ವಿಶ್ವನಾಥ್ ವಿರುದ್ಧ ಸುಪಾರಿ ಸಂಚಿನ ಮಾತುಕತೆ ಹೇಗಿತ್ತು? ವೈರಲ್ ವಿಡಿಯೋ ಕಂಪ್ಲೀಟ್ ಸಂಭಾಷಣೆ


ಬೆಂಗಳೂರು: ಬಿಡಿಎ ಅಧ್ಯಕ್ಷ, ಯಲಹಂಕ ಶಾಸಕ ಎಸ್​.ಆರ್​.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಅನ್ನೋ ಆರೋಪ ಕೇಳಿಬಂದಿದೆ. ಕಾಂಗ್ರೆಸ್​ ನಾಯಕ ಎಂ.ಎನ್​.ಗೋಪಾಲಕೃಷ್ಣ ಅವರು ಹತ್ಯೆಗೆ ಸೂಫಾರಿ ನೀಡಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿ ಗೋಪಾಲಕೃಷ್ಣ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ವಿಶ್ವನಾಥ್ ಆಪ್ತ ದೇವರಾಜ್ ಅಲಿಯಾಸ್ ಕುಳ್ಳದೇವರಾಜ್ ಜೊತೆ ನಡೆದಿರುವ ಸಂಭಾಷಣೆ ಸಂಪೂರ್ಣ ವಿವರ ಹೀಗಿದೆ.

ಏನೆಲ್ಲಾ ಮಾತನಾಡಿದ್ರು..?

ಕುಳ್ಳ ದೇವರಾಜ್: ಯಾರನ್ನ?
ಗೋಪಾಲಕೃಷ್ಣ: ವಿಶ್ವನಾಥ್​ನ
ಗೋಪಾಲಕೃಷ್ಣ: ಎಂಎಲ್​ಎ ಫಿನಿಷ್ ಆಗಬೇಕು, ಇದು, ಎರಡಲ್ಲಿ ಒಂದು ಮಾಡು, ಎರಡರಲ್ಲಿ ಯಾವುದು ಮಾಡ್ತೀಯಾ ಹೇಳೋ
ಕುಳ್ಳ ದೇವರಾಜ್: ಅವನು ಫಿನಿಶ್ ಮಾಡೋಕೆ ಹೆಂಡತಿ, ಮಕ್ಕಳನ್ನ ಕಟ್ಟಿಕೊಂಡಿದ್ದೀವಿ, ದುಡ್ಡಲ್ಲಿ ಫಿನಿಶ್ ಮಾಡೋಣ, ಇದೆಲ್ಲಾ ಬಿಡಣ್ಣ ನೀನು,
ಗೋಪಾಲಕೃಷ್ಣ: ಫಿನಿಶ್ ಮಾಡ್ಸು, ಇಲ್ಲ ಕೋಟಿ ರೂಪಾಯಿ ಕೊಡು, ಏನಾದ್ರೂ ಸರಿ, ಫಿನಿಶ್ ಮಾಡೋಣ ಅಂದ್ರೂ ಸರಿ, ಒಬ್ಬರಿಗೂ ಗೊತ್ತಾಗಬಾರದು, ನಾನು ನೀನು ಇಬ್ಬರೇ ಕೆಲಸ ಮಾಡೋಣ ಅಷ್ಟು ಸೀಕ್ರೆಟ್ ಆಗಿ ಮಾಡಬೇಕು. ನಾನು ನೀನು ಇಬ್ಬರೇ ಮಾಡೋಣ
ಕುಳ್ಳ ದೇವರಾಜ್: ಮಾಡಬಹುದು, ಆದ್ರೆ ರಿಯಲ್ ಎಸ್ಟೇಟ್ ಮಾಡಬೇಕು
ಗೋಪಾಲಕೃಷ್ಣ: ರಿಯಲ್ ಎಸ್ಟೇಟ್ ಏನಾದ್ರೂ ಸರಿ, ಏನ್ ಮಾಡಿದ್ರೂ ಸರಿ. ಡಿಸಿ, ಎಸಿ, ಪಿಸಿ, ಚೀಫ್ ಸೆಕ್ರೆಟರಿ ಎಲ್ ಬೇಕಾದ್ರೆ ಅಲ್ಲಿ ಅರೇಂಜ್ ಮಾಡಿಕೊಡ್ತೀನಿ, ಕೆಲಸ ಆಗಬೇಕು. ಒಳ್ಳೆ ಯಾವುದಾದ್ರೂ ಸಾಹುಕಾರನ ಪರಿಚಯ ಮಾಡಿಕೊಳ್ಳೋಣ. ಮುಗಿಸಿದ್ರೂ ಸರಿ, 50 ಲಕ್ಷ, 1 ಕೋಟಿ ಆದ್ರೂ ಸರಿ ಮಾಡಿಸಬೇಕು, ಇಲ್ಲ ಸೋಲಿಸಿ ಬಿಸಾಕಿ, ಇವತ್ತು ಮಾಡ್ಬೇಕು ಗುರು, ಮಾಡಬಾರದೇ?
ಕುಳ್ಳ ದೇವರಾಜ್: 10 ವರ್ಷ ಸರ್ಕಾರ ಇತ್ತು. ಯೂಸ್ ಮಾಡಿಕೊಳ್ಳದೆ, ತರಲೆ ನನ್ನ ಮಕ್ಕಳನ್ನ ಅಂಟಿಗಳನ್ನ ಇಟ್ಕೊಂಡಿರೋರನ್ನ ಜೊತೆಗಿಟ್ಟುಕೊಂಡು ನೀನು, ಆ ರಘುನಾ, ವರದನ್ನ ಇಟ್ಕಂಡು
ಗೋಪಾಲಕೃಷ್ಣ: ಹಿಂದಿನದು ಬಿಟ್ಟು ಬಿಡು, ಈಗ ಐಡಿಯಾ ಮಾಡು. ಇಲ್ಲ ಅವ್ನ ಫಿನಿಶ್ ಮಾಡಬೇಕು, ಇಲ್ಲ ನೂರು ಕೋಟಿ ದುಡ್ಡು ಬರಬೇಕು, ಐಡಿಯಾ ಮಾಡು. ಅಣ್ಣ ಇವನನ್ನ ಮುಗಿಸಿದ್ರೆ ನೂರು ಕೋಟಿ ಸಿಗುತ್ತೆ ಅನ್ನೋದಾದ್ರೆ ನಡಿ ಮುಗಿಸೋಣ
ಕುಳ್ಳ ದೇವರಾಜ್: ಒಂದೇ ಕಡೆ ಸಿಕ್ಕಲ್ಲ, ಒಂದ್ ಎರಡ್ಮೂರು ಕಡೆ ಸಿಗ್ತಾವೆ
ಗೋಪಾಲಕೃಷ್ಣ: ಒಂದೇ ಕಡೆ ಸಿಗಬೇಕಲ್ಲ, ಯಾವ್ದಾರ ಒಂದ್ ಐಡಿಯಾ ಮಾಡಿ, ಚೆಲ್ಲಿ ಬಿಡೋಣ ದುಡ್ಡು ಹಿಂಗೆಲ್ಲಾ
ಕುಳ್ಳ ದೇವರಾಜ್: ಚೆಲ್ಲು, ಕಳ್ಳ ರಾಜುಗೆ, ಸುಬ್ಬಣ್ಣಗೆ, ಅಂಥವರಿಗೆ ಚೆಲ್ಲಣ್ಣ. ಇನ್ನೂ ಎರಡು ಲಕ್ಷ ಜಾಸ್ತಿ ಕೊಡು
ಗೋಪಾಲಕೃಷ್ಣ: ನಂಗೀಗ ****** ಉರಿಸಬೇಡ, ಮೊದಲು ಈ ಕೆಲಸ ಮಾಡು
ಕುಳ್ಳ ದೇವರಾಜ್: ಆಯ್ತು, ಒಂದೆರಡು ವ್ಯವಹಾರ ಹುಡುಕುತ್ತೇನೆ ಬಿಡ್ರಿ ಅವ್ರದು, ಇವಾಗ 30 ಎಕರೆ ಹುಡುಕಿದೋನಿಗೆ ಇನ್ನೊಂದು 50 ಎಕರೆ ಹುಡುಕೋದು ಕಷ್ಟನಾ?
