ವಿಷ್ಣುವರ್ಧನ್​ ಪ್ರೀತಿಸಿದ ಹುಡುಗಿಗೆ ಸುಂದರ್​ ರಾಜ್​ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್​ ಘಟನೆಯ ವಿವರ | Kannada actor Sundar Raj recalls Vishnuvardhan love story during college daysಕಾಲೇಜಿನಲ್ಲಿ ವಿಷ್ಣುವರ್ಧನ್​ ಅವರಿಗೆ ಒಂದು ಪ್ರೇಮ ಚಿಗುರಿತ್ತು. ಆ ಬಗ್ಗೆ ಹಿರಿಯ ನಟ ಸುಂದರ್​ ರಾಜ್​ ಮಾತನಾಡಿದ್ದಾರೆ.

TV9kannada Web Team


| Edited By: Madan Kumar

Jun 04, 2022 | 9:59 AM
ನಟ ಸುಂದರ್​ ರಾಜ್​ ಮತ್ತು ವಿಷ್ಣುವರ್ಧನ್ (Vishnuvardhan)​ ಅವರು ಕಾಲೇಜು ದಿನಗಳಿಂದಲೇ ಸ್ನೇಹಿತರು. ಸಿನಿಮಾದಲ್ಲಿ ಜನಪ್ರಿಯತೆ ಪಡೆಯುವುದಕ್ಕಿಂತಲೂ ಮುಂಚೆ ಅವರ ನಡುವೆ ಆತ್ಮೀಯತೆ ಇತ್ತು. ಒಂದೇ ಕಾಲೇಜಿನಲ್ಲಿ ಇಬ್ಬರೂ ಓದಿದ್ದು. ಆಗ ನಡೆದ ಒಂದು ಇಂಟರೆಸ್ಟಿಂಗ್​ ಘಟನೆಯನ್ನು ಸುಂದರ್​ ರಾಜ್​ ಈಗ ಮೆಲುಕು ಹಾಕಿದ್ದಾರೆ. ಕಾಲೇಜಿನಲ್ಲಿ​ ಹುಡುಗಿಯೊಬ್ಬರನ್ನು ವಿಷ್ಣುವರ್ಧನ್ ಪ್ರೀತಿಸುತ್ತಿದ್ದರು. ತಮ್ಮ ಪರವಾಗಿ ಆಕೆಗೆ ರೋಸ್​ ಕೊಟ್ಟು ಬರುವಂತೆ ಸುಂದರ್​ ರಾಜ್​ಗೆ ವಿಷ್ಣು ಹೇಳಿದ್ದರು. ಆಗ ಏನಾಯ್ತು ಎಂಬುದನ್ನು ಸುಂದರ್​ ರಾಜ್​ (Sundar Raj) ಅವರೀಗ ನೆನಪು ಮಾಡಿಕೊಂಡಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಅವರು ತೆರೆದಿಟದ್ಟಿದ್ದಾರೆ. ಆ ವಿಡಿಯೋ ಇಲ್ಲಿದೆ..

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

TV9 Kannada


Leave a Reply

Your email address will not be published. Required fields are marked *