ವಿಶ್ವಕಪ್ ಸೋಲಿಗೆ ಕೊಹ್ಲಿ ಮಾತ್ರ ಕಾರಣರಲ್ಲ, ಯಾರೆಲ್ಲಾ ಹೊಣೆ ಹೊರಬೇಕು ಗೊತ್ತಾ..?


ವಿಶ್ವಕಪ್​ ಟೂರ್ನಿಯ ಸತತ 2 ಸೋಲುಗಳಿಗೆ ನಾಯಕ ವಿರಾಟ್​ ಕೊಹ್ಲಿಯೇ ಕಾರಣ ಎಂಬ ಮಾತುಗಳು ಕೇಳಿ ಬರ್ತಿವೆ. ಹಾಗಾದ್ರೆ, ತಂಡದ ಸೋಲಿಗೆ ನಾಯಕನೊಬ್ಬನೇ ಜವಾಬ್ದಾರನಾ? ಟೀಮ್​ ಮ್ಯಾನೇಜ್​ಮೆಂಟ್​ಗೆ ಇದಕ್ಕೆ ಸಂಬಂಧವೇ ಇಲ್ವಾ?

‘ಸೋಲಿಗೆ ಕೊಹ್ಲಿ ಮಾತ್ರ ಕಾರಣವಲ್ಲ’
‘ಈ ಸೋಲು ಭಾರತೀಯ ಅಭಿಮಾನಿಗಳಿಗೆ ಭಯಾನಕ ಹ್ಯಾಲೋವಿನ್​​ ಆಯ್ತು. ಆದ್ರೆ, ವಿರಾಟ್​​ ಕೊಹ್ಲಿ ಮಾತ್ರ ಟೀಕೆಗಳನ್ನ ಎದುರಿಸುತ್ತಿದ್ದಾರೆ. ಇಲ್ಲಿ ಇಡೀ ತಂಡದ ಆಟಗಾರರು ಹಾಗೂ ಕೋಚ್​ಗಳು ಸೋತಿದ್ದಾರೆ. ಕೇವಲ ಒಬ್ಬ ವ್ಯಕ್ತಿಯಲ್ಲ’
ಮೊಹಮದ್​ ಅಜರುದ್ದೀನ್​, ಮಾಜಿ ನಾಯಕ

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಲೀಗ್​​ನಲ್ಲೇ ಹೊರ ಬಿದ್ದಿದೆ. ಇದರ ಬೆನ್ನಲ್ಲೇ, ಸೋಲಿಗೆ ಕೊಹ್ಲಿ ಮಾತ್ರ ಕಾರಣ ಅನ್ನೋ ಅರ್ಥದಲ್ಲೂ ಮಾತುಗಳು ಕೇಳಿ ಬರ್ತಿವೆ. ಆ ಮಾತುಗಳಿಗೆ ಟೀಮ್​ ಇಂಡಿಯಾದ ಮಾಜಿ ನಾಯಕ ಅಜರುದ್ದೀನ್​ ಹೇಳಿರೋ ಮಾತಿಗಳಿವು. ಅಭ್ಯಾಸ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದ ಭಾರತ, ಸೂಪರ್​​ 12 ಹಂತದಲ್ಲಿ ಆಡಿದ 2 ಪಂದ್ಯಗಳಲ್ಲೂ ಸೋತಿರೋದು ನಿಜಕ್ಕೂ ಅನ್​ ಎಕ್ಸ್​​ಪೆಕ್ಟೆಬಲ್​. ಆದ್ರೆ, ಸೋಲಿಗೆ ನಾಯಕನೊಬ್ಬನೆ ಹೊಣೆ ಅನ್ನೋದು ಎಷ್ಟು ಸರಿ..?