ಗೋಪಾಲಕೃಷ್ಣ: ಯಾವ 30 ಎಕರೆ?
ಕುಳ್ಳ ದೇವರಾಜ್: ಮಾದಪ್ಪನ ಹಳ್ಳಿದು
ಗೋಪಾಲಕೃಷ್ಣ: ಮಾದಪ್ಪನ ಹಳ್ಳಿದಾದ್ರೆ
ಕುಳ್ಳ ದೇವರಾಜ್: ಸಾಕಲ್ಲ, ಅದೇ ಎಕರೆ ಮೇಲೆ ಒಂದ್ ಕೋಟಿ ಇಕ್ಕಾನ ಬಿಡಣೋ, ಒಳ್ಳೆ ಕತೆ
ಗೋಪಾಲಕೃಷ್ಣ: ಡೈರೆಕ್ಟ್ ಪರಿಚಯನಾ?, ನಡಿ ಮಾತಾಡೋಣ ನಡಿ
ಕುಳ್ಳ ದೇವರಾಜ್: ಕರ್ಕೊಂಡು ಹೋಗ್ತೀನಿ ಬಿಡು, ಜಾಗ ಇವತ್ತು ತೋರಿಸ್ತಾರೆ, ಇವತ್ತು ಸಾಯಂಕಾಲ ತೋರಿಸ್ತಾರೆ, ಡಾಕ್ಯುಮೆಂಟ್ ಕೇಳಿದ್ದೀನಿ ಕೊಡ್ತಾರೆ. ನಿನ್ನತ್ರ ತಗೊಂಡ್ ಬರ್ತೀನಿ, ಏನ್ ಮಾಡ್ತೀಯ ಮಾಡು
ಗೋಪಾಲಕೃಷ್ಣ: ನೂರು ಕೋಟಿ ಇಲ್ಲವಾ, ನಾಲ್ಕೈದು ಕೋಟಿ ಖರ್ಚು ಮಾಡಿ ಫಿನಿಶ್ ಮಾಡೋಣ

ಕುಳ್ಳ ದೇವರಾಜ್: ಇವನ ಜೊತೆ ಆದ್ರೂ ಬಾಳಬಹುದು ಅಣ್ಣ, ಅವನು ನಾಗಶೆಟ್ಟಿ ಅವನು ಅವನಲ್ಲ ಭಲೇ ಕಾಟ ಕೊಡುತ್ತಾನೆ, ವರ್ಧನ್ ಮಾತು ಕೇಳಿಕೊಂಡು
ಗೋಪಾಲಕೃಷ್ಣ: ಇಲ್ಲ ಅವನ ಎತ್ತು ಬೇಕು. ಅವನ ಎತ್ತು ಬಿಟ್ರೆ ಇವನು ಹೋದ ಅಂತಾನೆ ಅರ್ಥ
ಕುಳ್ಳ ದೇವರಾಜ್: ಎಂಎಲ್​ಎಗಿಂತ ಇವನ್ನ ಈಜಿಯಾಗಿ ಎತ್ತುಬಹುದು ಅಣ್ಣ
ಗೋಪಾಲಕೃಷ್ಣ: ಅವನ ಎತ್ತಿ ಬಿಟ್ರೆ ಇವನು ಹೋದ ಅಂತಾನೆ ಅರ್ಥ, ಇವನು ಸತ್ತ. ಅದೇ ಲಾಸ್ಟ್
ಕುಳ್ಳ ದೇವರಾಜ್: ಇದು ಪಕ್ಕಾ ನಡೆಯುತ್ತದೆ, ಯಾರ್ಗಾನ ರೆಡಿ ಮಾಡಬಹುದು. ಅದಕ್ಕೆ ನಾವು ಎಲ್ಲಿ ಹೋದರೂ ಜೈಸ್ಕೊಂಡು ಬರೋದು
ಗೋಪಾಲಕೃಷ್ಣ: ಇನ್ನೊಂದು ಹೇಳಬೇಕೆಂದರೆ ಇದೆಲ್ಲ ಪರ್ಸನಲ್ ಲೈಫ್
ಗೋಪಾಲಕೃಷ್ಣ: ಈ ಲೈಫು ನಮ್ಮದಲ್ಲ, ಹಂಡ್ರೇಡ್ ಪರ್ಸೆಂಟ್, ಏನ್ ಮಾಡಬೇಕು ಇವಾಗ
ಕುಳ್ಳ ದೇವರಾಜ್: ಹಂಡ್ರೆಡ್ ಪರ್ಸೆಂಟ್ ಅಣ್ಣ
ಗೋಪಾಲಕೃಷ್ಣ: ಎಲ್ಲೂ ನಿಲ್ಲಿಸಬೇಡ ಹೇಳೀನಿ
ಕುಳ್ಳ ದೇವರಾಜ್: ಅಲ್ಲ ಅಣ ಏನೇ ಬರ್ಲಿ ಹೇಳ್ತೀನಿ
ಗೋಪಾಲಕೃಷ್ಣ: ನೀನು ಹೇಳಿದಂಗೆ ಇಲ್ಲಿ ಹೊಡಿಯೋಕ್ಕಿಂತ ನಾಗಶೆಟ್ಟಿಹಳ್ಳಿಲ್ಲಿ ಹೊಡೆದರೆ ಬೆಸ್ಟ್.
ಕುಳ್ಳ ದೇವರಾಜ್: ಕಷ್ಟ ಆಗುತ್ತೆ ಅಣ್ಣ, ಏನ್ ತಮಾಷೆನಾ? ನಾಗಶೆಟ್ಟಿಹಳ್ಳಿಲ್ಲಿ ಹೊಡೆದು ಫಸ್ಸು ಸುತ್ತು ಅನ್ನ ತಿನ್ನಬೇಕು ಅಣ್ಣ. ಆಮೇಲೆ ಸೆಂಟ್ರಲ್ ಇರೋದನ್ನ ಎತ್ತಿ ಬಾಯಲ್ಲಿ ಹಿಡ್ಕೋಬೇಕು. ನೀನು ಒಂದೇ ಸಲ, ಸೆಂಟ್ರಲ್ ಕೈ ಇಕ್ಕು ಅಂತೀಯಾ

ಗೋಪಾಕೃಷ್ಣ: ನೋಡು ಇವಾಗ ಹೆಂಗೋ ಇವಾಗ ಸಿರೀಯಸ್ಲಿ ಬೆಳಗ್ಗೆ 6 ಗಂಟೆಯಿಂದ 7 ಗಂಟೆಯವರೆಗೂ ಒಬ್ಬನೇ ಇರ್ತಾನೆ. ತೋಟದಲ್ಲಿ ಒಬ್ಬನೇ ಇರ್ತಾನೆ. ಒಳ್ಳೆ ಟೈಮು ಈಜಿ ಕೆಲಸ ಆಗುತ್ತೆ.
ಕುಳ್ಳ ದೇವರಾಜ್: ಆಹಾ ಅವ್ರು ಅಲ್ಲಿ ಯಾವುದು ವಿಕೆಟ್ ಹೊಡೆದುಬಿಟ್ಟು ಬಂದವರೇ ಪಾಂಡಿಚೇರಿಯಲ್ಲಿ. ಆ ಕಡೆ ನಿಮ್ಮೂರು ತೋಪಲ್ಲಿ ಬಿಟ್ಟು ಬಂದಿದ್ದೇನೆ. ಅವರಿಗೆ ಸಾಯಕಾಂಲ ವ್ಯವಸ್ಥೆ ಎಲ್ಲಾನ ಜಾಗ ನೋಡಿಕೊಂಡು ರೂಮ್ ಮಾಡಿ ಇಡಬೇಕು. ನ್ಯೂಟೌನ್ ಅಲ್ಲಿ ಇಡುತ್ತೇನೆ.
ಕುಳ್ಳ ದೇವರಾಜ್: ಅದಕ್ಕೆ ನೀನು ಓಕೆ ಅಂದರೆ ಪಟ್ಟಂತ ಅಡ್ವಾನ್ಸ್ ಕೊಟ್ಟಿ ಮುಗಿಸಿ ಎತ್ತಿ ಬಿಸಾಕೋಣ.
