ವರ್ಷಕ್ಕೊಮ್ಮೆ ಬರೋದು ಮಾವಿನ ಸೀಸನ್. ಈ ಸೀಸನ್ ಬಂದರೆ ಮಾರ್ಕೆಟ್​​ನ ಗಲ್ಲಿ ಗಲ್ಲಿ ಗಾಡಿಗಳಲ್ಲಿ, ಎಲ್ಲಿ ನೋಡಿದರೂ ಅಲ್ಲಲ್ಲಿ ಅಂದ ಚಂದದ, ರುಚಿಭರಿತವಾದ ಮಾವಿನ ಹಣ್ಣೆ ಕಾಣಿಸೋದು. ಸೀಸನ್ ಅಂದ ಮೇಲೆ ಅದರ ಬೆಲೆ ಸಹ ಅಷ್ಟೆ ಹೆಚ್ಚಾಗಿರುತ್ತೆ. ಹಾಗಾದ್ರೆ ಎಷ್ಟು ಖರ್ಚ್ ಮಾಡಿ ನೀವು ಮಾವು ತಿಂದಿದ್ದಿರಾ? ನೂರು, ಇನ್ನೂರು ? ಲಕ್ಷಾ ? ಲಕ್ಷ ರೂಪಾಯಿ ಮಾವಿನ ರುಚಿ ನೋಡಿದ್ದೀರಾ ? ಹಾಗೊಂದು ಮಾವು ಮಧ್ಯಪ್ರದೇಶದ ಭೂಪಾಲ್ ನಲ್ಲಿ ಮಾರಾಟವಾಗ್ತಾ ಇದೆ.

ಮಾವು ಯಾರಿಗೆ ಇಷ್ಟ ಇಲ್ಲ ಹೇಳಿ? ಹಣ್ಣುಗಳ ರಾಜ ಅನ್ನೋ ಹೆಸರಿನ ಜೊತೆ ವರ್ಷಕ್ಕೊಮ್ಮೆ ಬಂದು ಎಲ್ಲರಿಗು ತನ್ನ ರುಚಿಯನ್ನು ತೋರಿಸ್ತಾನೆ. ಮಾವಿನ ಹಣ್ಣಿನ ಸೀಸನ್ ಬಂತು ಅಂದ್ರೆ ಮನೆ ಮನೆಯಲ್ಲಿ ಬಾಯ್ ಚಪ್ಪರಿಸಿ ತಿಂತೀವಿ. ಮಾರುಕಟ್ಟೆಯಲ್ಲಿ ಎಲ್ಲಡೆ ಇದೆ ಮಾವಿನ ಹಣ್ಣಿನದ್ದೆ ಹವ. ಈ ಸೀಸನ್ ನಲ್ಲಿ ಮಾವಿನ ಬೆಳೆಗಾರರಿಗೆ ಹಬ್ಬವೋ ಹಬ್ಬ. ಮಾವಿನ ಸೀಸನ್ ಬರುತ್ತಿದ್ದಂತೆ ಥರಾವರಿ ಮಾವಿನ ತಳಿಗಳ ಹೆಸರು ಎಲ್ಲೆಲ್ಲೂ ಚಾಲ್ತಿಯಲ್ಲಿರುತ್ತವೆ. ತೋತಾಪುರಿ, ರಸಪುರಿ, ಮಲ್ಲಿಕಾ, ಬಾದಾಮಿ, ನೀಲಂ, ಕೇಸರಿ, ಮಲ್ಗೊವಾ ಒಂದಾ ಎರಡಾ ಈ ಮಾವಿನ ತಳಿ. ಎಲ್ಲವೂ ತನ್ನದೆಯಾದ ರುಚಿ ತಕ್ಕಂತೆ ಬೆಲೆ ಹೊಂದಿರುತ್ತೆ. ಹಾಗೆಯೇ ಕೆಲವು ತಳಿ ಕೇವಲ ದುಬಾರಿ ಬೆಲೆಯಿಂದಲೇ ಸುದ್ದಿಯಲ್ಲಿರುತ್ತವೆ.

