ಕ್ರಿಕೆಟ್​​ ಅಂದ್ರೆನೇ ಹಣದ ಹೊಳೆ ಅನ್ನೋ ಮಾತಿದೆ. ಅದು ನಿಜ ಕೂಡ ಬಿಡಿ. ಪ್ರತಿ ಪಂದ್ಯ, ಪ್ರತಿ ಸರಣಿಗೂ ಕ್ರಿಕೆಟ್​​ ಮಂಡಳಿಗಳು ಕೋಟಿ – ಕೋಟಿ ಸುರಿದು ಅದರ ಡಬಲ್​ ಸಂಪಾದನೆ ಮಾಡೋದು ಎಲ್ಲರಿಗೂ ತಿಳಿದಿರೊ ಸತ್ಯ..! ಕೇವಲ ಮಂಡಳಿಗಳು ಮಾತ್ರವಲ್ಲ..! ಪ್ರತಿ ತಂಡಗಳ ನಾಯಕರುಗಳು ವಾರ್ಷಿಕವಾಗಿ ಕೋಟಿ-ಕೋಟಿ ಜೇಬಿಗಿಳಿಸ್ತಾರೆ.

 

ಸಂಪಾದನೆಯಲ್ಲಿ ಆಂಗ್ಲ ಟೆಸ್ಟ್​​ ನಾಯಕನೇ ಕಿಂಗ್​..!
ವರ್ಷಕ್ಕೆ ರೂಟ್​​ ಸಂಬಳ ಬರೋಬ್ಬರಿ 8.9 ಕೋಟಿ..!

 

ಯೆಸ್​​..! ಸದ್ಯದ ಶ್ರೀಮಂತ ನಾಯಕರ ಪಟ್ಟಿಯಲ್ಲಿ ಜೋ ರೂಟ್​​ಗೆ ಮೊದಲ ಸ್ಥಾನ. ಗಳಿಕೆಯ ವಿಚಾರದಲ್ಲಿ ಕೇವಲ ಟೆಸ್ಟ್​​ ತಂಡವನ್ನ ಮಾತ್ರ ಮುನ್ನಡೆಸುವ ರೂಟ್​​ ಉಳಿದೆಲ್ಲಾ ನಾಯಕರನ್ನೂ ಹಿಂದಿಕ್ಕಿದ್ದಾರೆ. ಇಂಗ್ಲೆಂಡ್​​ ಕ್ರಿಕೆಟ್​​ನ ಟೆಸ್ಟ್​ ತಂಡದ ನಾಯಕ ರೂಟ್​ ವಾರ್ಷಿಕ ವೇತನ 8.9 ಕೋಟಿ ಅಂದ್ರೆ ನೀವು ನಂಬಲೇಬೇಕು…!

2ನೇ ಸ್ಥಾನದಲ್ಲಿ ಟೀಮ್​ ಇಂಡಿಯಾ ನಾಯಕ ಕಿಂಗ್​ ಕೊಹ್ಲಿ..!

ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿ ವಿಶ್ವದ ಶ್ರೀಮಂತ ಕ್ರಿಕೆಟ್​​ ಮಂಡಳಿ. ಆದ್ರೆ, BCCI ತಂಡದ ನಾಯಕನಿಗೆ ನೀಡೋ ವಾರ್ಷಿಕ ವೇತನ ಇಂಗ್ಲೆಂಡ್​​​ ಮಂಡಳಿ ತನ್ನ ಟೆಸ್ಟ್​ ಕ್ಯಾಪ್ಟನ್​ಗೆ ನೀಡುವ ವೇತನಕ್ಕಿಂತ ಕಡಿಮೆ. ವಾರ್ಷಿಕವಾಗಿ ಬರೋಬ್ಬರಿ 8.9 ಕೋಟಿ ಸಂಪಾದಿಸುವ ಜೋ ರೂಟ್​​ ಮೊದಲ ಸ್ಥಾನದಲ್ಲಿದ್ರೆ, ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್​, ಏಕದಿನ, ಟಿ20 ಮೂರು ಮಾದರಿಯಲ್ಲಿ ತಂಡವನ್ನ ಮುನ್ನಡೆಸುತ್ತಿರುವ ಕೊಹ್ಲಿಯ ವಾರ್ಷಿಕ ವೇತನ 7 ಕೋಟಿ ..!

3ನೇ ಸ್ಥಾನದಲ್ಲಿ ಆಸಿಸ್​ ನಾಯಕರು..!

ಆಸ್ಟ್ರೇಲಿಯಾ ತಂಡದ ನಾಯಕರಾದ ಆ್ಯರೋನ್​ ಫಿಂಚ್​​, ಟಿಮ್​ ಪೇನ್​ ವೇತನದ ಪಟ್ಟಿಯಲ್ಲಿ ಜಂಟಿಯಾಗಿ 3ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್​​ ತಂಡದ ನಾಯಕ ಪೇನ್​ ಹಾಗೂ ಸೀಮಿತ ಓವರ್​​ಗಳ ತಂಡದ ನಾಯಕ ಆ್ಯರೋನ್​ ಫಿಂಚ್​​ ವಾರ್ಷಿಕವಾಗಿ ತಲಾ 4.8 ಕೋಟಿ ವೇತನ ಪಡೆದುಕೊಳ್ತಿದ್ದಾರೆ.