ಗೋಪಾಕೃಷ್ಣ: ತೋಟದ ಹತ್ರ ನೋಡು, ತೋಟದ ಹತ್ರ ಒಂದು ರೌಂಡ್ಸ್ ಹಾಕಿಕೊಂಡು ಬಾ.
ಕುಳ್ಳ ದೇವರಾಜ್: ಇಬ್ಬರಲ್ಲಿ ಯಾರನ್ನು ಹೊಡಿಯೋದು ಹೇಳಣ್ಣ ಫಸ್ಟ್.
ಗೋಪಾಕೃಷ್ಣ: ಯಾರನ್ನ ಹೇಳಿದ್ದು?
ಕುಳ್ಳ ದೇವರಾಜ್: ಇಬ್ಬರಲ್ಲಿ ಎಂಎಲ್​ಎನ ಹೊಡಿಯೋಣ, ಇಲ್ಲಾ ಸತೀಶ್​ನ ಹೊಡಿಯೋಣ ಅಂತಾ.
ಗೋಪಾಕೃಷ್ಣ: ಹೇ ಸತಿನೆಲ್ಲ ಬೇಡ. ಹೊಡೆದ್ರೆ ಒಂದೇ ಇವಂದು ಹೋಗಬೇಕು.
ಕುಳ್ಳ ದೇವರಾಜ್: ಹಾ..ಹಾ..ಹಾ..
ಕುಳ್ಳ ದೇವರಾಜ್: ಆಮೇಲೆ ಅವರು ಯಾರೋ ಡಿಸಿಪಿ ಟಚ್​​ಲ್ಲಿ ಇದ್ದಾರೆ ಅಂದ್ಯಲ್ಲಣ್ಣಾ
ಗೋಪಾಕೃಷ್ಣ: ಹೌದು ಯಾಕೆ?
ಕುಳ್ಳ ದೇವರಾಜ್– ನಾರಾಯಣನಾ? ಹರ್ಷನಾ? ಯಾರು ಹೇಳು.
ಗೋಪಾಕೃಷ್ಣ: ಹರ್ಷ ಅವರು.
ಕುಳ್ಳ ದೇವರಾಜ್: ಅಣ್ಣ ಹರ್ಷ ಅಲ್ಲ ಅಣ್ಣ. ಲಾಸ್ಟ್​ ಟೈಮ್ ಶೂಟೌಟ್​ ಕೇಸ್​ನಲ್ಲಿ ಹೆಲ್ಪ್ ಮಾಡಿದ್ರು ಅಂದ್ಯಲ್ಲಣ್ಣಾ
ಗೋಪಾಕೃಷ್ಣ: ಓಹ್ ನಾರಾಯಣ್ ಅವ್ರು..
ಕುಳ್ಳ ದೇವರಾಜ್: ಅವರತ್ರ ಒಂದು ಸಜೆಷನ್ ತಗೊತೀಯಾ ನೋಡಣ್ಣ. ಹೀಂಗೆ ಆಯ್ತೆ ಅಂತಾ.
ಗೋಪಾಕೃಷ್ಣ: ಹೇ ಹೇ ಬೇಡಪ್ಪಾ
ಕುಳ್ಳ ದೇವರಾಜ್: ಹೌದಾ?
ಗೋಪಾಕೃಷ್ಣ: ಬೇಡ ಬಾ.. ಮಾತಾಡೋಣ ಬಾ..
ಕುಳ್ಳ ದೇವರಾಜ್- ಅದಕ್ಕೆ ರೆಡಿ ಅವ್ರೆ, ನೀನು ಹೂ ಅಂದ್ರೆ, ಇವತ್ತಿಂದ ಕೆಲಸ ಸ್ಟಾರ್ಟ್ ಮಾಡಿದ್ರೆ ಇನ್ನು ಎರಡ್ಮೂರು ದಿವಸದಲ್ಲಿ ಅಡ್ವಾನ್ಸ್ ಅರೆಂಜ್ ಮಾಡಿಕೋ ಅಣ್ಣ
ಗೋಪಾಕೃಷ್ಣ: ಹಾ ಓಕೆ ಆಯ್ತು.
ಕುಳ್ಳ ದೇವರಾಜ್- ಆ ತೋಟ ಎಲ್ಲಿ ಬರುತ್ತೆ ಹೇಳು?
ಗೋಪಾಕೃಷ್ಣ: ಅದೇ ನಾವು ಡೌನ್ ಇಳಿತೀವಿ ಅಲ್ವಾ.. ಮೆಡಿಕಲ್ ಶಾಪ್ ಇಂದ ಮುಂದಕ್ಕೆ
ಕುಳ್ಳ ದೇವರಾಜ್– ಹಾ..ಹಾ..ಹಾ..
ಗೋಪಾಕೃಷ್ಣ: ಅಲ್ಲಿ ಇಳಿದುಬಿಟ್ಟು ಮೇಲೆ ಒಂದು ಲೆಫ್ಟ್​ಲ್ಲಿ ಮೈಯಪ್ಪನಹಳ್ಳಿಗೆ ಹೋದ್ವಲ್ಲಪ್ಪ.. ಬಾವಿ ಕಟ್ಟುತ್ತಾವ್ನೆ.
ಕುಳ್ಳ ದೇವರಾಜ್— ಹಾ..ಹಾ..ಹಾ.. ಅಲ್ಲಿ ಗೋಶಾಲೆ ಆಯ್ತಲ್ವಾ
ಗೋಪಾಕೃಷ್ಣ: ಹಾ ಅಲ್ಲೇ ಅಲ್ಲೇ ಅಲ್ಲೇ..ಈಸಿ ಕೆಲಸ ಆಗುತ್ತೆ ಈಸಿಯಾಗಿ ಈಸಿಯಾಗಿ ಆಗುತ್ತೆ. ನಾನು ಬರ್ತೀನಿ ಬಿಡು ಸಾಯಂಕಾಲ ಮಾತಾಡೋಣ.
ಕುಳ್ಳ ದೇವರಾಜ್– ಆಯ್ತು ಅಣ್ಣ ಆಯ್ತು..
ಕುಳ್ಳ ದೇವರಾಜ್– 15 ಲಕ್ಷ ಖರ್ಚು ಮಾಡಿ ಮೀಡಿಯಾದವ್ರಿಗೆ ಅವರ ಮೇಲೆ ಹಾಕೋಕೆ ಹೇಳಿ. ಇಬ್ಬರು ಮೂವರು ಇದ್ದಾರೆ. ಭಾರೀ ದ್ವೇಷದಾಗಿದ್ದಾರೆ. ಹೇಳ್ತೀನಿ ಯಾರು ಅಂತಾ? ಪಟ್ ಅಂತಾ ರೆಡಿ ಮಾಡಿ ಎಲ್ಲಾ ಮುಗಿಸಿಬಿಡೋಣ.
ಗೋಪಾಕೃಷ್ಣ: ಯಾವ ತರ ಮಾಡುತ್ತಾರೋ? ಸೈಲೆಂಟ್ ಆಗಿ ಮಾಡುತ್ತಾರೋ?
ಕುಳ್ಳ ದೇವರಾಜ್: ಸೈಲೆಂಟ್ ಆಗಿ ಮಾಡುತ್ತಾರೆ. ನಿಂಗ್ ಯಾಕ್ ಅಣ್ಣೋ? ನಿನ್ನ ಕಥೆ ಕಟ್ಕೊ ನಾನ್ ಪಕ್ಕಾ ಮಾಡುಸ್ತೀನಿ. ಒಂದು ಹೊಡೆದವನಿಗೆ ಇನ್ನೊಂದು ಹೊಡೆಯೋದು ಕಷ್ಟನಾ? ಸ್ವಲ್ಪ ರಿಸ್ಕ್ ಆಗುತ್ತೆ. ಒಟ್ನಲ್ಲಿ ಡಿಪಾರ್ಟ್​ಮೆಂಟ್​ದ್ದು ನಿನ್ನ ಇನ್​ಚಾರ್ಜ್.
ಗೋಪಾಕೃಷ್ಣ:– ಡಿಪಾರ್ಟ್​ಮೆಂಟ್ ಏನ್ ಮಾಡ್ತಾರೆ?
