ನವದೆಹಲಿ: ಕೊರೊನಾ ಎರಡನೇ ಅಲೆಯ ಕಾರಣದಿಂದ ಭಾರತ ಸಂಕಷ್ಟಕ್ಕೆ ಒಳಗಾಗಿದೆ. ಈ ಸಂದರ್ಭದಲ್ಲಿ ಹಲವು ದೇಶಗಳು ಭಾರತದ ನೆರವಿಗೆ ಆಗಮಿಸಿ ಅಗತ್ಯ ವೈದ್ಯಕೀಯ ಸಲಕರಣೆ, ಆಕ್ಸಿಜನ್​ ನೀಡೋದಾಗಿ ಹೇಳುತ್ತಿವೆ. ಈ ನಡುವೆ ಟಿಎಂಸಿ ನಾಯಕ ಯಶವಂತ್ ಸಿನ್ಹಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಟ್ವಿಟರ್​​ನಲ್ಲಿ ತಮ್ಮ ಅಸಮಾಧಾನ ಹೊರಹಾಕಿರುವ ಸಿನ್ಹಾ, ವಿಶ್ವಗುರುನಿಂದ ವಿಶ್ವದ ಭಿಕ್ಷುಕರಾಗಿದ್ದೇವೆ. ಇಡೀ ವಿಶ್ವಕ್ಕೆ ಲಸಿಕೆ ಪೂರೈಕೆ ಮಾಡುತ್ತಿದ್ದ ನಾವು ಈಗ ಮೆಡಿಕಲ್​ ಹೆಲ್ಫ್ ನೀಡುವಂತೆ ಬೇಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಈ ನಡುವೆ ಹಲವು ದೇಶಗಳು ಭಾರತ ನೆರವಿಗೆ ಮುಂದಾಗಿದ್ದು, ಯುಕೆ, ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್​​ ಸೇರಿದಂತೆ ಹಲವು ದೇಶಗಳು ನೆರವು ನೀಡುವುದಾಗಿ ಹೇಳಿದೆ. ಭಾರತ ಮೊದಲ ಕೋವಿಡ್​ ಶಿಪ್​​ಮೆಂಟ್​​ಅನ್ನು ಯುಕೆಯಿಂದ ಪಡೆದುಕೊಂಡಿದ್ದು, 100 ವೆಂಟಿಲೇಟರ್​, 95 ಆಕ್ಸಿಜನ್​ ಕಾನ್ಸನ್ಟ್ರೇಟೋರ್ಸ್​ಗಳನ್ನು ಕಳುಹಿಸಿಕೊಟ್ಟಿದೆ. ವಿಶೇಷ ಅಂದ್ರೆ ಕಳೆದ ವರ್ಷ ಅಮೆರಿಕಾಕ್ಕೆ ಅಗತ್ಯ ಬಿದ್ದಾಗ ಭಾರತ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮಾತ್ರೆ ಸೇರಿದಂತೆ ಹಲವು ಔಷಧಿ ಮತ್ತು ವೈದ್ಯಕೀಯ ಪರಿಕರಗಳನ್ನು ಕಳಿಸಿಕೊಟ್ಟಿತ್ತು. ಅಷ್ಟೇ ಅಲ್ಲ ವ್ಯಾಕ್ಸಿನ್ ಮೈತ್ರಿ ಹೆಸರಲ್ಲಿ ಹಲವು ದೇಶಗಳಿಗೆ ವ್ಯಾಕ್ಸಿನ್ ಅನ್ನು ಕೂಡ ಭಾರತ ನೀಡಿತ್ತು. ಈಗ ಭಾರತಕ್ಕೆ ಅವಶ್ಯಕತೆ ಬಿದ್ದ ಹಿನ್ನೆಲೆಯಲ್ಲಿ ಹಲವು ದೇಶಗಳು ಸಹಾಯ ಮಾಡುತ್ತಿವೆ.

ಇನ್ನು ದೇಶದಲ್ಲಿ ಇಂದು 3,23,144 ಕೊರೊನಾ ಪಾಸಿಟವ್ ಪ್ರಕರಣಗಳು ಇಂದು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1,76,,36,307ಕ್ಕೇರಿದೆ. ಕೊರೊನಾ ಸೋಂಕಿತ ಚೇತರಿಕೆಯ ಪ್ರಮಾಣ ಶೇ.82.54 ರಷ್ಟಿದ್ದು, ಸಾವಿನ ಸಂಖ್ಯೆ 1,97,894ಕ್ಕೇರಿದೆ.

The post ‘ವಿಶ್ವಗುರು’ವಿನಿಂದ ವಿಶ್ವದ ಬೆಗ್ಗರ್ಸ್​​ ಆಗಿದ್ದೇವೆ- ಯಶವಂತ್ ಸಿನ್ಹಾ ಕಿಡಿ appeared first on News First Kannada.

Source: newsfirstlive.com

Source link