ವಿಶ್ವದ ನಂ.1 ಟೆಸ್ಟ್ ಆಲ್ ರೌಂಡರ್ ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಸಾರ್ವಕಾಲಿಕ ಟೆಸ್ಟ್ ಇಲೆವೆನ್ ಪ್ರಕಟಿಸಿದ್ದಾರೆ. ಈ ಸಂಬಂಧ ಮಾತಾಡಿದ ಹೋಲ್ಡರ್, ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ಆರಂಭಿಕ ಆಟಗಾರರು ಎಂದರು.
ಇನ್ನು, ಮಧ್ಯಮ ಕ್ರಮಾಂಕದಲ್ಲಿ ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್ ಮತ್ತು ಸರ್ ಗಾರ್ಫೀಲ್ಡ್ ಸೋಬರ್ಸ್, ವಿಕೆಟ್ ಕೀಪರ್ ಆಗಿ ಆ್ಯಡಂ ಗಿಲ್ಕ್ರಿಸ್ಟ್, ಸ್ಪಿನ್ನರ್ ಆಗಿ ಶೇನ್ ವಾರ್ನ್ ಆಯ್ಕೆ ಮಾಡಿದ್ದಾರೆ ಹೋಲ್ಡರ್.
ಕರ್ಟ್ಲಿ ಆಂಬ್ರೋಸ್, ಮಾಲ್ಕಮ್ ಮಾರ್ಷಲ್ ಮತ್ತು ವಾಸಿಮ್ ಅಕ್ರಮ್ ಅವರನ್ನು ವೇಗಿಗಳಾಗಿ ಆಯ್ಕೆ ಮಾಡಿದ್ದಾರೆ. ಎಲ್ಲರ ಬಗ್ಗೆಯೂ ಮಾತಾಡಿದ ಹೋಲ್ಡರ್, ರಾಹುಲ್ ದ್ರಾವಿಡ್ ಮತ್ತು ಸಚಿನ್ ಬಗ್ಗೆ ಮಾತ್ರ ಎಲ್ಲಿಯೂ ಉಲ್ಲೇಖ ಮಾಡಿಲ್ಲ.
ಜೇಸನ್ ಹೋಲ್ಡರ್ ಸಾರ್ವಕಾಲಿಕ ಟೆಸ್ಟ್ XI ಹೀಗಿದೆ:
- ವೀರೇಂದ್ರ ಸೆಹ್ವಾಗ್
- ಕ್ರಿಸ್ ಗೇಲ್
- ರಿಕಿ ಪಾಂಟಿಂಗ್
- ಬ್ರಿಯಾನ್ ಲಾರಾ
- ವಿವ್ ರಿಚರ್ಡ್ಸ್
- ಗಾರ್ಫೀಲ್ಡ್ ಸೋಬರ್ಸ್
- ಆ್ಯಡಂ ಗಿಲ್ಕ್ರಿಸ್ಟ್ (ವಿಕೆಟ್ ಕೀಪರ್)
- ಶೇನ್ ವಾರ್ನ್
- ಕರ್ಟ್ಲಿ ಆಂಬ್ರೋಸ್
- ಮಾಲ್ಕಮ್ ಮಾರ್ಷಲ್
- ವಾಸಿಮ್ ಅಕ್ರಮ್