
ಸಾಂದರ್ಭಿಕ ಚಿತ್ರ
ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಲು, ಹೆಣ್ಣುಮಕ್ಕಳಿಗೆ ಸುರಕ್ಷಿತ, ನೈರ್ಮಲ್ಯದ ಅಭ್ಯಾಸಗಳನ್ನು ಒದಗಿಸಲು ಪ್ರತಿವರ್ಷ ಮೇ 28ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚಿಸಲಾಗುತ್ತದೆ.
ಮುಟ್ಟು ಎನ್ನುವುದು ಪ್ರೌಢಾವಸ್ಥೆಯ ನಂತರ ಪ್ರತಿ ಹುಡುಗಿಗೆ ಸಂಭವಿಸುವ ನೈಸರ್ಗಿಕ ವಿದ್ಯಮಾನವಾಗಿದ್ದರೂ, ಇದನ್ನು ಇನ್ನೂ ಸಾಮಾನ್ಯ ಎಂದು ಸಂಬೋಧಿಸಲಾಗಿಲ್ಲ. ಹೀಗಾಗಿ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಲು, ಹೆಣ್ಣುಮಕ್ಕಳಿಗೆ ಸುರಕ್ಷಿತ, ನೈರ್ಮಲ್ಯದ ಅಭ್ಯಾಸಗಳನ್ನು ಒದಗಿಸಲು ಪ್ರತಿವರ್ಷ ಮೇ 28ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನ (World Menstrual Hygiene Day)ವನ್ನಾಗಿ ಆಚರಿಸಲಾಗುತ್ತದೆ. ಹಾಗಿದ್ದರೆ ಈ ಬಾರಿಯ ಥೀಮ್ ಏನು? ಸ್ತ್ರಿಯರ ಋತುಚಕ್ರ (Menstrual cycle) ಯಾವಾಗ? ಎಂಬಿತ್ಯಾದಿಗಳ ಬಗ್ಗೆ ಈ ಸುದ್ದಿಯಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇವೆ ಓದಿ.
‘2030 ರ ವೇಳೆಗೆ ಮುಟ್ಟನ್ನು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವುದು’ ಈ ವರ್ಷದ ವಿಶ್ವ ಮುಟ್ಟಿನ ನೈರ್ಮಲ್ಯ ದಿನದ ಥೀಮ್ ಆಗಿದೆ. ಇದು ಥೀಮ್ ಮಾತ್ರವಲ್ಲ, ಬದಲಿಗೆ 2030ರ ವೇಳೆಗೆ ಉದ್ದೇಶವನ್ನು ಸಾಧಿಸಬೇಕಾದ ಗುರಿಯಾಗಿದೆ. ಮುಟ್ಟನ್ನು ಸಾಮಾನ್ಯ ವಿಷಯವನ್ನಾಗಿ ಮಾಡುವುದು, ಅದನ್ನು ಸಾಮಾನ್ಯ ಧ್ವನಿಯಲ್ಲಿ ಸಾರ್ವಜನಿಕವಾಗಿ ಚರ್ಚಿಸಬಹುದು ಉದ್ದೇಶವಾಗಿದೆ.