ವಿಶ್ವ ಟೆಸ್ಟ್​ಚಾಂಪಿಯನ್​ಶಿಪ್​​ ಫೈನಲ್​​ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ, ದಿನಗಣನೆ ಶುರುವಾಗಿದೆ. ಪ್ರತಿಷ್ಠಿತ ಸರಣಿಯ ಪ್ರವಾಸಕ್ಕಾಗಿ ಟೀಮ್ ಇಂಡಿಯಾ ಆಟಗಾರರು, ಮುಂಬೈಗೆ ಸೇರಿದ್ದಾರೆ. 14 ದಿನಗಳ ಕ್ವಾರಂಟೀನ್ ಬಳಿಕ ಇಂಗ್ಲೆಂಡ್​ಗೆ ಪ್ರಯಾಣ ಬೆಳಸಲಿದೆ. ಆದ್ರೆ ಟೀಮ್ ಇಂಡಿಯಾದಲ್ಲಿ ಈಗಾಗಲೇ ಸ್ಪಿನ್ನರ್ ಕೋಟಾದಲ್ಲಿ ಯಾರನ್ನ ಕಣಕ್ಕಿಳಿಸಬೇಕೆಂಬ ಚರ್ಚೆ, ಜೋರಾಗೇ ನಡೀತಿದೆ.

ಹೌದು..! ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗ ಕ್ಲಿಯರ್ ಕಟ್​ ಆಗಿದೆ. ಆದ್ರೆ ಟೀಮ್ ಮ್ಯಾನೇಜ್​ಮೆಂಟ್​​ ತಲೆಬಿಸಿ ಏರಿಸಿರುವುದು, ಬೌಲಿಂಗ್ ವಿಭಾಗದಲ್ಲಿ..!!! ಅದ್ರಲ್ಲೂ ಸೌತ್​ಹ್ಯಾಂಪ್ಟನ್ ಪಿಚ್ ವೇಗಿಗಳಿಗೆ ನೆರವು ನೀಡುವ ಕಾರಣ, ನಾಲ್ವರು ವೇಗಿಗಳು ಕಣಕ್ಕಿಳಿಯೋದು ಪಕ್ಕಾ ಎನ್ನಲಾಗ್ತಿದೆ..! ಇದೇ ಕಾರಣಕ್ಕೆ ಓರ್ವ ಸ್ಪಿನ್ನರ್​ ಕೋಟಾದಲ್ಲಿ ಒಬ್ಬರಿಗೆ ಮಾತ್ರವೇ ಚಾನ್ಸ್​..!! ಹಾಗಾಗಿ ಅನುಭವಿ ರವಿಚಂದ್ರನ್ ಅಶ್ವಿನ್ ಜೊತೆಗೆ ಡೈನಾಮಿಕ್​​​ ರವೀಂದ್ರ ಜಡೇಜಾ ಇಬ್ಬರಲ್ಲಿ ಯಾರಿಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಸಿಗಲಿದೆ ಅನ್ನೋದೇ, ಇಂಟ್ರೆಸ್ಟಿಂಗ್ ಫ್ಯಾಕ್ಟ್​​..

ಸೌತ್​ ಹ್ಯಾಂಪ್ಟನ್​​ನಲ್ಲಿ ಯಾರಿಗೆ ಸಿಗುತ್ತೆ ಚಾನ್ಸ್..?
ಇದು ಟೀಮ್ ಮ್ಯಾನೇಜ್​ಮೆಂಟ್​ಗೆ ಮಾತ್ರವಲ್ಲ.. ಕ್ರಿಕೆಟ್​ ಪಂಡಿತರು, ಕ್ರಿಕೆಟ್ ಪ್ರೇಮಿಗಳು ಕಾಡುತ್ತಿರುವ ಪ್ರಶ್ನೆಯಾಗಿದೆ. ಬೌಲಿಂಗ್ ಆ್ಯಂಡ್ ಬ್ಯಾಟಿಂಗ್​ನಲ್ಲಿ ಪರಕ್ರಮ ಮೆರೆಯೋ ಉಭಯ ಆಟಗಾರರು, ತಂಡದ ಟ್ರಂಪ್ ಕಾರ್ಡ್ ಆಟಗಾರರು ಅನ್ನೋದರಲ್ಲಿ ಎರಡು ಮಾತಿಲ್ಲ.. ಅದ್ರಲ್ಲೂ ಹಿಂದಿನ ಸರಣಿಗಳಲ್ಲಿ ಬೊಂಬಾಟ್ ಆಟವಾಡಿರುವ ಈ ಇಬ್ಬರಲ್ಲಿ ಈಗ ಯಾರಿಗೆ ಚಾನ್ಸ್​ ನೀಡಬೇಕು..? ನೀಡುತ್ತೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.

ಕಳೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಶ್ವಿನ್..!
ಭಾರತ ಇಂದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಅರ್ಹತೆ ಗಿಟ್ಟಿಸಿಕೊಂಡಿದೆ ಎಂದರೆ, ಕೇರಂ ಸ್ಪೆಷಲಿಸ್ಟ್​ ಅಶ್ವಿನ್ ಪಾತ್ರ ಮಹತ್ವದ್ದಾಗಿದೆ. ಚೆನ್ನೈ ಟೆಸ್ಟ್​ನಿಂದ ಹಿಡಿದು ಅಹ್ಮಮದಾಬಾದ್​ ಟೆಸ್ಟ್​ ವರೆಗೂ ಜಬರ್ದಸ್ಥ್​​ ಪರ್ಫಾಮೆನ್ಸ್​ ನೀಡಿದ್ದ ಅಶ್ವಿನ್, ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿದರು. ಅದ್ರಲ್ಲೂ ಚೆನ್ನೈನ 2ನೇ ಟೆಸ್ಟ್​ನಲ್ಲಿ ಬ್ಯಾಟ್ಸ್​ಮನ್​ಗಳೇ ಪೆವಿಲಿಯನ್ ಸೇರಿದ್ದಾಗ ಶತಕ ಸಿಡಿಸಿ ಆಸರೆಯಾಗಿದ್ದೇ, ರವಿಚಂದ್ರನ್ ಆಶ್ವಿನ್ ಅನ್ನೋದನ್ನ ಮರೆಯುವಂತಿಲ್ಲ..

ಆದ್ರೆ ಆಸ್ಟ್ರೇಲಿಯಾ ಸರಣಿಯಲ್ಲಿ ಇಂಜುರಿಗೆ ಒಳಗಾಗಿದ್ದ ಜಡೇಜಾ, ಇಂಗ್ಲೆಂಡ್ ಪ್ರವಾಸಕ್ಕೆ ಕಮ್​ಬ್ಯಾಕ್ ಮಾಡಿರೋದು ಅಶ್ವಿನ್​​​​, ಪ್ಲೇಯಿಂಗ್ ಇಲೆವೆನ್​​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನದಿಂದ ಕೂಡಿದೆ.

ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತೆ ಜಡೇಜಾ ಜಾದೂ..!
ಒಂದೆಡೆ ಸ್ವದೇಶದಲ್ಲಿ ರವಿಚಂದ್ರನ್ ಅಶ್ವಿನ್ ಮ್ಯಾಜಿಕ್ ಮಾಡಿದ್ರೆ, ಮತ್ತೊಂದೆಡೆ ರವೀಂದ್ರ ಜಡೇಜಾ, ಇಂಗ್ಲೆಂಡ್ ವಿರುದ್ಧದ ಹಿಂದಿನ ಸರಣಿಗಳಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ಪಿಚ್​​ಗಳಲ್ಲಿ ಚೆಂಡನ್ನ ಬುಗುರಿಯಂತೆ ತಿರುಗಿಸಿ ವಿಕೆಟ್ ಬೇಟೆಯಾಡಿರುವ ಜಡೇಜಾ, ಆಂಗ್ಲರ ನೆಲದಲ್ಲಿ ಫಸ್ಟ್ ಚಾಯ್ಸ್​ ಸ್ಪಿನ್ನರ್​ ಎನ್ನಲಾಗ್ತಿದೆ.

