ವೀಕೆಂಡ್ ಕರ್ಫ್ಯೂ ವಿರೋಧಿಸಿ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಸಾಲು ಸಾಲು ಸಭೆ! ಕರ್ಫ್ಯೂ ವಿರೋಧಕ್ಕೆ ಕಾರಣವೇನು? ವಾಸ್ತವ ಇಲ್ಲಿದೆ | Many business sectors oppose weekend curfew and tomorrow held meeting in bengaluru


ವೀಕೆಂಡ್ ಕರ್ಫ್ಯೂ ವಿರೋಧಿಸಿ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಸಾಲು ಸಾಲು ಸಭೆ! ಕರ್ಫ್ಯೂ ವಿರೋಧಕ್ಕೆ ಕಾರಣವೇನು? ವಾಸ್ತವ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿ ಗಮನಿಸುತ್ತಿದ್ದರೆ ವೀಕೆಂಡ್ ಕರ್ಫ್ಯೂ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವೀಕೆಂಡ್ ಕರ್ಫ್ಯೂ ವಿರೋಧಿಸಿ ವಿವಿಧ ಉದ್ಯಮಗಳ ಸಂಘಟನೆಗಳು ನಾಳೆ ಮಹತ್ವದ ಸಭೆ ನಡೆಸಲು ಮುಂದಾಗಿವೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಬೇಕರಿ ಮತ್ತು ಕಾಂಡಿಮೆಂಟ್ಸ್ ಅಸೋಸಿಯೇಷನ್, ಬಾರ್, ಪಬ್ & ರೆಸ್ಟೋರೆಂಟ್ ಸಂಘ, ಕರ್ನಾಟಕ ಮ್ಯಾರೇಜ್ ಹಾಲ್ ವೆಲ್‌ಫೇರ್ ಅಸೋಸಿಯೇಷನ್, ಜಿಮ್, ಸ್ವಿಮ್ಮಿಂಗ್ ಪೂಲ್ ಮಾಲೀಕರು ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ವಿನಾಯ್ತಿಗೆ ಅನೇಕ ಉದ್ಯಮ ಸಂಘಟನೆಗಳು ಕಿಡಿಕಾರಿದ್ದು ನಾಳೆ ಬೆಂಗಳೂರು ಅರಮನೆ ಮೈದಾನ ವೈಟ್ ಪೆಟಲ್ಸ್ನಲ್ಲಿ ಸಭೆ ನಡೆಸಲಿದ್ದಾರೆ. ನಿನ್ನೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಶುಕ್ರವಾರದವರೆಗೆ ಕಾದು ನೋಡೋಣ ಎಂದು ಸರ್ಕಾರ ಸುಮ್ಮನಾಗಿದೆ. ಹೀಗಾಗಿ ವಿವಿಧ ಉದ್ಯಮಗಳಿಗೆ ಶುಕ್ರವಾರವೇ ಶುಭ ಸುದ್ದಿ ಸಿಗುತ್ತಾ? ಜ.19ರ ಬಳಿಕವೂ ಈಗಿನ ರೂಲ್ಸ್ ಮುಂದುವರೆಯುತ್ತಾ? ವೀಕೆಂಡ್ ಕರ್ಫ್ಯೂ ತೆರವಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂಬ ಪ್ರಶ್ನೆಗಳಿಗೆ ಶುಕ್ರವಾರವೇ ನಿರ್ಧಾರವಾಗಲಿದೆ.

ಇನ್ನು ಮತ್ತೊಂದೆಡೆ ನೈಟ್ ಕರ್ಫ್ಯೂ ಸಮಯ ಬದಲಾವಣೆಗೆ ಒತ್ತಡ ಕೇಳಿ ಬರ್ತಿದೆ. ರಾತ್ರಿ 11 ಗಂಟೆ ಬಳಿಕ ನೈಟ್ ಕರ್ಫ್ಯೂ ಜಾರಿಗೆ ಮನವಿ ಮಾಡಲಾಗುತ್ತಿದೆ. ಇನ್ನೊಂದೆಡೆ ವೀಕೆಂಡ್ ಕರ್ಫ್ಯೂನಿಂದಲೂ ವಿನಾಯ್ತಿಗಾಗಿ ಬೇಡಿಕೆ ಇಡಲಾಗಿದೆ.

ವೀಕೆಂಡ್ ಕರ್ಫ್ಯೂ ವಿರೋಧಕ್ಕೆ ಕಾರಣವೇನು?
-ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆಯಿಂದ ಲಾಸ್
– ಊಟದ ಮೊತ್ತಕ್ಕಿಂತ ಪಾರ್ಸೆಲ್ ಸಾಮಾಗ್ರಿಗಳ ಬೆಲೆಯೇ ದುಬಾರಿ
– ವಾರದ 7 ದಿನವೂ ಮಹಾರಾಷ್ಟ್ರದಂತೆ ರೂಲ್ಸ್ ಮಾಡಿ
– ಮಹಾರಾಷ್ಟ್ರದಲ್ಲಿ ಯಾವುದೇ ವೀಕೆಂಡ್ ಕರ್ಫ್ಯೂ ಇಲ್ಲ
– ವಾರದ 7 ದಿನವೂ ಸಹ 50:50 ರೂಲ್ಸ್ ಮಹಾರಾಷ್ಟ್ರದಲ್ಲಿದೆ
– ಇದೇ ನಿಯಮವನ್ನ ಕರ್ನಾಟಕದಲ್ಲೂ ಜಾರಿಗೆ ತನ್ನಿ ಎಂದು ಹೋಟೆಲ್ ಅಸೋಸಿಯೇಷನ್ ಮನವಿ ಇಟ್ಟಿದೆ.

ಬಾರ್ & ರೆಸ್ಟೊರೆಂಟ್ ನವರು ಹೇಳೋದೇನು?
– ವೀಕೆಂಡ್ ಕರ್ಫ್ಯೂ ತೆರವು ಮಾಡಿ, ಪಾರ್ಸಲ್ ಗೆ ಅನುಮತಿ ನೀಡಿ
– ಇಲ್ಲವಾದ್ರೆ, ಒಂದು ಸಮಯ ನಿಗದಿ ಮಾಡಿ
– ನಿಗದಿತ ಸಮಯದವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ
– ವಾರದ 7 ದಿನವೂ ಕೇವಲ ನೈಟ್ ಕರ್ಫ್ಯೂ ಇರಲಿ
– ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ

ಕರ್ನಾಟಕ ಮ್ಯಾರೇಜ್ ಹಾಲ್ ವೆಲ್ ಫೇರ್ ಅಸೋಸಿಯೇಷನ್ ಹೇಳೋದೇನು?
– ಮದುವೆ, ಸಮಾರಂಭಗಳಿಗೆ ಹೇರಿರುವ 100 ಜನರ ಮಿತಿ ವಾಪಾಸ್ ಪಡೆಯಿರಿ
– ಶೇ.50ರಷ್ಟು ಜನರ ಮಿತಿ ಅನುಮತಿ ನೀಡಿ
– ಕಲ್ಯಾಣ ಮಂಟಪಗಳ ಗಾತ್ರಕ್ಕೆ ಅನುಗುಣವಾಗಿ ಅವಕಾಶ ಕೊಡಿ

ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ಏನು ಹೇಳುತ್ತೆ?
– ವೀಕೆಂಡ್ ಕರ್ಫ್ಯೂ ಕಂಪ್ಲೀಟ್ ಕ್ಯಾನ್ಸಲ್ ಮಾಡಿ
– ಆನ್ ಲೈನ್ ನಂತೆಯೇ ನಮಗೂ ವ್ಯಾಪಾರಕ್ಕೆ ಅವಕಾಶ ಕೊಡಿ
– ಮೊಬೈಲ್, ಲ್ಯಾಪ್ ಟಾಪ್ ರಿಪೇರಿಗಳು ವಾರಾಂತ್ಯ ಹೆಚ್ಚಿನ ವ್ಯಾಪಾರ
– ವರ್ಕ್ ಫ್ರಂ ನಿಂದ ಸರ್ವೀಸ್ ಸೆಂಟರ್ ಗಳಿಗೆ ಡಿಮ್ಯಾಂಡ್ ಹೆಚ್ಚು

ಸ್ವಿಮ್ಮಿಂಗ್ ಫುಲ್ & ಜಿಮ್ ಮಾಲೀಕರ ಮನವಿ ಏನು?
– ವಾರದ 7 ದಿನವೂ ಶೇ.50 ರಷ್ಟು ಜನರಿಗೆ ಅವಕಾಶ ಕೊಡಿ
– ಬ್ಯಾಚ್ ಗಳ ರೀತಿ ಸ್ವಮ್ಮಿಂಗ್ & ಜಿಮ್ ಗಳಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದೇವೆ.

ಸದ್ಯ ಮತ್ತೆ ವೀಕೆಂಡ್ ಕರ್ಫ್ಯೂ ಮುಂದುವರೆದರೆ ಉದ್ಯಮಕ್ಕೆ ಮತ್ತಷ್ಟು ಹೊಡೆತ ಬೀಳುವ ಭಯದಲ್ಲಿ ಉದ್ಯಮಗಳ ಸಂಘಟನೆಗಳಿದ್ದು ನಾಳೆ ಸಭೆ ನಡೆಸಿ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *