ವಿಜಯಪುರ: ಮಹಿಳೆಯೊಬ್ಬರು ವಿಷ ಸೇವಿಸಿ ಪ್ರಿಯಕರನ ತೊಡೆ ಮೇಲೆ ಪ್ರಾಣಬಿಟ್ಟ ಘಟನೆ  ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆದಿದೆ. ಗಂಗೂರು ಗ್ರಾಮದ 36 ವರ್ಷದ ರೇಣುಕಾ ಝಳಕಿ ಮೃತ ಮಹಿಳೆ.

ರೇಣುಕಾ ಹಾಗೂ ಹಡಲಗೇರಿ ಗ್ರಾಮದ 40ವರ್ಷದ ಬಸವರಾಜ್ ಕಿಲಾರಹಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ರೇಣುಕಾಗೆ 3 ಮಕ್ಕಳು, ಬಸವರಾಜ್ ಗೆ 6 ಮಕ್ಕಳು, ಇಬ್ಬರಿಗೂ ಮದುವೆಯಾಗಿದ್ದರೂ ಅನೈತಿಕ‌ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ನಿನ್ನೆ ಇಬ್ಬರೂ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಸೇರಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಬಸವರಾಜ್, ಕಡಿಮೆ ವಿಷ ಸೇವಿಸಿದ್ದ. ರೇಣುಕಾ ಹೆಚ್ಚು ವಿಷ ಸೇವಿಸಿದ್ದರಿಂದ ಸ್ಥಳದಲ್ಲೇ ಅಸ್ವಸ್ಥಗೊಂಡು ಒದ್ದಾಡಿದ್ದಾಳೆ.

ಈ ವೇಳೆ ಪ್ರಿಯಕರ ಬಸವರಾಜ್ ಆಕೆಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಿದ್ದ. ಸ್ಥಳದಲ್ಲಿದ್ದ ಕುರಿಗಾಯಿಗಳು ಇದನ್ನ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ರೇಣುಕಾ ಸಾವನ್ನಪ್ಪಿದ ಬಳಿಕ ಬಸವರಾಜ್​​ನನ್ನು ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೇಣುಕಾ ಪತಿ ಅಶೋಕ ದುಡಿಯಲು ಕೇರಳಕ್ಕೆ ಗುಳೆ ಹೋಗಿದ್ದ ಅಂತ ತಿಳಿದುಬಂದಿದೆ. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

The post ವಿಷ ಸೇವಿಸಿ ಪ್ರಿಯಕರನ ತೊಡೆ ಮೇಲೆ ಪ್ರಾಣಬಿಟ್ಟ ಮಹಿಳೆ appeared first on News First Kannada.

Source: newsfirstlive.com

Source link