ಕುಳ್ಳ ದೇವರಾಜ್: ಒಂದೇಟು ಮುಟ್ಟಬಾರದು. ಮಾಡಿ ಸರಂಡರ್ ಆಗ್ಬಿಡ್ತಾರೆ.
ಗೋಪಾಕೃಷ್ಣ: ಆದ್ರೆ ಅವನು ಫಿನಿಶ್ ಆಗಿಬಿಡಬೇಕು, ಫುಲ್ಲು ಅರ್ಧಂಬರ್ಧ ಇರಬಾರದು.
ಕುಳ್ಳ ದೇವರಾಜ್: ಫಿನಿಶ್ ಆಗ್ಬಿಡ್ತಾನೆ ಅಣ್ಣ. ಮಾಡಿ ಅವನ ಮೇಲೆ ಹೇಳೋ ತರ ಮಾಡೋಣ.
ಗೋಪಾಕೃಷ್ಣ: ಹಾ ಅವನ ಮೇಲೆ ಹೇಳಬೇಕು.
ಕುಳ್ಳ ದೇವರಾಜ್: ಅವರಿಗೂ ಅವನ ಮೇಲೆ ಕೋಪ ಇದೆ ಅರ್ಥ ಆಯ್ತಾ? ಯಾವುದೋ 2-3 ಜಮೀನು ಮೇಲೆ ಕೈ ಹಾಕಿ ಥಣಿಸಂದ್ರ ಕಡೆ ಇದು ಮಾಡವ್ರೆ. ರೆಡಿ ಮಾಡ್ತೀನಿ ಅರ್ಥ ಆಯ್ತಾ?
ಗೋಪಾಕೃಷ್ಣ: ಓಕೆ.
ಕುಳ್ಳ ದೇವರಾಜ್ ರೆಡಿ ಮಾಡಿ ಏನು ಮಾಡೋಣ?
ಗೋಪಾಕೃಷ್ಣ: ಓಕೆ ಮಾಡಿಸು.
ಕುಳ್ಳ ದೇವರಾಜ್: ಕೊಡು, ಅಡ್ವಾನ್ಸ್ ಎಷ್ಟು ಕೊಡ್ತೀಯಾ?
ಗೋಪಾಕೃಷ್ಣ: ಮಾಡಿಸು, ಕೊಡ್ತೀನಿ, ಅರೆಂಜ್ ಮಾಡ್ತೀನಿ
ಕುಳ್ಳ ದೇವರಾಜ್: ಪ್ಲಾನ್ ರೆಡಿ, ನೀನ್ ಯಾಕೆ ತಲೆ ಕೆಡಿಸ್ಕೋತೀಯಾ? ಎಲ್ಲಾ ಗಾಂಜಾ ಪ್ಲೇಯರ್​ಗಳೇ
ಗೋಪಾಕೃಷ್ಣ: ಗಾಂಜಾ ಪ್ಲೇಯರ್ ಆದ್ರೂ ಫಂಕ್ಷನ್​ನಲ್ಲಿ ಮಾಡೋದಲ್ಲ. ಇವ್ನನ್ನ ಹೊಡೆದು ಬಿಸಾಕೋದು ಎಷ್ಟೊತ್ತು ಅವರಿಗೆ?
ಕುಳ್ಳ ದೇವರಾಜ್: ಇವಾಗ ಏನಣ್ಣಾ? ಕತ್ತು ಕುಯ್ಕೊಂಡ್ ಕೂಂತ್ಕೋತಾರಾ ಏನು? ಇಲ್ಲಿ ಆಯ್ತಲಾ, ಸಿಗ್ನಲ್​ಲ್ಲಿ ಕಡಬಗೆರೆ ಸೀನಂದು ಹಂಗೆ. ರೆಡಿ ಮಾಡ್ಕೋ. ಢಮ್ ಅನ್ನಿಸೋಣ.
ಗೋಪಾಕೃಷ್ಣ: ಕಾರಲ್ಲಿ ಹೋಗಬೇಕಾದ್ರೆ ಮಾಡಬಾರದು.
ಕುಳ್ಳ ದೇವರಾಜ್: ಅದು ಸಖತ್ತಾಗಿ ಮಾಡ್ದೆ ಬಿಡು ನೀನು ಪ್ಲಾನ್… ಕಡಬಗೆರೆ ಸೀನಂದು..
ಗೋಪಾಕೃಷ್ಣ: ಯಾಕೆ?
ಕುಳ್ಳ ದೇವರಾಜ್: ಸಖತ್ತಾಗಿ ಮಾಡ್ದೆ ನೀನು ಪ್ಲಾನ್.
ಗೋಪಾಕೃಷ್ಣ: ಹೆಂಗೆ?
ಕುಳ್ಳ ದೇವರಾಜ್: ಹೆಂಗೋ ನಮಗೆಲ್ಲ ಗೊತ್ತು ತಗೋ.
ಗೋಪಾಕೃಷ್ಣ: ನೋಡು ಅಂಗೆ ಮಾಡಬೇಕು ಸೈಲೆಂಟ್​ ಆಗಿ. ಉಳಿಬಾರ್ದು, ಅರ್ಧಂಬರ್ಧ ಇದ್ರೆ ಕಷ್ಟ ಆಗುತ್ತೆ. ಫಿನಿಶ್ ಆಗ್ಬಿಡಬೇಕು.
ಕುಳ್ಳ ದೇವರಾಜ್: ನೀನು ಎಲ್ಲಾ ಕರೆಕ್ಟ್ ಆಗಿ ಮಾಡಿದೆ ಲಾಸ್ಟ್ ಟೈಮ್, ಆದ್ರೆ ಹಾಸ್ಪಿಟಲ್​ಲ್ಲಿ ಸ್ವಲ್ಪ ಯಾಮಾರಿಬಿಟ್ಟೆ. ಕಡಬಗೆರೆ ಹತ್ರ.
ಕುಳ್ಳ ದೇವರಾಜ್: ನೀನಾಗಿ ನೀನೆ ಹೆಸರು ಹೇಳ್ಬಿಟ್ಟೆ. ಅವನು ಹೇಳಿಲ್ಲ ಮಿಂಡ್ರಿ ನನ್ಮಗ. ಆವಾಗ ಕೇಸ್ ಸ್ವಲ್ಪ ಲೂಸ್ ಆಯ್ತು.
ಗೋಪಾಕೃಷ್ಣ: ಕೇಸ್​ ಲೂಸ್ ಆಗೋಕೆ ಪೊಲೀಸರಿಗೆ ಅವನ ಮೇಲೆ ನಂಬಿಕೆನೇ ಇರಲಿಲ್ಲ. ಕಡಬಗೆರೆ ಅವರು ಬರೀ ಪೊಲೀಸರ ಮೇಲೆ ಕೇಸ್ ಹಾಕ್ತಾ ಇದ್ರು. ಎಸ್​ಪಿ ಡಿಸಿಪಿ ಅಂತವರ ಮೇಲೆ ಕೇಸ್​ ಹಾಕಿಬಿಟ್ಟಿದ್ದಾರೆ. ಅದಕ್ಕೆ ಪೊಲೀಸರು ವಿರುದ್ಧ ಇದ್ದರು. ಹರ್ಷ ಡಿಸಿಪಿ ನನಗೆ ಹೇಳಿದ ಸರ್ ಯಾಕೆ ಹೋಗಿ ಹೋಗಿ ಈ ನನ್ನ ಮಕ್ಕಳಿಗೆ ಸಪೋರ್ಟ್ ಮಾಡ್ತೀರಾ ಅಂತಾ. ಸರಿ ಇಲ್ಲ ಇವರು. ಕಚಡಾ ನನ್ನ ಮಕ್ಕಳ ಬ್ಯಾಕ್​ಗ್ರೌಂಡ್ ಗೊತ್ತಿಲ್ಲ ಸರ್ ನಿಮಗೆ ಅಂತಾ.. ಇಲ್ಲ ಅಂದಿದ್ರೆ ಇನ್ನು ಅಷ್ಟು ಮಾಡಿಸುತ್ತಿದ್ದೆ.
ಗೋಪಾಕೃಷ್ಣ: ನೋಡು ಹುಷಾರಾಗಿ ಮಾಡು, ಐಡಿಯಾ ಮಾಡು.
