ಬೆಂಗಳೂರು: ವೀಕೆಂಡ್​​​ ಕರ್ಫ್ಯೂ ಮುಂದುವರಿಸುವ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಗೃಹಸಚಿವ ಬಸವರಾಜ್​ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಬೊಮ್ಮಾಯಿ ಸದ್ಯ ವೀಕೆಂಡ್​ ಕರ್ಫ್ಯೂ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಆಕ್ಸಿಜನ್​ ಪಾಲನ್ನ ಹೆಚ್ಚಾಸಿದೆ, 300 ಮೆಟ್ರಿಕ್​ ಟನ್​ಗಳಿಂದ 800 ಮೆಟ್ರಿಕ್​ ಟನ್​ ಆಕ್ಸಿಜನ್ನನ್ನು ರಾಜ್ಯಕ್ಕೆ ಹೆಚ್ಚುವರಿಯಾಗಿ ನೀಡಲು ಕೇಂದ್ರ ಒಪ್ಪಿದೆ. ನಿನ್ನೆ ಸಂಜೆ ಮುಖ್ಯಮಂತ್ರಿಗಳ ಜೊತೆ  ಈ ಸಂಬಂಧ ಸಭೆ ನಡೆಸಲಾಯಿತು, ಈ ವೇಳೆಯೇ ಕೇಂದ್ರ ಸರ್ಕಾರದಿಂದ ಭರವಸೆ ಸಿಕ್ಕಿರುವ ಬಗ್ಗೆ ಸಿಎಂ ಮಾಹಿತಿ ನೀಡಿದರು. ರೆಮ್ಡಿಸಿವರ್​ ಇಂಜೆಕ್ಷನ್​​ಗಳನ್ನ ರಾಜ್ಯಕ್ಕೆ ಹೆಚ್ಚಾಗಿ ಒದಗಿಸಲು ಕೇಂದ್ರ ಸರ್ಕಾರ ಸಹಕಾರ ನೀಡಲಿದೆ, ಸುಮಾರು 50 ಸಾವಿರದಿಂದ 122000 ರೆಮ್ಡಿಸಿವರ್​ ಇಂಜೆಕ್ಷನ್​ಗಳು ರಾಜ್ಯಕ್ಕೆ ದೊರಕಿಸಿಕೊಲಿದೆ ಎಂದಿದ್ದಾರೆ. ವೀಕೆಂಡ್​ ಕರ್ಫ್ಯೂ ಮುಂದುವರಿಕೆ ಸಂಬಂಧ ಮಾತನಾಡಿ ನಿನ್ನೆ ನಡೆದ ಸಭೆಯಲ್ಲಿ ವೀಕೆಂಡ್​ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಈಗಿರುವ ಮಾರ್ಗಸೂಚಿಗಳೇ ಮುಂದುವರಿಯಲಿವೆ, ರೆಮ್ಡಿಸಿವರ್​ ಸಮಸ್ಯೆ ಬಗೆಹರಿಸಿದ್ದೇವೆ ಎಂದಿದ್ದಾರೆ.

ಕೋ ವ್ಯಾಕ್ಸಿನ್​, ಕೋವಿಡ್​ ಶೀಲ್ಡ್​ ಲಸಿಕೆ ಎರಡನೇ ಡೋಸ್​ ಕೊರತೆ ವಿಚಾರವಾಗಿ ಮಾತನಾಡಿ ಇದು ನಮ್ಮ ಗಮನಕ್ಕೆ ಬಂದಿದೆ. ಈ ಸಮಸ್ಯೆ ಕೂಡ ಬಗೆಹರಿಯಲಿದೆ, ಮೇ 1 ರಿಂದ 18 ವರ್ಷದ ಮೇಲ್ಪಟ್ಟವರಿಗೆ ಮೊದಲನೇ ಡೋಸ್​ ವಿತರಣೆಯಾಗಲಿದೆ. 45 ನೇ ವರ್ಷ ವಯಸ್ಕರಿಗೆ ಎರಡನೇ ಹಂತದ ಲಸಿಕೆ ನೀಡುತ್ತೇವೆ. ರೆಮ್ಡಿಸಿವರ್​ ಇಂಜೆಕ್ಷನ್​ ಕೂಡ ಎಲ್ಲಾ ಜಿಲ್ಲೆಗಳಿಗೆ ಪೂರೈಕೆ ಮಾಡ್ತೇವೆ. ಕೆಲವು ಜಿಲ್ಲೆಗಳಲ್ಲಿ ಹೆಚ್ವುವರಿಯಾಗಿ ಉಳಿದಿರುವ ರೆಮ್ಡಿಸಿವರ್​ ಡ್ರಗ್​ಗಳನ್ನ ಕಡಿಮೆ ಇದ್ದ ಜಿಲ್ಲೆಗಳಿಗೆ ವಿತರಣೆ ಮಾಡ್ತೇವೆ ಎಂದಿದ್ದಾರೆ.

The post ವೀಕೆಂಡ್​​​ ಕರ್ಫ್ಯೂ ಮುಂದುವರಿಕೆ ಬಗ್ಗೆ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ- ಬೊಮ್ಮಾಯಿ appeared first on News First Kannada.

Source: News First Kannada
Read More