ವಿಷ್ಣು ದಾದಾ, ಭಾರತಿ LOVE ಶುರುವಾಗಿದ್ದು ಹೀಗೆ..!


7 ಕೋಟಿ ಕನ್ನಡಿಗರ ಆರಾಧ್ಯ ದೈವ, ಕನ್ನಡ ಸಿನಿಮಾ ರಂಗ ಕಂಡ ಅತ್ಯದ್ಭುತ ಕಲಾವಿದ, ಅಜಾತ ಶತ್ರು ಡಾ.ವಿಷ್ಣುವರ್ಧನ್ ಹಿಂದೆ ಅದೆಷ್ಟೋ ಹುಡುಗಿಯರು ಬಿದ್ದಿದ್ದರು. ಯಾರೇ ಪ್ರೊಪೋಸ್ ಮಾಡಿದ್ರು ಎಲ್ಲರನ್ನು ಬಿಟ್ಟು ಆಂಗ್ರಿ ಯಂಗ್ ಮ್ಯಾನ್ ‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಮನಸ್ಸು ಕೊಟ್ಟಿದ್ದು ಮಾತ್ರ ಹಿರಿಯ ನಟಿ ಭಾರತಿಯವರಿಗೆ. ಅಷ್ಟಕ್ಕೂ ಭಾರತಿ ರವರನ್ನ ವಿಷ್ಣುವರ್ಧನ್ ಮೊದಲ ಬಾರಿಗೆ ಭೇಟಿ ಮಾಡಿದ್ದು ಎಲ್ಲಿ? ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು ಹೇಗೆ? ಎಂಬ ಇಂಟ್ರೆಸ್ಟಿಂಗ್ ಸಂಗತಿಯನ್ನು ಭಾರತಿಯವರೇ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ನಾನು ಸ್ಯಾಂಡಲ್ವುಡ್ ಟಾಪ್ ನಟಿಯಾಗಿದ್ದಾಗಲೇ ವಿಷ್ಣುವರ್ಧನ್ ಕೈಹಿಡಿದೆ. ಮೊದಲ ಬಾರಿಗೆ ನಾನು ಡಾ.ವಿಷ್ಣುವರ್ಧನ್ ಅವರನ್ನ ನೋಡಿದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ. ವಿಷ್ಣು ನನ್ನನ್ನು ಭೇಟಿ ಮಾಡೋಕೆ ಬಂದಿದ್ದರು. ನಾಗರಹಾವು 100 ಡೇಸ್ ಸೆಲೆಬ್ರೇಷನ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದರು ಎಂದು ಹಳೇ ಘಟನೆ ನೆನೆದರು.

ದಾದಾ, ಭಾರತಿ ಲವ್ ಶುರುವಾಗಿದ್ದು ಹೀಗೆ..!
‘ದೂರದ ಬೆಟ್ಟ’ ಶೂಟಿಂಗ್ ಮುಗಿಸಿಕೊಂಡು ನಾಗರಹಾವು 100 ಡೇಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಹೀಗೆ ನಾವು ಭೇಟಿಯಾಗಿ ಸ್ನೇಹಿತರಾದೆವು. ನಂತರ ‘ಮನೆ ಬೆಳಗಿದ ಸೊಸೆ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದೆವು. ಅಲ್ಲಿಂದಲೇ ಪ್ರೇಮ ಪಯಣ ಶುರುವಾಗಿದ್ದು ಎಂದು ತಮ್ಮ ಪ್ರೇಮದ ಕಾಂದಬರಿ ಶುರುವಾಗಿದ್ದು ಹೇಗೆ? ಎಂದು ತಿಳಿಸಿದರು.

ವಿಷ್ಣು ನನ್ನನ್ನ ನೋಡಿದಾಗ ‘ಮೇರೆ ದಿಲ್ ಮೇ ಆಜ್ ಕ್ಯಾ..’ ಎಂಬ ಹಾಡು ಹಾಡುತ್ತಿದ್ದರು. ಕೊನೆಗೂ ನಾನು ಅವರ ಮನಸ್ಸಲ್ಲಿದ್ದೇನೆ ಎಂದು ಗೊತ್ತಿದ್ದರೂ ನಾನೇನು ಮಾತಾಡಲಿಲ್ಲ ಎಂದರು.