ಕುಳ್ಳ ದೇವರಾಜ್ :ಮಾಡೋಣ ಒಂದು 15 ದಿವಸ ಇಲ್ಲ ಅಥವಾ 6 ತಿಂಗಳು ಆಗಲಿ. ನಿಧಾನಕ್ಕೆ ರೆಡಿ ಮಾಡಿ ಹುಡುಗರನ್ನು ಫಿಲ್ಟರ್ ಮಾಡಬೇಕು. ಎಣ್ಣೆ ಇರಬಾರದು, ಗಾಂಜಾ ಇರಬಾರದು ಅವರಲ್ಲಿ. ಜಿದ್ದು ಇರಬೇಕು.
ಗೋಪಾಕೃಷ್ಣ: ಜಿದ್ದು ಇರಬೇಕು. ಆಮೇಲೆ ಒಳ್ಳೆಯ ಜಾಗ ನೋಡಿಕೊಂಡು ತೋಟ ಅಂತಾ ಜಾಗ ನೋಡಿಕೊಂಡು…
ಕುಳ್ಳ ದೇವರಾಜ್: ಆಮೇಲೆ ಅಲ್ಲಿ, ಅದೇ ಅಲ್ಲಿ ಹೋಗ್ತಾನಲ್ವಾ, ಅವಳ ಜೊತೆ ಲೇಡಿ ಅವಳಲ್ಲ. ನಾಗಶೆಟ್ಟಿ ಹಳ್ಳಿ ಅಲ್ಲಿ
ಗೋಪಾಕೃಷ್ಣ: ಅಂತಾ ಕಡೆ ನೋಡ್ಕೋಳ್ಬೇಕು
ಕುಳ್ಳ ದೇವರಾಜ್– ಅದು ಎಲ್ಲಾ ನಾವು ನೋಡಿಕೊಳ್ಳುತ್ತೇವೆ.
ಗೋಪಾಕೃಷ್ಣ: ಅದನ್ನೆಲ್ಲಾ ಒಂದು ತಿಂಗಳು ಎರಡು ತಿಂಗಳಾದ್ರೂ ಪರವಾಗಿಲ್ಲ.
ಕುಳ್ಳ ದೇವರಾಜ್– ಮೂರು ಜನ ಟೀಮ್ ಇದೆ ಅದರಲ್ಲಿ ಫಿಲ್ಟರ್ ಮಾಡ್ಕೋಬೇಕು. ಕರೆಕ್ಟಾಗಿ ಇರೋರನ್ನ ಖಡಕ್ಕಾಗಿ ಇರುವವರನ್ನ ಮಾಡ್ಕೊಂಡು. ಎಲ್ಲಾ ಜಿದ್ದು ಇರೋರೆ.
ಕುಳ್ಳ ದೇವರಾಜ್: ಮೊನ್ನೆ ಯಾವುದೋ ತಿಮ್ಮೇನಹಳ್ಳಿ ಹತ್ರ ಜಾಗ ಅಕ್ವೇರ್ ಮಾಡಿಕೊಂಡನಂತೆ.
ಗೋಪಾಕೃಷ್ಣ: ಎಲ್ಲಿ ಹೇಳು?
ಕುಳ್ಳ-ತಿಮ್ಮೇನಹಳ್ಳಿ.
ಕುಳ್ಳ ದೇವರಾಜ್: ಬಿಎಂಟಿಸಿ ಇದು ಡಿಪೊ ಆಗಿದ್ಯಲಾ, ನಾಗದಾಸನಹಳ್ಳಿಯಲ್ಲಿ. ತಿಮ್ಮೇನಹಳ್ಳಿಯಲ್ಲಿ ಯಾವುದೋ ಅಂಬೇಡ್ಕರ್ ಸರ್ಕಾರಿ ಜಾಗ ಅಂತಾ 3 ಎಕರೆ ಮಾಡಿಕೊಂಡಿದ್ದಾನೆ.
ಕುಳ್ಳ ದೇವರಾಜ್: ಅಲ್ಲಿ ಅವರು, ಅವರ ಕಡೆಯವರು ಅಲ್ಲಲ್ಲೇ ಇದ್ದಾರೆ.
ಗೋಪಾಕೃಷ್ಣ: ಪಂಟರ್ ಆಗಿರಬೇಕು. ತೋಟದಲ್ಲಿ ಒಬ್ಬನೇ ಬರುತ್ತಾನೆ ಡ್ರೈವಿಂಗ್ ಮಾಡಿಕೊಂಡು ಬೆಳಗ್ಗೆ.
ಕುಳ್ಳ ದೇವರಾಜ್– ವಾಕಿಂಗ್ ಬರ್ತಾನಾ?
ಗೋಪಾಕೃಷ್ಣ : ಬೆಳಗ್ಗೆ… ಬೆಳಗ್ಗೇನೇ ಬರ್ತಾನೆ 7-8 ಗಂಟೆಗೆ. ಅಲ್ಲಿ ಜಾಸ್ತಿ ಡೀಲಿಂಗ್ಸ್ ಇವಾಗ.
ಕುಳ್ಳ ದೇವರಾಜ್: ತೋಟದಲ್ಲಿ..
ಕುಳ್ಳ ದೇವರಾಜ್: ಮಾಡೋಣಬಿಡು. ನೀನು ದುಡ್ಡು ರೆಡಿ ಮಾಡ್ಕೋ ಕೆಲಸ ನಮ್ಮದು ಇರಲಿ.
ಗೋಪಾಕೃಷ್ಣ: ನೀನು ಫಸ್ಟ್​ ಕ್ಲೀನ್ ಆಗಿ ಪ್ಲಾನ್ ಮಾಡ್ಕೋ.

ಕುಳ್ಳ ದೇವರಾಜ್: ನಾನು ಇವನ ಹೊಡೆಯೋಕೆ ರೆಡಿ ಮಾಡಿದೆ.
ಗೋಪಾಕೃಷ್ಣ: ಯಾರನ್ನ?
ಕುಳ್ಳ ದೇವರಾಜ್: ನಲ್ಲೋಡ್ನ. ವರ್ಧನ ಏನಕ್ಕೆ ಅಂದ್ಕೊಂಡು ಆಮೇಲೆ ಯೋಚನೆ ಮಾಡಿ ಮಾಡೋದು ಮಾಡ್ತಾ ಇದ್ದೀವಿ ಯಾವುದನ್ನ ದೊಡ್ಡದು ಮಾಡೋಣ ಅಂತಾ.
ಕುಳ್ಳ ದೇವರಾಜ್: ಮಾಡಿಸಿದ ಆ ತರ ಮಾಡು ಅವನ್ ******* ಆದ್ರೆ, ಕಡಬಗೆರೆಗೆ ಕರೆಕ್ಟ್ ಆಗಿ ಇತ್ತು
ಗೋಪಾಕೃಷ್ಣ: ಲೈಫ್​ಲ್ಲಿ
ಕುಳ್ಳ ದೇವರಾಜ್: ಇಲ್ಲಣ್ಣ, ಕಡಬಗೆರೆಗೆ ಕರೆಕ್ಟ್​ ಆಗಿತ್ತು. ನೀನೆ ಯಾಮಾರಿದ್ದು. ನೀನೆ ಹೇಳ್ತಾ ಇದ್ದೀಯಾ, ಎಂಎಲ್​ಎನಾ, ಎಂಎಲ್​ಎನಾ, ಎಂಎಲ್​ಎನಾ ಅಂತಾ. ಆತುರ ಬಿದ್ದುಬಿಟ್ಟೆ ಅಣ್ಣಾ. ಎಲ್ಲಾ ಮಾಡಿದ್ದೆ ಲಾಸ್ಟ್​ಲಾಸ್ಟ್​ ಅಲ್ಲಿ ಆತುರ ಬಿದ್ದುಬಿಟ್ಟೆ. ಒಂದೇ ಒಂದು ಎರಡು ಪರ್ಸೆಂಟ್ ತಪ್ಪು ಮಾಡಿಬಿಟ್ಟೆ
ಕುಳ್ಳ ದೇವರಾಜ್: ಅದು ಸ್ಟೇಟ್​ಮೆಂಟ್ ನೀನು ಟಿವಿಯಲ್ಲಿ ಬರ್ತಿದ್ದಂಗೆ ಮಾಡಿದ್ದರೆ ಚೆನ್ನಾಗಿರೋದು. ಅಧಿಕಾರಿಗಳಿಗೆ ಗೊತ್ತಾಗ್ಬಿಡ್ತು. ಉದ್ದೇಶಪೂರ್ವಕವಾಗಿ ಪ್ರಚಾರ ಮಾಡ್ತಿದ್ದಾರೆ ಅಂತಾ
ಗೋಪಾಲೃಷ್ಣ: ಮಾಡಿದ್ದೇ ಉದ್ದೇಶಪೂರ್ವಕವಾಗಿ, ಅವನು ಹೇಳ್ತಾ ಇರಲಿಲ್ಲ. ಹೆಸರು ನಾನೇ ಹೇಳಿಕೊಟ್ಟಿದ್ದು. ನಾನು ಕೇಳ್ತೀನಿ ಎಂಎಲ್​ಎ ಅಂತಾ. ನೀನು ಹೂ ಅನ್ನು ಅಂತಾ ನಾನೇ ಹೇಳಿಕೊಟ್ಟಿದ್ದು.
