರೋಫಿ ಮೇಲೆ 16 ತಂಡಗಳ ಕಣ್ಣು.. ದಿಗ್ಗಜರ ಮೋರೆ ಹೋದ ತಂಡಗಳು..!

ಗುಂಪು ಹಂತದ ಪಂದ್ಯಗಳೊಂದಿಗೆ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಕಿದೆ. 16 ತಂಡಗಳ ಕಣ್ಣು ವಿಶ್ವಕಪ್​ ಮೇಲೆಯೇ ನೆಟ್ಟಿವೆ. ಶತಾಯ ಗತಯಾ ಕಪ್​ ಗೆಲ್ಲೋ ಲೆಕ್ಕಾಚಾರದಲ್ಲಿರೋ ಕ್ರಿಕೆಟ್​ ಬೋರ್ಡ್​ಗಳು, ಇದಕ್ಕಾಗಿ ವಿಶೇಷ ಹೆಜ್ಜೆಯನ್ನಿಟ್ಟಿವೆ. ಅದು ಯಾವ ರೀತಿ ಅಂತೀರಾ..?

ತಂಡದ ಬೆನ್ನೆಲುಬಾದ ಸಹಾಯಕ ಸಿಬ್ಬಂದಿಯ ಕೈ ಬಲಪಡಿಸಲು ಎಕ್ಸ್​ಪರ್ಟ್​​​ ಗೇಮ್ ರೀಡರ್​​​ಗಳನ್ನ ಎಲ್ಲ ತಂಡಗಳು ಬ್ಯಾಕ್ ಬೋನ್ ಆಗಿ ಆರಿಸಿಕೊಂಡಿದೆ. ಹೇಗೆ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾಕ್ಕೆ ಧೋನಿ ಬಲ ತುಂಬುತ್ತಾರೆ ಎನ್ನಲಾಗ್ತಿದ್ಯೋ ಹಾಗೇ ಇತರೆ ತಂಡಗಳು ಕೂಡ ದಿಗ್ಗಜ ಆಟಗಾರರ ಮೊರೆ ಹೋಗಿವೆ.

ಕಿವೀಸ್​ಗೆ ಸ್ಟೀಫನ್, ಲಂಕಾಗೆ ಜಯವರ್ಧನೆ ಶ್ರೀರಕ್ಷೆ..!
ಒಂದೆಡೆ ಟೀಮ್ ಇಂಡಿಯಾ ಪರ ಮೆಂಟರ್ ಆಗಿ ಕಾರ್ಯ ನಿರ್ವಹಿಸಲು ಧೋನಿ ಸಜ್ಜಾಗ್ತಿದ್ರೆ. ಮತ್ತೊಂದೆಡೆ ಸಿಎಸ್​ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ನ್ಯೂಜಿಲೆಂಡ್ ತಂಡ ಸೇರಿದ್ದಾರೆ. ಕೆಲ ದಿನಗಳ ಕಾಲ ಕೇನ್​ ಬಳಗದೊಂದಿಗೆ ಉಳಿಯಲಿರೋ ಫ್ಲೆಮಿಂಗ್​, ತಂಡಕ್ಕೆ ಸಹಾಯಕ್ಕೆ ನಿಂತಿದ್ದಾರೆ. ಅದ್ರಲ್ಲೂ ಭಾರತ-ನ್ಯೂಜಿಲೆಂಡ್ ಒಂದೇ ಗುಂಪಿನಲ್ಲಿರೋದ್ರಿಂದ ಧೋನಿಯ ತಂತ್ರಕ್ಕೆ ಪ್ರತಿತಂತ್ರವನ್ನೇ ಹೆಣೆಯೋ ಲೆಕ್ಕಚಾರದಲ್ಲಿದ್ದಾರೆ. ಇನ್ನೂ ಕಳಪೆ ಪ್ರದರ್ಶನದಿಂದ ಕೆಂಗಿಟ್ಟಿರುವ ಲಂಕಾಗೆ ಮುಂಬೈ ಇಂಡಿಯನ್ಸ್ ಕೋಚ್ ಜಯವರ್ಧನೆ, ಸಲಹೆಗಾರರಾಗಿದ್ದಾರೆ.