ಮೆಂಟರ್​​ ಧೋನಿ, ಹೆಡ್​ ಕೋಚ್​​ ಶಾಸ್ತ್ರಿ ಪ್ಲಾನ್​ ಫ್ಲಾಫ್​..!
ಸೋಲು ಎಂದಿಗೂ ಪಾಠ ಅನ್ನೋ ಮಾತಿದೆ. ಆದ್ರೆ ಟೀಮ್​ ಇಂಡಿಯಾ ಪಾಲಿಗೆ ಅದು ಪಾಠವಾಗಲೇ ಇಲ್ಲ. ಪಾಕ್​ ವಿರುದ್ಧದ ಪಂದ್ಯದಲ್ಲಿ ಸೋಲುಂಡ ಮೇಲೂ 2ನೇ ಪಂದ್ಯದಲ್ಲಿ ಸಮರ್ಥ ಗೇಮ್​ಪ್ಲಾನ್​, ಸ್ಪಷ್ಟ ಸ್ಟಾರ್ಟಜಿ, ಕೊಹ್ಲಿ ಕ್ಯಾಂಪ್​ನಲ್ಲಿ ಇರಲೇ ಇಲ್ಲ. ಈ ವೈಫಲ್ಯದ ಜವಾಬ್ದಾರಿ ಮೆಂಟರ್​ MS​ ಧೋನಿ, ಹೆಡ್​ಕೋಚ್​ ರವಿಶಾಸ್ತ್ರಿಯದ್ದಲ್ಲವೇ..? ಎಂಬ ಪ್ರಶ್ನೆ ಶುರುವಾಗಿದೆ.

ಟೀಮ್​ ಇಂಡಿಯಾ ಬ್ಯಾಟಿಂಗ್​ ಕೋಚ್​ ಹೊಣೆಗಾರಿಕೆ ಏನು..?
ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯ ಸೋತಾಗಲೇ ಇಡೀ ಟೀಮ್​ ಇಂಡಿಯಾಗೆ ದುಬೈ ಪಿಚ್​ನ ಮರ್ಮ ತಿಳಿದಿತ್ತು. 2ನೇ ಪಂದ್ಯದಲ್ಲಿ ಮತ್ತೇ ಮೊದಲು ಬ್ಯಾಟಿಂಗ್​ ಮಾಡೋ ಅವಕಾಶ ಸಿಕ್ಕರೆ ಹೇಗೆ ಆಡಬೇಕು ಅನ್ನೋದರ ಬಗ್ಗೆ ಅಭ್ಯಾಸಕ್ಕೆ ಒಂದು ವಾರಗಳ ಅಂತರವೂ ಸಿಕ್ಕಿತ್ತು. ಆದ್ರೆ, ಪಾಕ್​ ವಿರುದ್ಧ ಮಾಡಿದ ತಪ್ಪುಗಳೇ ಕಿವೀಸ್​​ ವಿರುದ್ಧವೂ ಮರುಕಳಿಸಿದ್ವು. ಹೀಗಾಗಿಯೇ ಈಗ ಬ್ಯಾಟಿಂಗ್​ ಕೋಚ್ ವಿಕ್ರಮ್​ ರಾಥೋರ್​​​ ಸಿಕ್ಕ ಅವಕಾಶದಲ್ಲಿ ಮಿಸ್ಟೇಕ್ಸ್​ ಮೇಲೆ ವರ್ಕೌಟ್​ ಮಾಡಲಿಲ್ವಾ ಎಂಬ ಪ್ರಶ್ನೆ ಹುಟ್ಟಿದೆ.

ಬೌಲಿಂಗ್​ ಕೋಚ್​​ ಭರತ್​ ಅರುಣ್​ ಮಾಡಿದ್ದೇನು..?
ಕೇವಲ ಬ್ಯಾಟಿಂಗ್​ ಕೋಚ್​ ಮಾತ್ರವಲ್ಲ, ಬೌಲಿಂಗ್​ ಕೋಚ್​ ಭರತ್​ ಅರುಣ್​ ಕಾರ್ಯಕ್ಷಮತೆಯ ಬಗ್ಗೆಯೂ ಪ್ರಶ್ನೆ ಹುಟ್ಟಿದೆ. ಆಡಿದ 2 ಪಂದ್ಯಗಳಲ್ಲಿ ಭಾರತೀಯ ಬೌಲರ್​​ಗಳು ಕೇವಲ 2 ವಿಕೆಟ್ ಕಬಳಿಸಿರೋದೆ ಈ ಪ್ರಶ್ನೆಯ ಮೂಲವಾಗಿದೆ​​. ಡ್ಯೂ ಫ್ಯಾಕ್ಟರ್​​ ಇರುತ್ತೇ ಅನ್ನೋದನ್ನ ಅರಿತಿದ್ದು, ಭರತ್​ ಅರುಣ್ ಅದಕ್ಕೆ ಯೋಜನೆಗಳನ್ನ ರೂಪಿಸಲಿಲ್ವಾ? ಅನ್ನೋದು ಕೂಡ ಎಲ್ಲರ ಪ್ರಶ್ನೆಯಾಗಿದೆ.

News First Live Kannada


Leave a Reply

Your email address will not be published. Required fields are marked *