ಬೆಂಗಳೂರು: ಮಾಧ್ಯಮಗಳಿಗೆ ಕೋವಿಡ್​ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ನಿರ್ಬಂಧ ಕೋರಿ ಲೆಟ್ಸ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಪಿಐಎಲ್ ಅನ್ನ ಹೈಕೋರ್ಟ್​ನ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ. ವೀಕ್ಷಕರಿಗೆ ಚಾನಲ್ ಬದಲಿಸುವ ಆಯ್ಕೆಯೂ ಇದೆ ಅನ್ನೋ ಅಭಿಪ್ರಾಯವನ್ನ ಕೋರ್ಟ್​ ವ್ಯಕ್ತಪಡಿಸಿದೆ.

ಲೆಟ್ಸ್ ಕಿಟ್ ಫೌಂಡೇಶನ್ ಅರ್ಜಿಯಲ್ಲಿ ಏನಿತ್ತು..?
ಮಾಧ್ಯಮಗಳು ಕೋವಿಡ್​ನಿಂದ ನರಳುವ ಸಾವಿನ ದೃಶ್ಯ ಪ್ರಸಾರ ಮಾಡಿ ಜೀವಭಯದ ಫೋಬಿಯಾ ಹುಟ್ಟಿಸುತ್ತಿವೆ. ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿವೆ. ಇದು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿವೆ. ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರಿಂದಾಗಿ ವೀಕ್ಷಕರಿಗೆ ಮಾನಸಿಕ ಒತ್ತಡ ಉಂಟಾಗಿ ಸಾವು ಸಂಭವಿಸಬಹುದು. ಹೀಗಾಗಿ ಮಾಧ್ಯಮಗಳ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆಯಡಿ ಕ್ರಮಕೈಗೊಳ್ಳಲು ಅರ್ಜಿದಾರರು ಕೋರ್ಟ್​ಗೆ ಮನವಿ ಮಾಡಿದ್ದರು.

ಇದರ ವಿಚಾರಣೆ ನಡೆಸಿದ ಕೋರ್ಟ್​, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಅಂತಾ ಅರ್ಜಿದಾರರಿಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಅಲ್ಲದೇ ವೀಕ್ಷಕರಿಗೆ ಚಾನಲ್ ಬದಲಿಸುವ ಆಯ್ಕೆಯೂ ಇದೆ. ಬೇರೆ ಉತ್ತಮವಾದುದ್ದನ್ನು ವೀಕ್ಷಿಸಲು ಚಾನಲ್ ಬದಲಿಸಬಹುದು ಅಂತಾ ಸಿಜೆ ಎಎಸ್ ಒಕಾ ನೇತೃತ್ವದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

The post ‘ವೀಕ್ಷಕರಿಗೆ ಚಾನೆಲ್ ಬದಲಿಸುವ ಆಯ್ಕೆ ಇದೆ’ ಅಂತ ಹೈಕೋರ್ಟ್ ಹೇಳಿದ್ಯಾಕೆ ಗೊತ್ತಾ? appeared first on News First Kannada.

Source: newsfirstlive.com

Source link