ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕ್​ಎಂಡ್​​​ ಕರ್ಫ್ಯೂ ಎರಡನೇ ದಿನವಾದ ಇಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟಾರೆ 886 ವಾಹನಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 841 ದ್ವಿಚಕ್ರ ವಾಹನ, 20 ಆಟೋ, 25 ಕಾರುಗಳನ್ನು ಸೀಜ್​ ಮಾಡಿದ್ದಾರೆ. ಆ ಮೂಲಕ ಅನಗತ್ಯವಾಗಿ ಮನೆಯಿಂದ ಹೊರ ಬಂದವರಿಗೆ ಬಿಸಿ ಮುಟ್ಟಿಸಿದ್ದಾರೆ. ಕರ್ಫ್ಯೂ ಮೊದಲ ದಿನವಾದ ನಿನ್ನೆ 1,149 ವಾಹನಗಳನ್ನು ಸೀಜ್​ ಮಾಡಲಾಗಿತ್ತು.

The post ವೀಕ್​​ಎಂಡ್​​ ಕರ್ಫ್ಯೂ​: 841 ಬೈಕ್​​ ಸೇರಿ 886 ವಾಹನಗಳು ಸೀಜ್​​ appeared first on News First Kannada.

Source: News First Kannada
Read More