ಭಾರತ-ನ್ಯೂಜಿಲೆಂಡ್​​ ನಡುವಿನ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಜೂನ್ 18ರಂದು ಸೌತಾಂಪ್ಟನ್​ನಲ್ಲಿ ನಡೆಯಲಿರುವ ಮಹತ್ವದ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ ಮಂಡಳಿ ಕೂಡ ಈ ಪಂದ್ಯವನ್ನ ಯಶಸ್ವಿಯಾಗಿಸುವತ್ತ ಚಿತ್ತ ಹರಿಸಿದೆ.

ಇದೀಗ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಐಸಿಸಿ ಪಂದ್ಯದ 5 ದಿನಗಳ ಹೊರತಾಗಿ ಮತ್ತೊಂದು ದಿನವನ್ನ ಕಾಯ್ದಿರಿಸಲು ಐಸಿಸಿ ನಿರ್ಧರಿಸಿದೆ ಎಂದು ವರದಿಯಾಗಿದೆ. 5 ದಿನಗಳ ಪಂದ್ಯದಲ್ಲಿ ಒಟ್ಟು 30 ಘಂಟೆಗಳ ಪಂದ್ಯ ನಡೆಯಬೇಕು ಅಥವಾ 450 ಓವರ್​​ಗಳು ಕಂಪ್ಲೀಟ್​​ ಆಗಬೇಕು. ಒಂದು ವೇಳೆ ಮೊದಲ 5 ದಿನದ ಪಂದ್ಯದ ಅವಧಿಯಲ್ಲಿ ಇದು ಆಗದಿದ್ದಲ್ಲಿ ಕಾಯ್ದಿರಿಸಿದ ದಿನದಲ್ಲಿ ಪಂದ್ಯವನ್ನ ಮುಂದುವರೆಸಲು ಐಸಿಸಿ ಯೋಜನೆ ಹಾಕಿಕೊಂಡಿದೆ ಎಂದು ವರದಿಯಾಗಿದೆ.

ಈ ಹಿಂದೆ ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾದ್ರೆ ಯಾರಿಗೆ ಚಾಂಪಿಯನ್​ ಪಟ್ಟ ಎಂಬ ಪ್ರಶ್ನೆ ಹೆಚ್ಚಾಗಿ ಸದ್ದು ಮಾಡ್ತಿದೆ. ಇದಕ್ಕೆ ಎರಡೂ ತಂಡಗಳನ್ನ ಜಂಟಿ ಚಾಂಪಿಯನ್​ ಎಂದು ಘೋಷಿಸಲು ಐಸಿಸಿ ತೀರ್ಮಾನಿಸಿತ್ತು. ಆದ್ರೆ, ಮಹತ್ವದ ಟೂರ್ನಿಯಲ್ಲಿ ಜಂಟಿ ಚಾಂಪಿಯನ್​ ಘೋಷಿಸುವ ಬದಲು ಏಕೈಕ ವಿನ್ನರ್​ ಘೋಷಿಸಬೇಕೆಂಬ ನಿಲುವು ವ್ಯಕ್ತವಾದ ಹಿನ್ನೆಲೆಯಲ್ಲಿ ಐಸಿಸಿ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

The post ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ 5 ದಿನದ ಪಂದ್ಯವಲ್ಲ, 6 ದಿನದ್ದು..? appeared first on News First Kannada.

Source: newsfirstlive.com

Source link