ಶಿವಮೊಗ್ಗ: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಮಾಡಿ ಅನಾವಶ್ಯಕವಾಗಿ ಓಡಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪೊಲೀಸ್ ಠಾಣೆ ಆವರಣದಲ್ಲೇ ಮಿಡ್‌ನೈಟ್ ಡ್ರಿಲ್ ಮಾಡಿ ವಾರ್ನ್ ಮಾಡಿದ್ದಾರೆ.

ಕೋಟೆ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಬಿ.ಹೆಚ್‌.ರಸ್ತೆ, ಸಹ್ಯಾದ್ರಿ ಕಾಲೇಜು ಬಳಿ ಎಂಆರ್‌ಎಸ್ ಸರ್ಕಲ್ ಸೇರಿದಂತೆ ವಿವಿಧೆಡೆ ವಾಹನ ತಪಾಸಣೆ ನಡೆಸಿದರು. ಈ ವೇಳೆ ಅನಾವಶ್ಯಕವಾಗಿ ಓಡಾಡುತ್ತಿದ್ದ 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಲ್ಲಿ ಬಹುತೇಕ ಯುವಕರೇ ಇದ್ದಿದ್ದರಿಂದ, ಕೋಟೆ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರು ಕ್ಲಾಸ್ ತೆಗೆದುಕೊಂಡರು.

ಕರ್ಫ್ಯೂ ನಿಯಮ ಮಾಡಿ ಅದನ್ನ ಉಲ್ಲಂಘಿಸಿದರೆ ಅದರಿಂದ ಆಗುವ ಪರಿಣಾಮದ ಬಗ್ಗೆ ವಿವರಿಸಿದರು. ಬಳಿಕ ನಿಯಮ ಉಲ್ಲಂಘಿಸಿದವರಿಗೆ ಪೊಲೀಸ್ ಠಾಣೆ ಆವರಣದಲ್ಲೇ, ನಡುರಾತ್ರಿಯಲ್ಲೇ ಡ್ರಿಲ್ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಕಾರು, ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಡ್ರಿಂಕ್ ಅಂಡ್ ಡ್ರೈವ್ ಮಾಡಿದವರ ಮೇಲೆ ಕೇಸ್ ಹಾಕಲಾಗಿದೆ. ಈ ಕಾರ್ಯಕ್ರಮದಲ್ಲಿ, ಕೋಟೆ ಠಾಣೆ ಮತ್ತು ಡಿಎಅರ್ ಪೊಲೀಸರು ಕಾರ್ಯಾಚರಣೆಯಲ್ಲಿ‌ ಭಾಗವಹಿಸಿದ್ದರು.

The post ವೀಕೆಂಡ್ ಕರ್ಫ್ಯೂ ಉಲ್ಲಂಘನೆ; ಆರೋಪಿಗಳಿಗೆ ಪೊಲೀಸ್ರಿಂದ ಮಿಡ್​ನೈಟ್​ ಡ್ರಿಲ್ appeared first on News First Kannada.

Source: newsfirstlive.com

Source link