ವಿಶ್ವದಲ್ಲೆ ಅತೀ ದುಬಾರಿ ಈ ಮಾವಿನ ಹಣ್ಣು
ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ಅಪರೂಪದ ತಳಿ

ವಿಶ್ವದ ಅತೀ ದುಬಾರಿ ಮಾವಿನ ಕಾಯಿಗಳನ್ನು ಮಧ್ಯ ಪ್ರದೇಶದ ಭೂಪಾಲ್​ನ ದಂಪತಿಯೋರ್ವರು ಬೆಳೆದು ದೇಶದ ಗಮನ ಸೆಳೆದಿದ್ದಾರೆ. ಇದು ವಿಶೇಷ ಜಾತಿಯ ತಳಿ. ಜಪಾನ್ ದೇಶದಲ್ಲಿ ಬೆಳೆಯುವ ಈ ತಳಿ ವಿಶ್ವದಲ್ಲೇ ಅತಿ ವಿರಳ. ಈ ತಳಿಯ ಮಾವಿನ ಹೆಸರು ಮಿಯಾಜಾಕಿ. ಹೆಸರು ವಿಚಿತ್ರವಾಗಿದ್ರೂ ಇದು ಜಪಾನ್ ದೇಶದಲ್ಲಿ ಸಿಕ್ಕಪಟ್ಟೆ ಫೇಮಸ್. ಈ ತಳಿಯನ್ನು ಅವರ ಅರಿವಿಲ್ಲದೇ ತಮ್ಮ ತೋಟದಲ್ಲಿ ಬೆಳೆದು ಇದೀಗ ಶ್ರೀಮಂತ ಮಾವು ಬೆಳೆಗಾರರಾಗಿದ್ದಾರೆ. ಭಾರತಕ್ಕೆ ಈ ತಳಿ ಹೊಸ ಪರಿಚಯವಾದ್ರು ಇದರ ಬೆಲೆ ಮಾತ್ರ, ಎಲ್ಲ ಹಣ್ಣುಗಳಿಗಿಂತ ದುಬಾರಿ. ಇಂತ ತಳಿ ಮಾವಿನ ಹಣ್ಣುನ್ನು ಬೆಳೆದು ಭೂಪಾಲ್ ನಲ್ಲಿ ಇದೀಗ ವಿಶ್ವದೆಲ್ಲಡೆ ಈ ತಳಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಒಂದು ಕೆ.ಜಿ ಮಾವಿನ ಹಣ್ಣಿಗೆ ಬರೋಬರಿ 2.70 ಲಕ್ಷ
ಎರಡು ಸಸಿ ನೆಟ್ಟದ್ದ ದಂಪತಿ, ಇದೀಗ ತೋಟದ ಮಾಲೀಕರು

ಮಿಯಾಜಾಕಿ ಮೂಲತಃ ಜಪಾನ ಮೂಲದ ಮಾವಿನ ತಳಿ. ಭಾರತದಲ್ಲಿ ಈ ಹಣ್ಣಿನ್ನು ‘ಸೂರ್ಯನ ಮೊಟ್ಟೆ’ ಎಂದು ಕರೆಯುತ್ತಾರೆ. ಮೊದಲೆ ಹೇಳಿದಂತೆ ಇದು ವಿರಳ ಹಾಗೂ ಅತೀ ದುಬಾರಿ ಮಾವು. ಕಳೆದ ವರ್ಷ ಈ ಹಣ್ಣು ವಿಶ್ವದ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಹಣ್ಣಿಗೆ ಏಕಿಷ್ಟು ದುಬಾರಿ ಬೆಲೆ ಎಂಬುದರ ಕುರಿತು ಸೂಕ್ತ ಉಲ್ಲೇಖಗಳಿಲ್ಲ. ಉತ್ಪಾದನೆ ಕಡಿಮೆ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಇದು ಎಲ್ಲ ಮಾವಿಗಿಂತ ಭಿನ್ನವಾಗಿದ್ದು, ಏಷ್ಯಾದ ಕೆಲವೇ ಕೆಲವು ದೇಶಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ.

Image

ಮಿಯಾಜಾಕಿಯಲ್ಲಿ ಬೆಳೆದ ಈ ಹಣ್ಣನ್ನು ಜಪಾನ್‌ನೆಲ್ಲೆಡೆ ಸರಬರಾಜು ಮಾಡಲಾಗುತ್ತದೆ. ಸಂಕಲ್ಪ ಹಾಗೂ ರಾಣಿ ಪರಿಹಾರ್ ದಂಪತಿ ತಮ್ಮ ತೋಟದಲ್ಲಿ ಮಿಯಾಜಾಕಿ ತಳಿಯ ಅಪರೂಪದ ಮಾವಿನ ಕಾಯಿ ಬೆಳೆದಿದ್ದಾರೆ. ಇವರು ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ತೋಟದಲ್ಲಿ ಎರಡು ಸಸಿಗಳನ್ನು ನೆಟ್ಟಿದ್ದರು. ಅವುಗಳು ಇದೀಗ ಫಲ ಕೊಡುತ್ತಿದ್ದು, ಒಂದು ಹಣ್ಣಿಗೆ 2000 ರೂಪಾಯಿಗೆ ಮಾರಟವನ್ನು ಮಾಡುತ್ತಿದ್ದಾರೆ.

ದುಬಾರಿ ಹಣ್ಣಿನ ಮೇಲೆ ಬಿದ್ದಿದೆ ಮಾವುಗಳ್ಳರ ಕಣ್ಣು
ಹಣ್ಣಿನ ಕಾವಲಿಗೆ ನಾಯಿ ಹಾಗೂ 6 ಜನ ಕಾವಲುಗಾರರು

ಮಾವು ಕಂದರೆ ಸಾಕು ಅದನ್ನು ಹೇಗಾದರು ಮಾಡಿ ತಮ್ಮದಾಗಿಸಿಕೊಳ್ಳಲು ಯೋಚಿಸುವಾಗ, ಈ ವಿಶೇಷವಾದ ಮಾವು ಕಂಡರೆ, ಯಾರು ಸುಮ್ನೆ ಬಿಡ್ತಾರೆ ಹೇಳಿ. ಕಳೆದ ವರ್ಷ ಇದೆ ತೋಟದಲ್ಲಿ ನೋಡಲು ಆಕರ್ಶಿತವಾದ ಮಾವು ಚಿಗುರಿದಾಗ ಅಲ್ಲಿನ ಸ್ಥಳಿಯತು ತೋಟಕ್ಕೆ ನುಗ್ಗಿ ಈ ಮಾವಿನ ಕಾಯಿ ಕಳ್ಳತನ ಮಾಡಿದ್ದರಂತೆ. ಆದ್ದರಿಂದ ಈ ಬಾರಿ ದಂಪತಿಗಳು ಮಾವಿನ ತೋಟಕ್ಕೆ ಕಾವಲುಗಾರರನ್ನು ನೇಮಿಸಿದ್ದರೆ. ಅಲ್ಲದೆ ತೋಟವನ್ನು ಕಾಯಲು 2 ನಾಯಿಗಳನ್ನು ವಿಹರಿಸಲು ಬಿಟ್ಟು, ಮಾವಿನ ಹಣ್ಣನ್ನು ಕಾಪಾಡುತ್ತಿದ್ದಾರೆ.

Image

ಇನ್ನು ದಂಪತಿಗಳಿಗೆ ತಾವು ಹೇಳಿದ ಬೆಲೆಗೆ ಈ ಕಾಯಿಗಳನ್ನು ಕೊಂಡುಕೊಳ್ಳಲು ಹಲವರು ಮುಂದೆ ಬರುತ್ತಿದ್ದರು. ಇವರು ಈ ಹಣ್ಣುಗಳಿಂದ ಮತ್ತಷ್ಟು ಸಸಿಗಳನ್ನು ಮಾಡುವ ಉದ್ದೇಶದಿಂದ ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎನ್ನುತ್ತಿದ್ದಾರೆ

ರೈಲಿನಲ್ಲಿ ಪ್ರಯಣಿಸುವಾಗ, ದಂಪತಿಗೆ ಸಿಕ್ಕ ಸಸಿ
ತಳಿಯ ಬಗ್ಗೆ ತಿಳಿಯದೆ, ದಿಮಿನಿ ಎಂದು ನಾಮಕರಣ

ರೈತ ಸಂಕಲ್ಪ ಅವರು ಚೆನ್ನೈನಿಂದ ರೈಲಿನಲ್ಲಿ ಬರುವಾಗ ವ್ಯಕ್ತಿಯೊಬ್ಬರು ಈ ಮಾವಿನ ಗಿಡ ದಂಪತಿಗೆ ಕೊಟ್ಟಿದ್ದಾರೆ. ಯಾವ ತಳಿಯ ಮಾವು ಎನ್ನುವ ಸಣ್ಣ ಮಾಹಿತಿ ಇಲ್ಲದೆ ಈ ಮಾವಿನ ಸಸಿಗಳನ್ನು ತಂದು ತಮ್ಮ ಹೊಲದಲ್ಲಿ ನೆಟ್ಟಿದ್ದಾರೆ. ಮೊದಲಿಗೆ ಈ ಮಾವಿನ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಕಳೆದ ವರ್ಷ ಗಿಡದಲ್ಲಿ ಕಾಯಿ ಬಿಟ್ಟಾಗ ಆಶ್ಚರ್ಯಪಟ್ಟಿದ್ದರು. ಈ ವಿಭಿನ್ನ ತಳಿಯ ಮಾವಿನ ಕಾಯಿಯ ಹೆಸರು ಕೂಡ ಗೊತ್ತಿರಲಿಲ್ಲ. ತಾವೇ ದಿಮಿನಿ ಎಂದು ನಾಮಕರಣ ಸಹ ಮಾಡಿದ್ದರು. ನಂತರ ಈ ಬಗ್ಗೆ ಸಂಶೋಧನೆ ನಡೆಸಿ ಇದರ ನಿಜವಾದ ಹೆಸರು ಕಂಡುಕೊಂಡರು. ಈ ಬಗ್ಗೆ ಮಾತನಾಡುವ ಸಂಕಲ್ಪ, ಮೊದಲಿಗೆ ಈ ಮಾವಿನ ಬಗ್ಗೆ ಗೊತ್ತಿರಲಿಲ್ಲ. ಆದರೆ, ಇದೀಗ ಇದು ಅಪರೂಪದ ತಳಿ ಎಂದು ಗೊತ್ತಾಗಿದೆ ಎಂದು ಸಂತಸ ಸೂಚಿಸಿದ್ದಾರೆ.

ಈ ಮಾವಿನ ಹಣ್ಣಿನಲ್ಲಿ ವಿಶೇಷ ಆರೋಗ್ಯಕರ ಅಂಶಗಳಿವೆ
ವಿಶೇಷ ಬಣ್ಣದಿಂದ ಕಣ್ಣು ಸೆಳೆಯುವ ಮಿಯಾಜಾಕಿ ಹಣ್ಣು

ಈ ಹಣ್ಣು ಬೆಳೆಗಾರರಿಲ್ಲದ ಕಾರಣ ದುಬಾರಿ ಆಗಿರಬಹುದು. ಆದರೆ ಈ ತಳಿಯಲ್ಲಿ ಆರೋಗ್ಯಕರವಾದ ಅಂಶಗಳು ಸಾಕಷ್ಟು ಇದೆ ಎಂದು ಮಧ್ಯಪ್ರದೇಶ ತೋಟಗಾರಿಕೆ ವಿಭಾಗದ ಜಂಟಿ ನಿರ್ದೇಶಕರು ಹೇಳಿದ್ದಾರೆ. ಈ ಮಾವಿನ ತಳಿಯಲ್ಲಿ ಆ್ಂಟಿಆಕ್ಸಿಡಂಟ್‌ಗಳು ಅತಿ ಹೆಚ್ಚಾಗಿದೆ. ಬೀಟಾ ಕೆರೋಟಿನ್, ಫೋಲಿಕ್ ಆಸಿಡ್ ಸಹ ಹೆಚ್ಚಿದ್ದು, ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ.

ದೃಷ್ಟಿ ಮಂದವಾಗುತ್ತಿರುವವರಿಗೂ ಈ ಹಣ್ಣು ಸಹಾಯಕವಾಗುತ್ತದೆ. ಅಲ್ಲದೆ ತನ್ನ ಭಿನ್ನ ನೋಟ ಹಾಗೂ ವಿಶಿಷ್ಟ ನೇರಳೆ ಬಣ್ಣದಿಂದ ಬೇರೆ ಮಾವಿಗಿಂತ ಈ ಮಾವು ಆಕರ್ಷಿತವಾಗಿ ಕಾಣುತ್ತದೆ. ಜಪಾನ್‌ನಲ್ಲಿ ಇದು ಸ್ಥಳೀಯ ಹಣ್ಣಿನ ತಳಿಯಾಗಿದ್ದು ಸಾಮಾನ್ಯವಾಗಿ ಏಪ್ರಿಲ್‌ನಿಂದ ಆಗಸ್ಟ್‌ನಲ್ಲಿ ಈ ಮಾವನ್ನು ಬೆಳೆಯಲಾಗುತ್ತದೆ.

ವಿಶೇಷವಾದ ಈ ಹಣ್ಣಿಗೆ 80 ದಶಕದ ಇತಿಹಾಸ
ಈ ತಳಿಯ ಒಂದು ಮಾವಿನ ಹಣ್ಣು 350 ಗ್ರಾಂ

70-80ರ ದಶಕದಲ್ಲಿ ಈ ಮಿಯಾಜಾಕಿ ಹಣ್ಣನ್ನು ಜಪಾನ್‌ನಲ್ಲಿ ಸ್ಥಳೀಯವಾಗಿ ಬೆಳೆಯಲು ಆರಂಭಿಸಲಾಯಿತು. ಬೆಚ್ಚನೆಯ ವಾತಾವರಣ, ಸೂರ್ಯನ ಬೆಳಕು, ಆಗಾಗ್ಗೆ ಬೀಳುವ ಮಳೆ ಈ ಮಾವಿಗೆ ಪೂರಕ ವಾತಾವರಣ ಸೃಷ್ಟಿಸಿತ್ತು. ಇದೀಗ ಹೆಚ್ಚಿನ ಮಟ್ಟದಲ್ಲಿ ಈ ಮಾವನ್ನು ಬೆಳೆಯಲಾಗುತ್ತಿದೆ. ಈ ಮಾವಿಗೆ ಜಪಾನ್ ನಲ್ಲಿ ಒಳ್ಳೆಯ ಮೌಲ್ಯವಿದೆ. ಈಗಲೂ ಈ ಮಾವಿನ ಹಣ್ಣನ್ನು ಉಡುಗೊರೆ ರೂಪದಲ್ಲಿ ಜಪಾನೀಯರು ನೀಡುತ್ತಿರುತ್ತಾರೆ. ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಕರೆಸಿಕೊಂಡಿರುವ ಈ ತಳಿಯ ಒಂದು ಮಾವು 350 ಗ್ರಾಂವರೆಗೂ ಬೆಳೆಯಬಲ್ಲದು ಎನ್ನುವುದು ಇಲ್ಲಿಯವರೆಗಿನ ಮಾಹಿತಿ.

Image

ಹಣ್ಣುಗಳ ರಾಜ ಎಂದೆ ಪ್ರಖ್ಯಾತವಾಗಿರುವ ಮಾವಿನ ಹಣ್ಣಿನ ಮಿಯಾಜಾಕಿ ತಳಿಗೆ ಈ ಮಟ್ಟಿಗಿನ ಡಿಮ್ಯಾಂಡ್ ಇದೆ ಅನ್ನೊದು ಆ ದಂಪತಿಗೆ ಗೊತ್ತೆ ಇರಲಿಲ್ಲ. ಆದರೆ ಇದೀಗ ತಮ್ಮದೆ ತೋಟದಲ್ಲಿ ಈ ದುಬಾರಿ ಬೆಳೆಯನ್ನು ಕಾಪಾಡಿಕೊಳ್ಳೋದೆ ದಂಪತಿ ಎದುರಿನ ದೊಡ್ಡ ಸವಾಲಾಗಿದೆ.

The post ವಿಶ್ವದಲ್ಲೆ ಅತೀ ದುಬಾರಿ ಈ ಮಾವಿನ ಹಣ್ಣು.. ಕೆಜಿಗೆ 2.70 ಲಕ್ಷ ಅಂದ್ರೆ ನೀವು ನಂಬಲೇಬೇಕು  appeared first on News First Kannada.

Source: newsfirstlive.com

Source link