ಮಂಗಳೂರು: ಕೊರೊನಾ ಸೋಂಕು ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿದ್ದರೂ ದಕ್ಷಿಣ ಕನ್ನಡದ ಅದೊಂದು ಗ್ರಾಮ ಮಾತ್ರ ಮೊದಲ ಮತ್ತು ಎರಡನೇ ಅಲೆಯಲ್ಲೂ ಸಹ ಕೊರೊನಾ ಮುಕ್ತವಾಗಿ ಉಳಿದಿದೆ.

ಕೊರೊನಾ ಸೋಂಕಿನ ವಿರುದ್ಧ ಹಳ್ಳಿಯ ಜನರು ಒಗ್ಗಟ್ಟಿನ ಹೋರಾಟ ನಡೆಸಿದ ಫಲವೆಂಬಂತೆ ವಿಶ್ವವನ್ನೇ ಬಾಧಿಸಿದರೂ ಈ ಕುಗ್ರಾಮಕ್ಕೆ ಕೊರೊನಾಗೆ ಎಂಟ್ರಿ ಕೊಡಲಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ಗ್ರಾಮವೇ ಕೊರೊನಾ ಫ್ರೀ ಗ್ರಾಮ.

ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಂಜಾರುಮಲೆ ಗ್ರಾಮ.. ಬೆಳ್ತಂಗಡಿ ಯಿಂದ 35 ಕಿ ಮೀ ದೂರದಲ್ಲಿದೆ. ದಟ್ಟ ಕಾನನದ ನಡುವೆ ಇರುವ ಬಾಂಜಾರುಮಲೆ ಗ್ರಾಮದಲ್ಲಿ ಕೊರೊನಾದ ಎರಡೂ ಅಲೆಯಲ್ಲೂ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ. ಗ್ರಾಮದಲ್ಲಿ 40 ಕ್ಕೂ ಹೆಚ್ಚು ಕುಟುಂಬದ 170ಕ್ಕೂ ಹೆಚ್ಚು ಜನರಿದ್ದಾರೆ.

ಈ ಗ್ರಾಮಕ್ಕೆ ಕೊರೊನಾ ಸೋಂಕು ಬಾರದಿರಲು ಕಾರಣ ಏನು..?
ಪೇಟೆಯಿಂದ ಅಂತರ ಕಾಯ್ದುಕೊಂಡಿರುವ ಕುಗ್ರಾಮದ ಜನರಿಗೆ ಗ್ರಾಮದ ಇಬ್ಬರು ಪೇಟೆಯಿಂದ ದಿನಸಿ ವಸ್ತು ತಂದುಕೊಡ್ತಾರೆ. ಎಲ್ಲಾ ಮನೆಯಿಂದ ದಿನಸಿ ಚೀಟಿ ಸಂಗ್ರಹಿಸಿ ಅಂಗಡಿಯಿಂದ ದಿನಸಿಗಳನ್ನ ತಂದುಕೊಡುವ ಮೂಲಕ ಭಾರೀ ಮುಂಜಾಗ್ರತೆ ವಹಿಸಿದ್ದಾರೆ. ಇನ್ನು ಗ್ರಾಮದೊಳಗೆ ಹೊರಗಿನಿಂದ ಯಾರೂ ಬರುವಂತಿಲ್ಲ, ಯಾರೂ ಹೊರಹೋಗುವಂತಿಲ್ಲ. ಸ್ವಯಂ ಶಿಸ್ತು ಪಾಲಿಸಿ ಕೊರೊನಾವನ್ನು ಗ್ರಾಮದೊಳಗೆ ನುಸುಳದಂತೆ ಜನರು ಎಚ್ಚರ ವಹಿಸಿದ್ದಾರೆ.

The post ವಿಶ್ವವನ್ನೇ ಸುತ್ತಾಡಿದ ಕೊರೊನಾಗೆ ಈ ಗ್ರಾಮಕ್ಕೆ ಎಂಟ್ರಿ ಕೊಡೋಕಾಗಿಲ್ಲ.. ಏನಿದರ ಸೀಕ್ರೆಟ್ appeared first on News First Kannada.

Source: newsfirstlive.com

Source link