ವಿಶ್ವ ಆರೋಗ್ಯ ಅಸೆಂಬ್ಲಿಯ ಪ್ರಮುಖ ಸಮಿತಿ ಅಧ್ಯಕ್ಷರಾಗಿ ಭಾರತದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೇಮಕ | Rajesh Bhushan appointed as chairperson of key committee at the 75th World Health Assembly


ವಿಶ್ವ ಆರೋಗ್ಯ ಅಸೆಂಬ್ಲಿಯ ಪ್ರಮುಖ ಸಮಿತಿ ಅಧ್ಯಕ್ಷರಾಗಿ ಭಾರತದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೇಮಕ

ರಾಜೇಶ್ ಭೂಷಣ್

ಭಾರತದ ರಾಜೇಶ್ ಭೂಷಣ್ ಅವರನ್ನು 75 ನೇ ವಿಶ್ವ ಆರೋಗ್ಯ ಅಸೆಂಬ್ಲಿಯ ಬಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.

ದೆಹಲಿ: ಭಾರತದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್  (Rajesh Bhushan)ಅವರನ್ನು ಮಂಗಳವಾರ 75 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ (75th World Health Assembly) ಪ್ರಮುಖ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಸಮಿತಿ ಪ್ರಾಥಮಿಕವಾಗಿ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ಹಣಕಾಸು ಮತ್ತು ನಿರ್ವಹಣೆ ವಿಷಯಗಳನ್ನು ನಿಭಾಯಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ವಾರ್ಷಿಕ ಸಭೆಯು ಮೇ 22 ಮತ್ತು 28 ರ ನಡುವೆ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನಡೆಯಲಿದೆ. ಆರೋಗ್ಯವನ್ನು ಉತ್ತೇಜಿಸಲು ಮತ್ತು ಪ್ರಪಂಚದಾದ್ಯಂತ ರೋಗದ ಹೊರೆಯನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಲಾಗಿತ್ತು. ವಿಶ್ವ ಸಂಸ್ಥೆಯ ಭಾಗವಾಗಿರುವ ಇದು ಭಾರತವನ್ನು ಒಳಗೊಂಡಿರುವ ತನ್ನ 194 ಸದಸ್ಯ ರಾಷ್ಟ್ರಗಳಿಂದ ತನ್ನ ಗುರಿಗಳು ಮತ್ತು ಆದ್ಯತೆಗಳಿಗೆ ನಿರ್ದೇಶನವನ್ನು ತೆಗೆದುಕೊಳ್ಳುತ್ತದೆ. ಪ್ರತಿ ವರ್ಷ ವರ್ಲ್ಡ್ ಹೆಲ್ತ್ ಅಸೆಂಬ್ಲಿಯು ಆರೋಗ್ಯ ಸವಾಲುಗಳು ಮತ್ತು ವಿಮರ್ಶೆಗೆ ಪ್ರತಿಕ್ರಿಯೆಗಳ ದೀರ್ಘ ಮತ್ತು ಸಂಕೀರ್ಣ ಪಟ್ಟಿಯನ್ನು ಹೊಂದಿದೆ. ಅಸೆಂಬ್ಲಿಯು ಸಮಿತಿ A ಮತ್ತು ಸಮಿತಿ B ಎಂಬ ಎರಡು ರೀತಿಯ ಸಮಿತಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಸಮಿತಿ ಎ ತಾಂತ್ರಿಕ ಮತ್ತು ಆರೋಗ್ಯ ವಿಷಯಗಳನ್ನು ಚರ್ಚಿಸಲು ಉದ್ದೇಶಿಸಲಾಗಿದೆ. ಅದೇ ವೇಳೆ ಸಮಿತಿ ಬಿ ಹಣಕಾಸು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಚರ್ಚಿಸುತ್ತದೆ. ರಾಜೇಶ್ ಭೂಷಣ್ ಅವರನ್ನು ಸಮಿತಿ ಬಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಭಾರತದ ರಾಜೇಶ್ ಭೂಷಣ್ ಅವರನ್ನು 75 ನೇ ವಿಶ್ವ ಆರೋಗ್ಯ ಅಸೆಂಬ್ಲಿಯ ಬಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.

ಭಾರತದ ಪ್ರೆಸ್ ಆಂಡ್ ಇನ್ಫಾರ್ಮೇಷನ್ ಬ್ಯೂರೋ ಪ್ರಕಾರ ಸಮಿತಿ B, ಈ ವರ್ಷ, ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ವರದಿಗಳನ್ನು ಸಿದ್ಧಪಡಿಸುತ್ತದೆ. ವಿಷಯಗಳು ಪೂರ್ವ ಜೆರುಸಲೆಮ್ ಮತ್ತು ಆಕ್ರಮಿತ ಸಿರಿಯನ್ ಗೋಲಾನ್ ಸೇರಿದಂತೆ ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರದೇಶದ ಆರೋಗ್ಯ ಪರಿಸ್ಥಿತಿಗಳನ್ನು ಒಳಗೊಂಡಿವೆ. 2022-2023 ವರ್ಷದ ಡಬ್ಲ್ಯುಎಚ್ ಒ ಬಜೆಟ್, ಲೈಂಗಿಕ ಶೋಷಣೆಯ ತಡೆಗಟ್ಟುವಿಕೆ, ಡಬ್ಲ್ಯುಎಚ್​​ಒ ಸುಧಾರಣೆಗಳು, ಜಾಗತಿಕ ಕಾರ್ಯತಂತ್ರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಕ್ರಿಯಾ ಯೋಜನೆ, ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ, ಡಬ್ಲ್ಯುಎಚ್​​ಒನ ಆಡಿಟ್ ವರದಿ ಮತ್ತು ಅಂತರ್ ಸರ್ಕಾರಿ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ವರದಿ ಸಿದ್ಧ ಪಡಿಸಲಿದೆ..

ಇದಕ್ಕೆ ಪ್ರತಿಕ್ರಿಯೆಯಾಗಿ ಆರೋಗ್ಯ ಕಾರ್ಯದರ್ಶಿ ಅವರು “ಇದು ಭಾರತಕ್ಕೆ ಸಂದ ಗೌರವದೆ” ಎಂದು ಹೇಳಿದರು.

ಏತನ್ಮಧ್ಯೆ, ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಎರಡನೇ ಅವಧಿಯನ್ನು ಮುಂದುವರಿಸುವ ಸಾಧ್ಯತೆಯಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರ ಪ್ರಕಾರ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

TV9 Kannada


Leave a Reply

Your email address will not be published. Required fields are marked *