ಒಪ್ಪಿಗೆ ಪಡೆದು ಮದುವೆ
ನನ್ನ ತಂದೆ, ತಾಯಿ ಅವರೊಂದಿಗೆ ಮಾತಾಡಿ ವಿಷ್ಣು ನನ್ನನ್ನು ಮದುವೆಯಾದರು. ನನ್ನನ್ನು ವಿಷ್ಣು ಬಹಳ ಪ್ರೀತಿಸುತ್ತಿದ್ದ. ರಾತ್ರಿ 9 ಗಂಟೆಯಾದ್ರೂ ನಾನು ಎಲ್ಲಿದ್ರೂ ಅಲ್ಲಿಗೆ ಬರುತ್ತಿದ್ದ. ಅವರದ್ದು ಮಗುವಿನಂಥ ಮನಸ್ಸು ಎಂದು ಹಾಡಿಹೊಗಳಿದರು.

ಸಂಪತ್ ಕುಮಾರ್ ಆಗಿ ಸಿನಿಮಾ ರಂಗಕ್ಕೆ ಬಂದು, ‘ವಂಶ ವೃಕ್ಷ’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು. ವಂಶ ವೃಕ್ಷ ಸಿನಿಮಾವನ್ನು ಕನ್ನಡದ ಖ್ಯಾತ ಕಲಾವಿದ, ಸಾಹಿತಿ, ಕವಿ ಆಗಿದ್ದ ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಆಧಾರಿತ ಸಿನಿಮಾ ಆಗಿತ್ತು. ಮೊದಲನೇ ಸಿನಿಮಾದಲ್ಲಿ ಭರವಸೆ ಹುಟ್ಟಿಸಿದ ಸಂಪತ್ ಕುಮಾರ್, ನಂತರ ಕಣ್ಣಿಗೆ ಬಿದ್ದಿದ್ದು ಕನ್ನಡದ ದಂತಕಥೆ ಪುಟ್ಟಣ್ಣ ಕಣಾಗಾಲ್ ಕಣ್ಣಿಗೆ. ನಾಗರಹಾವು ಸಿನಿಮಾದ ರಾಮಾಚಾರಿ ಪಾತ್ರದ ಮೂಲಕ ಮನೆ ಮನ ಮಾತಾದರು. ಜೊತೆಗೆ ನಾಗರಹಾವು ಸಿನಿಮಾ ಮೂಲಕ ವಿಷ್ಣುವರ್ಧನ್ ಆಗಿ ಬದಲಾದರು ಸಾಹಸಸಿಂಹ.

ಹೀರೋ ಆಗಿ ನಟನೆ ಮಾಡಿದ ಮೊಟ್ಟ ಮೊದಲ ಸಿನಿಮಾ ನಾಗರಹಾವು ಸಿನಿಮಾದಲ್ಲಿ ತಮ್ಮ ಸಹಜ ಮತ್ತು ನೈಜ ನಟನೆಯಿಂದ ಮನೆ ಮಾತಾದರು. ತಮ್ಮ ಸುದೀರ್ಘ 37 ವರ್ಷಗಳ ಸಿನಿಮಾ ಪಯಣದಲ್ಲಿ 220 ಸಿನಿಮಾಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ. 200 ಸಿನಿಮಾಗಳು ಕನ್ನಡದಲ್ಲೇ ನಟಿಸಿರೋದು ವಿಷ್ಣುವರ್ಧನ್ ಅವರ ಹೆಗ್ಗಳಿಕೆ. ಉಳಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಕನ್ನಡದ ಅಪರೂಪದ ಪಂಚಭಾಷಾ ಕಲಾವಿದ ವಿಷ್ಣುವರ್ಧನ್.

News First Live Kannada


Leave a Reply

Your email address will not be published.