ಗೋಪಾಕೃಷ್ಣ– ಅವನು ಹೂ ಅನ್ನಲಿಲ್ಲ ನೋಡು. ಈ ತರ ಐಡಿಯಾ ಮಾಡು. ನೀನು ನೀಟಾಗಿ, ಟೀಮ್ ಕರೆಕ್ಟ್ ಆಗಿರಬೇಕು.
ಕುಳ್ಳ ದೇವರಾಜ್– ನಿನ್ನೆ ಮೊನ್ನೆ ಬಂದ್ನಲ್ವಾ, ಅಲ್ಲಿ ಬಿಡಿಎ ಡೆಮೊಲಿಷನ್ ಮಾಡಿದಾಗ. ಹಾಂಗೆ ಇರು ಕೋಪದಲ್ಲಿ ನೋಡ್ತಾ ಇರು. ಆವಾಗ ಜನಕ್ಕೆ ಡೌಟು ಬರಲ್ಲ. ಆವಾಗ ನಿನ್ ಜೊತೆ ಇರೋರಿಗೂ ಡೌಟ್ ಬರಲ್ಲ ಅಣ್ಣಾ.
ಗೋಪಾಕೃಷ್ಣ– ಎಲ್ಲಿ ಹೊಡೆದರು ಏನಾಯ್ತು ಅಂತಾ ಗೊತ್ತಾಗಬಾರದು. ಅಷ್ಟರಲ್ಲಿ ಮುಗಿಯಬೇಕು.
ಕುಳ್ಳ ದೇವರಾಜ್– ಏ ಅವರೇ ಬಾ ಅಣ್ಣ ಹುಡುಗರು.
ಗೋಪಾಕೃಷ್ಣ– ಈ ಌಂಗಲ್​ ಎಲ್ಲಾ ಆಯ್ತಲಾ
ಕುಳ್ಳ ದೇವರಾಜ್– ಎಲ್ಲ ಇದೆ ಯಾಕೆ?
ಗೋಪಾಕೃಷ್ಣ– ಎರಡೇ ಏಟಲ್ಲಿ ಹೋಗ್ಬೇಕು
ಕುಳ್ಳ ದೇವರಾಜ್– ಕರೆಕ್ಟಾಗಿ ಇಡುತ್ತಾರೆ ಬಾ ಅಣ್ಣಾ. ಹೈದ್ರಾಬಾದ್​ನಿಂದ ಕರೆಸಿಕೊಳ್ತಾರೆ. ಅವರೇ ಕರೆಸುತ್ತಾರೆ ಶಾರ್ಪ್​ ಶೂಟರ್. ಹೊಡೆಯುವುದು ಅವರು, ಹೋಗುವುದು ಇವರು.
ಗೋಪಾಕೃಷ್ಣ–  ಹಂಗಾದ್ರೆ ಓಕೆ.
ಕುಳ್ಳ ದೇವರಾಜ್– ಏನ್ ನಿನಗೇನ್ ಗೊತ್ತಿಲ್ವಾ? ಹೊಸದಾಗಿ ಕೇಳ್ತಿಯಾ?
ಗೋಪಾಕೃಷ್ಣ– ನಾನೇನೋ ಇವರೇ ಹೊಡಿತಾರೇ ಅಂದ್ಕೊಂಡೆ
ಕುಳ್ಳ ದೇವರಾಜ್– ಶಾರ್ಪ್​ ಶೂಟರ್​ ಕರೆಸಿ ಬಿಟ್ಟು ಹೊಡಿಸೋದು.
ಕುಳ್ಳ ದೇವರಾಜ್– ****ಇವತ್ ಇರ್ತೀವಿ ನಾಳೆ ಸಾಯ್ತೀವಿ. ಅಷ್ಟರಲ್ಲಿ ಏನನ್ನು ಒಂದು ಮಾಡ್ಬಿಟ್ಟು ಹೋಗಬೇಕು.
ಗೋಪಾಕೃಷ್ಣ– – ನೋಡು ಮತ್ತೆ ಒಳ್ಳೇ ಪ್ಲಾನ್ ಹಾಕು.
ಕುಳ್ಳ ದೇವರಾಜ್– ರೆಡಿ ಮಾಡ್ತೀನಿ ನಾನು.
ಗೋಪಾಕೃಷ್ಣ– ಎಲ್ಲಾ ಕರೆಕ್ಟ್ ಆಗಿ ಮಾಡಬೇಕು. ಎಲ್ಲಾ ಮಾಡಿ ಫೈನಲ್ ನನಗೆ ಹೇಳು.

ಗೋಪಾಲಕೃಷ್ಣ: ಏನಂದ ಕಡಬಗೆರೆ ರುಬ್ತ ಇದ್ದಾರಂತೆ ಚೆನ್ನಾಗಿ
ಕುಳ್ಳ ದೇವರಾಜ್ ದೇವರಾಜ್​: ರುಬ್ತ ಇದ್ದಾರೆ ಹಾಕೊಂಡು, ನಂಗೆ ಮರಿ ಹಿಂಗೆ ಮಾಡಲಪ್ಪ, ಮಾಡೋದೆಲ್ಲ ಮಾಡಿ ನನ್ನ ಮೇಲೆ ನನ್ನ ಮೇಲೆ ಹಾಕಿದ.
ಕುಳ್ಳ ದೇವರಾಜ್ ದೇವರಾಜ್: ನೀನೆ ಅಂತೆ ಅಲ್ವಾ ಅಣ್ಣ, ಕೇಸ್​​ ಮಾಡಿಸಿದ್ದು?
ಗೋಪಾಲಕೃಷ್ಣ : ಯಾರ ಮೇಲೆ?
ಕುಳ್ಳ ದೇವರಾಜ್ : ಎಂಎಲ್​​ಎ ಮೇಲೆ ಅವರ ಮೇಲೆ ಇವರ ಮೇಲೆ
ಹೌದು ನಾನೇ ಮಾಡಿಸಿದ್ದು
ಕುಳ್ಳ ದೇವರಾಜ್ : ಶೂಟೌಟ್​​ ಅದೇ ತಾನೇ ಮಾಡಿಸಿದ್ದು ನೀನು?
ಗೋಪಾಲಕೃಷ್ಣ : ಕೇಸ್​ ಮಾಡಿಸ್ದೆ, ಯಾಕೆ ಮಾಡಬಾರದಾಗಿತ್ತು.
ಗೋಪಾಲಕೃಷ್ಣ : ಆ ಜಿದ್ದು ಇಟ್ಕೊಂಡು ಮಾಡ್ತಾ ಇದಾನ ಇವಾಗ?
ಕುಳ್ಳ ದೇವರಾಜ್ : ಹೋಗಿ ಹೋಗಿ ಅಂತ 420ಗಳಿಗೆ ಮಾಡ್ತೀಯಾ? ಕಡಬಗೆರೆ ಅಂತವರಿಗೆ ಸಪೋರ್ಟ್​​​
ಗೋಪಾಲಕೃಷ್ಣ : ಸಪೋರ್ಟ್​​​ ಅಂದ್ರೆ?
