ವಿಶ್ವದ 13 ದೇಶಗಳ ನಾಯಕರ ಪೈಕಿ ಮೋದಿ ನಂಬರ್ 1

ವಿಶ್ವದ 13 ದೇಶಗಳ ನಾಯಕರ ಪೈಕಿ ಮೋದಿ ನಂಬರ್ 1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಶ್ವದ 13 ದೇಶಗಳ ನಾಯಕರ ಪೈಕಿ ನಂಬರ್ ಒನ್ ಸ್ಥಾನವನ್ನ ಪಡೆದಿದ್ದಾರೆ. ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಡೇಟಾ ಇಂಟೆಲಿಜೆನ್ಸ್​ ಸಂಸ್ಥೆ ಈ ರೇಟಿಂಗ್ ನೀಡಿದೆ.

ಈ ಸಂಸ್ಥೆ ಪ್ರತಿ ವರ್ಷ ವಿಶ್ವದ ಹಲವಾರು ದೇಶಗಳ ಚುನಾಯಿತ ಪ್ರತಿನಿಧಿಗಳ ರೇಟಿಂಗ್ ಕಲೆಹಾಕುತ್ತದೆ. ಈ ಬಾರಿಯ ರೇಟಿಂಗ್​ನಲ್ಲಿ ಶೇಕಡಾ 66 ಅಂಕವನ್ನು ಪಡೆಯೋ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲನೇ ಸ್ಥಾನ ಪಡೆದಿದ್ದಾರೆ. ಈ ಅಂತರರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಕೊರೊನಾ ಎರಡನೇ ಅಲೆ ವಿರುದ್ಧದ ಪ್ರಬಲ ಹೋರಾಟದಿಂದಾಗಿ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಇನ್ನೂ ಈ ಲಿಸ್ಟ್​ನಲ್ಲಿ ಎರಡನೇ ಸ್ಥಾನದಲ್ಲಿ ಇಟಲಿಯ ಪ್ರಧಾನಿ ಮರಿಯೋ ದಾರ್ಗಿ ಇದ್ದಾರೆ. ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಶೇಕಡಾ 53 ರಷ್ಟು ಅಂಕ ಪಡೆದು 6ನೇ ಸ್ಥಾನದಲ್ಲಿದ್ದಾರೆ.

The post ವಿಶ್ವದ 13 ದೇಶಗಳ ನಾಯಕರ ಪೈಕಿ ಮೋದಿ ನಂಬರ್ 1 appeared first on News First Kannada.

Source: newsfirstlive.com

Source link