ಇನ್ನು ಜಡೇಜಾಗೆ ಹೋಲಿಸಿದರೆ, ರವಿಚಂದ್ರನ್ ಅಶ್ವಿನ್ ಕೂಡ ಬ್ಯಾಟಿಂಗ್​, ಬೌಲಿಂಗ್​ನಲ್ಲಿ ನಾನೇನು ಕಡಿಮೆ ಇಲ್ಲ ಅನ್ನೋದು ಸಾಬೀತು ಪಡೆಸಿದ್ದಾರೆ.

ಇಂಗ್ಲೆಂಡ್​​ನಲ್ಲಿ ಉಭಯ ಆಟಗಾರರ ಪ್ರದರ್ಶನ
ಜಡೇಜಾ                        ಅಶ್ವಿನ್
05              ಪಂದ್ಯ           06
276             ರನ್            232
16              ವಿಕೆಟ್​          14
4/79            ಬೆಸ್ಟ್           4/62

ಇಂಗ್ಲೆಂಡ್​ ಪಿಚ್​ನಲ್ಲಿ ಸಮಬಲರಂತೆ ಹೋರಾಟ ನಡೆಸಿರೋ ರವೀಂದ್ರ ಜಡೇಜಾ, ಆರ್​.ಅಶ್ವಿನ್, ನ್ಯೂಜಿಲೆಂಡ್ ಎದುರು ಕೂಡ ಅಬ್ಬರಿಸಿದ್ದಾರೆ. ಅದ್ರಲ್ಲೂ ಕಿವೀಸ್ ವಿರುದ್ಧ ಮೇಲುಗೈ ಸಾಧಿಸಿದ್ದಾರೆ. ಈ ವಿಚಾರದಲ್ಲಿ ಆಲ್​ರೌಂಡರ್ ಜಡೇಜಾ ಏನು ಕಡಿಮೆ ಇಲ್ಲ

ನ್ಯೂಜಿಲೆಂಡ್ ವಿರುದ್ಧದ ಪ್ರದರ್ಶನ
ಜಡೇಜಾ                             ಅಶ್ವಿನ್
06                  ಪಂದ್ಯ             06
234                 ರನ್             144
19                  ವಿಕೆಟ್​            48
5/73                ಬೆಸ್ಟ್            7/59

ಮೇಲಿನ ಅಂಕಿ-ಅಂಶಗಳಲ್ಲಿ ರವಿಚಂದ್ರನ್ ಅಶ್ವಿನ್ ಶೈನ್ ಆಗಿದ್ದಾರೆ.. ನಿಜಾ..! ಆದ್ರೆ, ನ್ಯೂಜಿಲೆಂಡ್​​ ನೆಲದಲ್ಲಿ ಅಶ್ವಿನ್, ಬ್ಯಾಟಿಂಗ್ ಮಂಕಾಗಿದೆ. ಅಶ್ವಿನ್​ಗೆ ಹೋಲಿಸಿದರೆ, ಜಡ್ಡು ಉತ್ತಮ ಪ್ರದರ್ಶನವನ್ನೇ ನೀಡಿದ್ದರು.. ಉಭಯ ಆಟಗಾರರ ಅಂಕಿಅಂಶ ನೋಡಿದರೆ, ಈ ಇಬ್ಬರೂ ಕೂಡ ಸಮಬಲರಾಗಿಯೇ ಕಾಣುತ್ತಿದ್ದಾರೆ.

ಒಟ್ನಲ್ಲಿ ಟೀಮ್ ಇಂಡಿಯಾದ ಎಕ್ಸ್​-ಫ್ಯಾಕ್ಟರ್​​ಗಳಾಗಿ ಗುರುತಿಸಿಕೊಂಡಿರುವ ಈ ಇಬ್ಬರಲ್ಲಿ, ಯಾರಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಆಡುವ ಹನ್ನೊಂದರಲ್ಲಿ ಚಾನ್ಸ್ ಸಿಗುತ್ತೆ ಅನ್ನೋದು ಕಾದುನೋಡಬೇಕು…

The post ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಇಬ್ಬರು ಸ್ಪಿನ್ನರ್​ಗಳನ್ನ ಆಡಿಸ್ತಾರಾ..? appeared first on News First Kannada.

Source: newsfirstlive.com

Source link