ಕುಳ್ಳ ದೇವರಾಜ್: ಆ ನನ್ನ ಮಕ್ಕಳು ಓಡಿ ಹೋಗ್ತಿದ್ದಾರೆ.
ಗೋಪಾಲಕೃಷ್ಣ : ದಿಗಿಲು ಫುಲ್​
ಕುಳ್ಳ ದೇವರಾಜ್: ಅವನು ಹೇಳ್ತಾ ಇರಲಿಲ್ಲ, ಎಂಎಲ್​ಎ ಮೇಲೆ ನಾನೇ ಹೇಳಿದ್ದು.
ಗೋಪಾಲಕೃಷ್ಣ: ನಾನು ಕೇಳುತ್ತೇನೆ? ಯಾರು ಇದಕ್ಕೆ ಮೂಲಕಾರಣ ಅಂತ ನೀನು ಹೇಳು? ಎಂಎಲ್​ಎನೇ, ನಾನು ಎಂಎಲ್ಎ ಕಡೆಯವನು. ಯಾಱರು ಎಂಎಲ್​ಎ ಕಡೆಯವರು ಅಂದ್ರೆ ಅವನು ಡಾನ್​​ ಸತೀಶ, ಟಾಟಾ ರಮೇಶ್,​​ ಗೂಣ್​​​ ಬಾಬು ಹೆಸರೆಲ್ಲ ಹೇಳು ಅಂದೆ
ಕುಳ್ಳ ದೇವರಾಜ್ : ನೀವು ಹೇಳಿ ಕೊಟ್ಟರ?
ಕುಳ್ಳ ದೇವರಾಜ್ : ಅವನು ದಿಗಿಲು ಬಿದ್ದು ಬಿಟ್ಟ
ಕುಳ್ಳ ದೇವರಾಜ್ : ಅವನು ಬಾಯಿ ಬಿಟ್ಟು ಹೇಳಿಲ್ಲ
ಗೋಪಾಲಕೃಷ್ಣ: ಹೇಳಿದ ಎಂಎಲ್​ಎ ಮತ್ತೆ ಅವರ ಕಡೆಯವರು ಅಂತ
ಗೋಪಾಲಕೃಷ್ಣ: ನಾನು ಡಿಸಿಪಿಗೆ ಇವನ್ನೆಲ್ಲಾ ಕೊಟ್ಟೆ
ಗೋಪಾಲಕೃಷ್ಣ: ಎಂಎಲ್​ಗೆ ನನ್ನ ಮೇಲೆ ಕುತ್ತಿಗೆಯಿದೆ.
ಕುಳ್ಳ ದೇವರಾಜ್ : ಯಾರ ಮೇಲೆ ಅಣ್ಣ?
ಗೋಪಾಲಕೃಷ್ಣ : ಆ ಹೆಸರು ಡ್ಯಾಮೇಜ್​ ಮಾಡಿರೋದು ನಾನೇ ಅಂತ
ಕುಳ್ಳ ದೇವರಾಜ್ : ಅದಿಕ್ಕೆ ಜಲ್ದಿ ರೆಡಿ ಮಾಡೋಣ
ಗೋಪಾಲಕೃಷ್ಣ: ನೀವು ರೆಡಿ ಮಾಡ್ರಿ
ಗೋಪಾಲಕೃಷ್ಣ: ನೀನು ಫೋನ್​​ ಹಾಕಬೇಕು, ಆಯ್ತ ಅಣ್ಣ, ಹೊರಟಾಯಿತು ಅಂತ ಹೇಳಬೇಕು.
ಕುಳ್ಳ ದೇವರಾಜ್ : ಈವಾಗ ಫಸ್ಟ್​​​ ಕೊಡಿಲ್ಲಿ ಕಾಸು
ಗೋಪಾಲಕೃಷ್ಣ: ಇವನು ಯಾವ ಲೆಕ್ಕ ಹೇಳು? ಸಿಲಿಂಡರ್​ ತಗೊಂಡು ಬಂದು ಒಬ್ಬನೇ ತಗೊಂಡು ಬಂದು ಡಮ್​​​ ಅನ್ಸುದ್ರೆ ಆಯ್ತು.
ಕುಳ್ಳ ದೇವರಾಜ್ : ಆಗಲಿ ಕಾಸ್​ ಬೇಡ್ವಾ?
ಗೋಪಾಲಕೃಷ್ಣ: ಒಬ್ಬನೇನಾ 50 ಲಕ್ಷ ಬರುತ್ತದೆ
ಕುಳ್ಳ ದೇವರಾಜ್ : ಒಬ್ಬನೇ ಇದ್ದಾಗ ಮಾಡ್ತೀವೋ? 10 ಜನ ಇದ್ದಾಗ ಮಾಡ್ತೀವೋ ನಿನಗ್ಯಾಕೆ?
ಗೋಪಾಲಕೃಷ್ಣ: ಹತ್ತು ಜನ ಬೇಡ, ಸೈಲೆಂಟಾಗಿ ಮಾಡಿಸಿ
ಕುಳ್ಳ ದೇವರಾಜ್ : ಮಾಡೋಡು ಮಾಡ್ತೀವಿ
ಗೋಪಾಲಕೃಷ್ಣ: ತೋಟದಲ್ಲಿ ಕ್ಯಾಮೆರಾ ಇರಲಿಲ್ಲ…….ಇರಲಿಲ್ಲ, ಟಿಂಗ್​ ಟಿಂಗ್​ ಟಿಂಗ್​ ಅನಥ ಹಾರ್ಸ್​ ಇ್ರೆ ಆಗಿರೋದು.
ಕುಳ್ಳ ದೇವರಾಜ್​: ಕ್ಯಾಮೆರಾ ಇರಲಿ ಬಿಡು, ಕ್ಯಾಮರಾ ಇದ್ರೆ ಏನು?
ಗೋಪಾಲಕೃಷ್ಣ: .……ನೀನು ಪಟ್ಟಂತ ರೆಡಿ ಮಾಡು,
ಕುಳ್ಳ ದೇವರಾಜ್ : 5 ಲಕ್ಷ ಕೂಡ ಅಡ್ವಾನ್ಸ್​​​
ಗೋಪಾಲಕೃಷ್ಣ: ಆಯ್ತು ಅಡ್ವಾನ್ಸ್​ ಕೊಟ್ಟರೆ ಎಷ್ಟು ದಿನಕ್ಕೆ ಫಿನಿಶ್​​​ ಮಾಡ್ತೀಯಾ?
ಕುಳ್ಳ ದೇವರಾಜ್ : ಅಡ್ವಾನ್ಸ್​​​​ ಕೊಟ್ಟು ಬಿಟ್ಟರೆ, ಒಳ್ಳೆಯ ಟೈಮ್​​ ಹೇಳ್ತೀನಿ. ಇನ್ನೊಂದು ಸ್ಪಲ್ಪ ಕೊಡು
ಕುಳ್ಳ ದೇವರಾಜ್: ಒಂದು ತಿಂಗಳು, ಒಂದುವರೆ ತಿಂಗಳು
ಗೋಪಾಲಕೃಷ್ಣ: ಏನಕ್ಕೆ ಒಂದೂವರೆ ತಿಂಗಳು, ಮೂರು ದಿನ ಅಲ್ಲಿ ಓಡಾಡಿ ಬಿಟ್ಟರೆ ಆಯ್ತು.
ಕುಳ್ಳ ದೇವರಾಜ್: ಆಲ್​ರೆಡಿ ಓಡಾಡುತ್ತಿದ್ದಾರೆ ಅಣ್ಣ, ಒಂದೊಂದು ದಿನ, ಒಂದೊಂದು ಕಾರ್​​ನಲ್ಲಿ ಬರ್ತಾರೆ
ಗೋಪಾಲಕೃಷ್ಣ: ಇಲ್ಲ ಜೀಪ್​
ಕುಳ್ಳ ದೇವರಾಜ್: ಎಂಎಲ್​ಎ ಮೇಲೆ ಹಾಕೋಕೆ ಪ್ಲಾನ್​ ಮಾಡಿದ್ರಂತಲ್ಲ?
ಗೋಪಾಲಕೃಷ್ಣ: ಅದು ನಿಜಾ
ಕುಳ್ಳ ದೇವರಾಜ್: ಅದನ್ನೇ ಹೇಳಿದ್ದು ಅವನು, ಎಲ್ಲಾ ಅವನೇ ಮಾಡಿಸಿದ್ದು, ನಾನು ಹೆಂಗೂ ಆರಾಮಾಗಿ ಬೆಡ್​ ಮೇಲೆ ಮಲ್ಕೊಂಡಿದ್ದೆ.
ಕುಳ್ಳ ದೇವರಾಜ್: ಹಂಗೆ ಹೇಳು, ಹಿಂಗೆ ಹೇಳು ಅಂತ ನನ್ನ ಹಾಳು ಮಾಡಿದ

ಕುಳ್ಳ ದೇವರಾಜ್: ಏನ್​ ಅಣ್ಣ
ಗೋಪಾಲಕೃಷ್ಣ: ಅಲ್ಲಿ ಬೆಳಗ್ಗೆ 6ಗಂಟೆಯಿಂದ 7.30ರವರೆಗೂ ಒಬ್ಬನೇ ಇರ್ತಾನೆ.
ಗೋಪಾಲಕೃಷ್ಣ: ಒಬ್ಬನೇ ಇರ್ತಾನೆ, ಬಾರಿ ಚಾನ್ಸು, ಒಬ್ಬನೇ ಇರ್ತಾನೆ
ಕುಳ್ಳ ದೇವರಾಜ್​: ಬೆಳಗ್ಗೆ ಕಳುಹಿಸಿದ್ದ ಎರಡು ಪಲ್ಸರ್​ ಬಂದಿದ್ರು ಇವತ್ತು, ತೋಟದಾಗೆ
ಗೋಪಾಲಕೃಷ್ಣ: 6 ಗಂಟೆಯಿಂದ 7.30 ರವರೆಗೂ
ಗೋಪಾಲಕೃಷ್ಣ: ಯಾವನು ದಿಕ್ಕೇ ಇರಲ್ಲ, 7 ಗಂಟೆಗೆ ವಾಪಸ್​ ಬಂದರು
ಗೋಪಾಲಕೃಷ್ಣ: 6 ಗಂಟೆಯಿಂದ 7.30 ಒಳ್ಳೇ ಚಾನ್ಸು, ಯಾವನು ದಿಕ್ಕೇ ಇರಲ್ಲ, ಅದಿಕ್ಕೆ ನಿನ್ನತ್ರ ಹೇಳಿದ್ದು, ನೋಡಿ ಆಮೇಲೆ ಮಾಡಿದ್ರೆ ಸಾಕು.
ಅದಿಕ್ಕೆ ನಿನ್ನತ್ರ ಹೇಳಿದ್ದು, ಫಸ್ಟ್​​ ಒಂದೆರಡು ದಿನ ವಾತಾವರಣ ನೋಡಿ, ಆಮೇಲೆ ಮಾಡಿದ್ರೆ ಸಾಕು.
ಕುಳ್ಳ ದೇವರಾಜ್​: ಕೊಡು ಖರ್ಚಿಗೆ ಎಲ್ಲಿಂದ ತರಲಿ? ಡೈಲಿ 5ಸಾವಿರ ಬೇಕು ಅವರ
ಕುಳ್ಳ ದೇವರಾಜ್: ಏನ್​ ಅಣ್ಣ
ಗೋಪಾಲಕೃಷ್ಣ: ಅಲ್ಲಿ ಬೆಳಗ್ಗೆ 6ಗಂಟೆಯಿಂದ 7.30ರವರೆಗೂ ಒಬ್ಬನೇ ಇರ್ತಾನೆ.
ಗೋಪಾಲಕೃಷ್ಣ: ಒಬ್ಬನೇ ಇರ್ತಾನೆ, ಬಾರಿ ಚಾನ್ಸು, ಒಬ್ಬನೇ ಇರ್ತಾನೆ
ಕುಳ್ಳ ದೇವರಾಜ್​: ಬೆಳಗ್ಗೆ ಕಳುಹಿಸಿದ್ದ ಎರಡು ಪಲ್ಸರ್​ ಬಂದಿದ್ರು ಇವತ್ತು, ತೋಟದಾಗೆ
ಗೋಪಾಲಕೃಷ್ಣ: 6 ಗಂಟೆಯಿಂದ 7.30 ರವರೆಗೂ
ಗೋಪಾಲಕೃಷ್ಣ: ಯಾವನು ದಿಕ್ಕೇ ಇರಲ್ಲ, 7 ಗಂಟೆಗೆ ವಾಪಸ್​ ಬಂದರು
ಗೋಪಾಲಕೃಷ್ಣ: 6 ಗಂಟೆಯಿಂದ 7.30 ಒಳ್ಳೇ ಚಾನ್ಸು, ಯಾವನು ದಿಕ್ಕೇ ಇರಲ್ಲ, ಅದಿಕ್ಕೆ ನಿನ್ನತ್ರ ಹೇಳಿದ್ದು, ನೋಡಿ ಆಮೇಲೆ ಮಾಡಿದ್ರೆ ಸಾಕು.
ಅದಿಕ್ಕೆ ನಿನ್ನತ್ರ ಹೇಳಿದ್ದು, ಫಸ್ಟ್​​ ಒಂದೆರಡು ದಿನ ವಾತಾವರಣ ನೋಡಿ, ಆಮೇಲೆ ಮಾಡಿದ್ರೆ ಸಾಕು.
ಕುಳ್ಳ ದೇವರಾಜ್​: ಕೊಡು ಖರ್ಚಿಗೆ ಎಲ್ಲಿಂದ ತರಲಿ? ಡೈಲಿ 5ಸಾವಿರ ಬೇಕು ಅವರ
ಗೋಪಾಲಕೃಷ್ಣ: ಹೌದಾ?
ಕುಳ್ಳ ದೇವರಾಜ್: ಹ್ಹಾ ಮತೆ
ಗೋಪಾಲಕೃಷ್ಣ: ಎಲ್ಲಿರೋದು ಅವರು? (24.13- 24.28)
ಪಾಂಡಿಚೇರಿ. ಅವರಿಗೆ ಗೊತ್ತಿಲ್ಲ ಎಂಎಲ್​ಎ ಅಂತ, ಸಿಂಪಲ್​​​ ರಿಯಲ್​ ಎಸ್ಟೇಟ್​ ಅಂತ ಹೇಳಿದ್ದೇನೆ.
ಗೋಪಾಲಕೃಷ್ಣ: ಅವರಿಗೆ ತೋರಿಸಿದ್ಯಾ?
ಕುಳ್ಳ ದೇವರಾಜ್: ತೋರಿಸಿದ್ದೇನೆ, ಆಲ್​​ರೆಡಿ
ಕುಳ್ಳ ದೇವರಾಜ್ : ನೀನು ಜಲ್ದಿ ರೆಡಿ ಮಾಡಿದ್ರೆ
ಗೋಪಾಲಕೃಷ್ಣ: ನೆಕ್ಸ್ಟ್​​​​​ ವೀಕ್​ ಮಾಡ್ತೀನಿ
ಕುಳ್ಳ ದೇವರಾಜ್: ಎರಡು ಪಲ್ಸರ್ ಯಾವುದು ಬೆಸ್ಟ್​​?
ಪಲ್ಸರ್​ ಬೆಸ್ಟ, ಯಾವುದು ಬೆಸ್ಟ್​​?
ಗೋಪಾಲಕೃಷ್ಣ: ಸಾಕು ಪಲ್ಸರ್​​​
ಕುಳ್ಳ ದೇವರಾಜ್: ಎರಡು ಪಲ್ಸರ್​​
ಗೋಪಾಲಕೃಷ್ಣ: ಅವನು ಜೀಪು ಓಡಿಸಿಕೊಂಡು ಬರುತ್ತಾನೆ.
ಕುಳ್ಳ ದೇವರಾಜ್ : ಅವನು ಬರ್ತಾನ?
ಗೋಪಾಲಕೃಷ್ಣ: ಜೀಪ್​​ ಓಡಿಸಿಕೊಂಡು ಬಂದೇ ಬರ್ತಾನೆ
ಗೋಪಾಲಕೃಷ್ಣ: ಬಂದಾಗ ಮಾಡಬೇಕು

News First Live Kannada


Leave a Reply

Your email address will not be published. Required fields are marked *