ವೀಕೆಂಡ್ ಕರ್ಫ್ಯೂ ವಾಪಸ್; ರಿಲೀಸ್​ಗೆ ‘ಡಿಎನ್​​​ಎ’, ‘ಒಂಬತ್ತನೇ ದಿಕ್ಕು’ ಸಿನಿಮಾಗಳ ಸಿದ್ಧತೆ


ಕೊರೊನಾ ಮಹಾಮಾರಿಯಿಂದ ಸ್ಯಾಂಡಲ್​ವುಡ್​ ಸಂಪೂರ್ಣ ಮಂಕಾಗಿತ್ತು. ಕಳೆದ ಮೂರು ವಾರದಿಂದ ಯಾವುದೇ ಹೊಸ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ. ವೀಕೆಂಡ್​ ಕರ್ಫ್ಯೂ ಇದ್ದಿದ್ದರಿಂದ ಚಿತ್ರಗಳ ರಿಲೀಸ್​ ಮಾಡುವುದಕ್ಕೆ ಯಾವುದೇ ನಿರ್ಮಾಪಕರು ಧೈರ್ಯ ಮಾಡಿರಲಿಲ್ಲ. ಆದರೆ ರಾಜ್ಯ ಸರ್ಕಾರ ವೀಕೆಂಡ್​ ಕರ್ಪ್ಯೂ ಹಿತೆಗೆದುಕೊಂಡ ಹಿನ್ನೆಲೆ ಸಿನಿಮಾಗಳ ರಿಲೀಸ್​ಗೆ ಕ್ಷಣ ಗಣನೆ ಪ್ರಾರಂಭವಾಗಿದೆ.

ಕನ್ನಡದ ‘ಡಿಎನ್​ಎ’ ಚಿತ್ರ ಈ ವರ್ಷದ ಆರಂಭದಲ್ಲೇ ತೆರೆಕಾಣಬೇಕಿತ್ತು. ಜ.7ರಂದು ಬಿಡುಗಡೆಯಾಗಲು ಆ ಸಿನಿಮಾ ಸಜ್ಜಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಿಲೀಸ್​ ದಿನಾಂಕ ಮುಂದೂಡುವುದು ಅನಿವಾರ್ಯ ಆಯಿತು. ಈಗ ವೀಕೆಂಡ್​ ಕರ್ಫ್ಯೂ ತೆರವುಗೊಂಡಿರುವ ಹಿನ್ನೆಲೆಯಲ್ಲಿ . ಜ.28ರಂದು ಸಿನಿಮಾವನ್ನು ತೆರೆಕಾಣಿಸಲು ಡಿ ಎನ್​​ ಎ ಚಿತ್ರ ತಂಡ ನಿರ್ಧರಿಸಿದೆ.

ಡಿಎನ್​​​ಎ ಚಿತ್ರಕ್ಕೆ ಪ್ರಕಾಶ್​ರಾಜ್​ ಮೇಹು ನಿರ್ದೇಶನ ಮಾಡಿದ್ದು, ಎಂ. ಮೈಲಾರಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಎಸ್ತರ್​ ನರೋನಾ, ರೋಜರ್​ ನಾರಾಯಣ್​, ಅನಿತಾ ಭಟ್​, ಮಾಸ್ಟರ್​ ಆನಂದ್​, ಅಚ್ಯುತ್​ ಕುಮಾರ್​ ಮುಂತಾದ ಕಲಾವಿದರು ನಟಿಸಿದ್ದಾರೆ. ‘ಡಿಎನ್​ಎ’ ಸಿನಿಮಾದ ಜೊತೆಗೆ ‘ಒಂಬತ್ತನೇ ದಿಕ್ಕು’ ಚಿತ್ರ ಕೂಡ ಜ.28ರಂದು ರಿಲೀಸ್​ ಆಗುತ್ತಿದೆ. ‘ಒಂಬತ್ತನೇ ದಿಕ್ಕು’ಲೂಸ್​ ಮಾದ ಯೋಗಿ, ಅದಿತಿ ಪ್ರಭುದೇವ ಮುಂತಾದವರು ನಟಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *