ವಿಶ್ವದ ಹಿರಿಯ ಮಹಿಳಾ ಟೆಸ್ಟ್ ಕ್ರಿಕೆಟ್ ಆಟಗಾರ್ತಿಯಾಗಿದ್ದ ಐಲೀನ್ ಆಶ್ ನಿಧನರಾಗಿದ್ದಾರೆ. ತಮ್ಮ 110 ನೇ ವಯಸ್ಸಿನಲ್ಲಿ ಐಲೀನ್ ಆಶ್ ಇಹಲೋಕ ತ್ಯಜಿಸಿದ್ದಾರೆ.
ಐಲೀನ್ ಅವರು 1930 ಮತ್ತು 1940 ರ ದಶಕಗಳಲ್ಲಿ ಇಂಗ್ಲೆಂಡ್ಗಾಗಿ 7 ಟೆಸ್ಟ್ಗಳನ್ನು ಆಡಿದ್ದಾರೆ. ಬಲಗೈ ವೇಗದ ಬೌಲಿಂಗ್ ನೊಂದಿಗೆ 23 ರ ಸರಾಸರಿಯಲ್ಲಿ 10 ವಿಕೆಟ್ ಪಡೆದು ಸಾಧನೆ ಮಾಡಿದ್ರು. 1949ರಲ್ಲಿ ಆಸೀಸ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಶ್ ಭಾಗವಹಿಸಿದ್ದರು.
ಜೊತೆಗೆ ಮಹಿಳೆಯರ ಸಿವಿಲ್ ಸರ್ವಿಸ್, ಮಿಡ್ಲ್ಸೆಕ್ಸ್ ಮಹಿಳೆಯರು ಮತ್ತು ದಕ್ಷಿಣ ಮಹಿಳೆಯರ ದೇಶಿಯ ಕ್ರಿಕೆಟ್ನಲ್ಲೂ ಐಲೀನ್ ಆಶ್ ಮಿಂಚಿದ್ರು.