ಇಂದಿನಿಂದ 5 ದಿನಗಳ ಕಾಲ ಇಂಗ್ಲೆಂಡ್​​​ನಲ್ಲಿ ಐತಿಹಾಸಿಕ ಟೆಸ್ಟ್ ಚಾಂಪಿಯನ್​​ ಶಿಪ್ ಫೈನಲ್ ಪಂದ್ಯಾಟ ನಡೆಯಲಿದ್ದು, ಭಾರತ-ಇಂಗ್ಲೆಂಡ್ ಸೆಣೆಸಾಡಲಿವೆ. ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ತಂಡ ಪ್ರಕಟವಾಗಿದ್ದು, ಬೌಲಿಂಗ್ ವಿಭಾಗದಲ್ಲಿ ಇಬ್ಬರು ಸ್ಪಿನ್ನರ್‌ಗಳು ಹಾಗೂ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯಲು ಟೀಮ್ ಇಂಡಿಯಾ ನಿರ್ಧರಿಸಿದೆ.

ಟೀಂ ಇಂಡಿಯಾ ಹಾಗೂ ಕಿವಿಸ್​ ನಡುವೆ ಭಾರೀ ಹಣಾಹಣಿ
ಇತಿಹಾಸದ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​​ ಶಿಪ್ ಫೈನಲ್​​​​ಗೆ ಇಂಗ್ಲೆಂಡ್​​ನ ಹ್ಯಾಂಪ್ಶೈರ್ ಬೌಲ್ ಸಾಕ್ಷಿಯಾಗ್ತಿದೆ. ಇಂದು ನಡೆಯಲಿರೋ ಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್​​ ಸೆಣೆಸಾಡಲಿವೆ. ವಿಶ್ವ ಟೆಸ್ಟ್​​​ ಚಾಂಪಿಯನ್ ​​ಶಿಪ್ ಐತಿಹಾಸಿಕ ಪಂದ್ಯವಾಗಿದ್ದು, ಫೈನಲ್​​​ನಲ್ಲಿ ಯಾರೇ ಗೆದ್ದರೂ ಅದು ದಾಖಲೆಯಾಗುತ್ತದೆ. ಹೀಗಾಗಿ ಭಾರತ ಭರ್ಜರಿ ತಯಾರಿಯನ್ನೂ ಮಾಡ್ಕೊಂಡಿದೆ. ನಿನ್ನೆ ಸಂಜೆ ಬಿಸಿಸಿಐ ಅಂತಿಮ 11ರ ಬಳಗದಲ್ಲಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.

ಮೂವರು ಸ್ಪೀಡ್ ಬೌಲರ್ಸ್​​ಗೆ ಪ್ಲೇಯಿಂಗ್​ 11ನಲ್ಲಿ ಮಣೆ
ರೋಹಿತ್ ಶರ್ಮಾ ಹಾಗೂ ಶುಬ್​​​ಮನ್​​ ಗಿಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಎರಡನೆಯ ವಿಕೆಟ್​​ಗೆ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು 3 ಮತ್ತು 4ನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಮೈದಾನಕ್ಕಿಳಿಯಲಿದ್ದಾರೆ. 5ನೇ ಕ್ರಮಾಂಕದಲ್ಲಿ ವಿಕೇಟ್​ ಕೀಪರ್ ಕಮ್​​ ಬ್ಯಾಟ್ಸ್​​​ಮನ್ ರಿಷಬ್ ಪಂತ್ ಬರಲಿದ್ದು, ಆರನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಬ್ಯಾಟ್​ ಬೀಸಲಿದ್ದಾರೆ. ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ಜಡೇಜಾಗೆ ಸ್ಪಿನ್ನಿಂಗ್​​​ನಲ್ಲಿ ರವಿಚಂದ್ರನ್ ಅಶ್ವಿನ್ ಸಾಥ್ ಕೊಡಲಿದ್ದಾರೆ. ಜೊತೆಗೆ ಮೂವರು ಸ್ಪೀಡ್ ಬೌಲರ್ಸ್​​ಗೆ ಪ್ಲೇಯಿಂಗ್​ 11ನಲ್ಲಿ ಮಣೆ ಹಾಕಲಾಗಿದೆ. ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಮಾರಕ ಬೌಲಿಂಗ್ ದಾಳಿಗೆ ಸಜ್ಜಾಗಿದ್ದಾರೆ.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರವೇ ಬಾಕಿಯಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾ ತಂಡಕ್ಕೆ ಟ್ವೀಟ್ ಮಾಡುವ ಮೂಲಕ ಶುಭಹಾರೈಸಿದ್ದಾರೆ.

‘ಇದು ಎಲ್ಲರಿಗೂ ದೊಡ್ಡ ಕ್ಷಣ’

“ಇದು ನಮ್ಮೆಲ್ಲರಿಗೂ ದೊಡ್ಡ ಕ್ಷಣವಾಗಿದೆ. ತಂಡದ ಎಲ್ಲಾ ಸದಸ್ಯರಿಗೂ ನಾನು ಶುಭಹಾರೈಸುತ್ತೇನೆ. ಈ ಹಂತಕ್ಕೇರಲು ಕಳೆದ ಎರಡು ವರ್ಷಗಳಲ್ಲಿ ಕಠಿಣ ಪರಿಶ್ರಮವನ್ನು ಆಟಗಾರರು ನೀಡಿದ್ದಾರೆ. ತಮ್ಮ ಆಟದಲ್ಲಿ ಅವರು ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಭರವಸೆ ನನಗಿದೆ”
ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಸದ್ಯ ಭಾರತ ತಂಡವಂತೂ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಯಾರು ಈ ಮೊದಲ ಐತಿಹಾಸಿಕ ವಿಶ್ವ ಚಾಂಪಿಯನ್​​ಶಿಪ್ ಟ್ರೋಫಿಯನ್ನು ಗೆಲ್ತಾರೆ? ಯಾರು ಜಯದ ಗದೆ ಹೊರ್ತಾರೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ. ಕಳೆದ ಏಕದಿನ ವಿಶ್ವಕಪ್​​​​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದ್ದ ಸೇಡನ್ನ ತೀರಿಸಿಕೊಳ್ಳಲು ಕೊಹ್ಲಿ ಬಾಯ್ಸ್​ ತುದಿಗಾಲಲ್ಲಿ ನಿಂತಿದ್ದಾರೆ.

The post ವಿಶ್ವ ಟೆಸ್ಟ್​ ಚಾಂಪಿಯನ್ ​​ಶಿಪ್ ಫೈನಲ್ ಗದೆ ಕಾಳಗ- ಹೇಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್? appeared first on News First Kannada.

Source: newsfirstlive.com

Source link