ಆಸ್ಟ್ರೇಲಿಯಾ ತಂಡದ ಇಬ್ಬರು ನಾಯಕರು ಸಮಾನ ವೇತನವನ್ನ ಪಡೀತಾ ಇದ್ರೆ, ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ನಾಯಕರುಗಳ ಗಳಿಕೆಯಲ್ಲಿ ವ್ಯತ್ಯಾಸವಿದೆ. ಕಳೆದ ವರ್ಷ್ಯಾಂತ್ಯದಲ್ಲಿ ಡೀನ್​ ಎಲ್ಗರ್​ 3.2 ಕೋಟಿ ವಾರ್ಷಿಕ ವೇತನ ಪಡೆದಿದ್ರೆ, ಟೆಂಬಾ ಬಾವುಮಾ 2.5 ಕೋಟಿ ಜೇಬಿಗಿಳಿಸಿದ್ದಾರೆ.

ಈ ಎಲ್ಲಾ ಆಟಗಾರರು 2 ಕೋಟಿಗಿಂತಲೂ ಹೆಚ್ಚಿನ ಸಂಪಾದನೆಯಲ್ಲಿದ್ರೆ, ನ್ಯೂಜಿಲೆಂಡ್, ​ವೆಸ್ಟ್​​ ಇಂಡೀಸ್​ ನಾಯಕರುಗಳ ವೇತನ 2 ಕೋಟಿಯ ಗಡಿಯನ್ನೇ ದಾಟಿಲ್ಲ. ಅಷ್ಟೇ ಏಕೆ..? ಟೆಸ್ಟ್​ ತಂಡದ ನಾಯಕನಿಗೆ ಬರೋಬ್ಬರಿ 8.9 ಕೋಟಿ ನೀಡೋ ಇಂಗ್ಲೆಂಡ್​ ಕ್ರಿಕೆಟ್​​ ಮಂಡಳಿ, ಸೀಮಿತ ಓವರ್​​ಗಳ ತಂಡದ ನಾಯಕ ಇಯಾನ್​ ಮಾರ್ಗನ್​ ನೀಡೋ ಸಂಬಳ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತೆ..!

ನಾಯಕರ ಸಂಪಾದನೆ
ನಾಯಕ                                       ವೇತನ
ವಿಲಿಯಮ್​ಸನ್​                        1.77 ಕೋಟಿ
ಮಾರ್ಗನ್​                                 1.75 ಕೋಟಿ
ಪೊಲಾರ್ಡ್​​                               1.73 ಕೋಟಿ
ಬ್ರಾಥ್​​ವೇಟ್​                             1.39 ಕೋಟಿ

 

ಪಾಕ್​, ಲಂಕಾ ನಾಯಕರಿಗೆ ಲಕ್ಷದ ಲೆಕ್ಕದಲ್ಲಿ ಸಂಭಾವನೆ..!

ಯೆಸ್​​..! ಉಳಿದೆಲ್ಲಾ ನಾಯಕರುಗಳ ಸಂಪಾದನೆ ಕೋಟಿಯ ಲೆಕ್ಕದಲ್ಲಿದ್ರೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡದ ಕ್ಯಾಪ್ಟನ್​ಗಳ ವೇತನ ಕೇವಲ ಕೋಟಿಯ ಗಡಿಯನ್ನೇ ತಲುಪಿಲ್ಲ…!

ಲಂಕಾ-ಪಾಕ್​ ನಾಯಕರ ಸಂಪಾದನೆ

ನಾಯಕ                                ವೇತನ
ಬಾಬರ್​​ ಅಜಮ್​                  62.4 ಲಕ್ಷ
ಕರುಣರತ್ನೆ                             51 ಲಕ್ಷ
ಕುಸಾಲ್​ ಪೆರೆರಾ                    25 ಲಕ್ಷ

ಇದೀಷ್ಟು ಕ್ರಿಕೆಟ್​ ಮಂಡಳಿಗಳು ತಮ್ಮ ಆಟಗಾರರಿಗೆ ವಾರ್ಷಿಕವಾಗಿ ನೀಡುವ ಒಪ್ಪಂದ ಪ್ರಕಾರ ನೀಡುವ ಹಣ. ಇದರ ಹೊರತಾಗಿ ಐಪಿಎಲ್​, ಬ್ರಾಂಡ್​ಗಳ ಪ್ರಾಯೋಜಕತ್ವ, ಷೇರುಗಳು ಇತ್ಯಾದಿ ಮೂಲಗಳಿಂದಲೂ ಕ್ರಿಕೆಟಿಗರು ಕೋಟಿ ಕೋಟಿ ಸಂಪಾದಿಸ್ತಾರೆ ಅನ್ನೋದು ನಿಮಗೂ ಗೊತ್ತಿರೋ ಸಂಗತಿಯೇ..! ಅವುಗಳ ಬಗೆಗಿನ ಮಾಹಿತಿಯನ್ನ ಮುಂದೆ ನಿಮ್ಮ ಮುಂದೆ ಇಡ್ತೀವಿ.

The post ವಿಶ್ವ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ಯಾರು..? appeared first on News First Kannada.

Source: newsfirstlive.com

Source link