ಪಾಕ್​ ನೂತನ ಕೋಚ್​​ ಮ್ಯಾಥ್ಯೂ ಮುಂದೆ ಬಿಗ್ ಚಾಲೆಂಜ್..!
ನ್ಯೂಜಿಲೆಂಡ್, ಲಂಕಾಗೆ ತಮ್ಮದೇ ದೇಶದ ದಿಗ್ಗಜ ಕ್ರಿಕೆಟಿಗರು ನೆರವಿಗೆ ನಿಲ್ಲುತ್ತಿದ್ರೆ, ಪಾಕ್​ ಮಾತ್ರ ಸ್ವದೇಶದ ಹಂಗಾಮಿ ಕೋಚ್​ಗಳನ್ನೇ ತೆರವುಗೊಳಿಸಿ ವಿದೇಶಿ ಕೋಚ್​ಗಳಿಗೆ ಮಣೆಹಾಕಿದೆ. ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್​ಗೆ ಹೆಡ್ ಕೋಚ್​ ಪಟ್ಟ ಕಟ್ಟಿದ್ದರೆ, ಸೌತ್​ ಆಫ್ರಿಕಾದ ಮಾಜಿ ವೇಗಿ ವೆರ್ನಾನ್‌ ಫಿಲ್ಯಾಂಡರ್​ಗೆ ಬೌಲಿಂಗ್​ ಕೋಚ್​ ನೇಮಕಮಾಡಿದೆ. ಹೊಸದಾಗಿ ನೇಮಕಗೊಂಡಿರುವ ಈ ಇಬ್ಬರಿಗೆ ವಿಶ್ವಕಪ್​ ಜೊತೆಗೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯ ಗೆಲ್ಲೋದೆ ದೊಡ್ಡ ಸವಾಲ್ ಆಗಿ ಮಾರ್ಪಟ್ಟಿದೆ.
ಯುಎಇ ಕಂಡೀಷನ್ಸ್​ನಲ್ಲಿ ಅಪಾಯಕಾರಿಯಾಗಿ ಕಾಣ್ತಿರುವ ಅಫ್ಘಾನಿಸ್ಥಾನ ಕೂಡ, ಇದೇ ನಡೆ ಅನುಸರಿಸಿದೆ.

ಕಪ್ ಗೆಲ್ಲೋ ಪೇವರಿಟ್ ಆಗದಿದ್ದರೂ, ಅಸಾಧ್ಯವಲ್ಲ ಎಂಬುವುದನ್ನೂ ನಿರೂಪಿಸಲು ಇಂಗ್ಲೆಂಡ್​ ಮಾಜಿ ಕೋಚ್ ಆ್ಯಂಡಿ ಫ್ಲವರ್​ರನ್ನ ಸಲಹೆಗಾರರಾಗಿ, ಸೌತ್​ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್ ಹೆಡ್​ ಕೋಚ್​​ ಆಗಿ ನೇಮಕ ಮಾಡಿದೆ. ಇದಿಷ್ಟೇ ಅಲ್ಲದೆ, ಅಪಾಯಕಾರಿ ವೇಗಿ ಅಂತಾನೇ ಖ್ಯಾತಿ ಹೊಂದಿದ್ದ ​ಶಾನ್ ಟೈಟ್, ಬೌಲಿಂಗ್ ಕೋಚ್​ ನೆರವಾಗಲಿದ್ದಾರೆ. ಹೀಗೆ ಪ್ರತಿ ತಂಡಗಳು ವಿಶ್ವಕಪ್​ ಗೆಲ್ಲಲು ದಿಗ್ಗಜ ಆಟಗಾರರ ಮೊರೆ ಹೋಗಿದ್ದು, ಈ ಪೈಕಿ ಯಾರ ರಣತಂತ್ರ ಗೆಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

News First Live Kannada

Leave a comment

Your email address will not be published. Required fields are marked *