ವೀಕೆಂಡ್​ಗೆ ಈ ಪ್ಲಾನ್​ ಬೆಸ್ಟ್​ ಅಂತಿದ್ದಾರೆ ನಟ ವಿಜಯ್​ ದೇವರಕೊಂಡ


ಟಾಲಿವುಡ್​ ನಟ ವಿಜಯ್​ ದೇವರಕೊಂಡ ತಮ್ಮ ಮುಂಬರುವ ಸಿನಿಮಾ “ಲೈಗರ್” ​ ಚಿತ್ರದ ಶೂಟಿಂಗ್​ಗಾಗಿ ಅಮೆರಿಕಾದ ವೇಗಾಸ್​ಗೆ ಹೋಗಿದ್ದಾರೆ. ನಿರ್ದೇಶಕ ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು ಟಾಲಿವುಡ್​ ನಟಿ ಚಾರ್ಮಿ ಈ ಚಿತ್ರಕ್ಕಾಗಿ ಬಂಡವಾಳ ಹೂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಾಕ್ಸಿಂಗ್​ ಚಾಂಪಿಯನ್​ ಮೈಕ್ ಟೈಸನ್ “ಲೈಗರ್” ​ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿತ್ತು.

ಅದರಂತೆ ಭಾರೀ ಆ್ಯಕ್ಷನ್​ ಸಿಕ್ವೇನ್ಸ್​ ಶೂಟ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿದೆ ಎನ್ನಲಾಗಿದ್ದು, ವಿಜಯ್​​ ದೇವರಕೊಂಡ, ಚಾರ್ಮಿ, ನಿರ್ದೇಶಕ ಪೂರಿ ಜಗನ್​ನಾಥ್​​ ಸೇರಿದಂತೆ ಸಿನಿಮಾ ಯೂನಿಟ್​​​ ಅಮೆರಿಕಾ ಸೇರಿಕೊಂಡಿದೆ.

ವೆಗಾಸ್​​ನಲ್ಲಿ ಲ್ಯಾಂಡ್​ ಆಗುತ್ತಿದ್ದಂತೆ ವಿಜಯ್​ ದೇವರಕೊಂಡ ಟ್ವಿಟರ್​ನಲ್ಲಿ ವಿಡಿಯೋ ಶೇರ್​ಮಾಡಿದ್ದು, ಹಲೋ ಯೂಎಸ್​​, ಹಲೋ ಇಂಡಿಯಾ.. ನಾನು ವೆಗಾಸ್​​ಗೆ ಆಗಮಿಸಿದ್ದು, ರಾತ್ರಿ 12 ಗಂಟೆ ಸಮಯವಾಗಿದೆ. ನಿಮಗೆ ಅಲ್ಲಿ ಮಧ್ಯಾಹ್ನ 1 ಗಂಟೆ ಸಮಯ.. ಅಂದರೇ ಅಲ್ಲಿ ವೀಕೆಂಡ್​ಟೈಮ್​.. ನಿಮಗೆ ಒಳ್ಳೆ ಟೈಮ್​ ಪಾಸ್​ ಬೇಕೆಂದರೇ ನಿಮ್ಮ ಕುಟುಂಬದೊಂದಿಗೆ ಸಿನಿಮಾ ಥಿಯೇಟರ್​ಗೆ ತೆರಳಿ ಪುಷ್ಪಕ ವಿಮಾನ ಸಿನಿಮಾ ನೋಡಿ ಎಂಜಾಯ್ ಮಾಡಿ.. ನಿಮಗೆ ವೀಕೆಂಡ್ ಪ್ಲಾನ್​ ಇಲ್ಲ ಎಂದರೇ ಇದು ಒಂದೊಳ್ಳೆ ಸಲಹೆ ಎಂದು ಹೇಳಿದ್ದಾರೆ..

ಅಂದಹಾಗೇ.. ಪುಷ್ಪಕ ವಿಮಾನದಲ್ಲಿ ವಿಜಯ್​ ದೇವರಕೊಂಡ ಸಹೋದರ ಆನಂದ್​ ಹೀರೋ ಆಗಿ ನಟಿಸಿದ್ದು, ಸಹೋದರನಿಗಾಗಿ ವಿಜಯ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *