ಮುಂಬೈ: ಚೀನಿ ವೈರಸ್ ಭಾರತಕ್ಕೆ ವಕ್ಕರಿಸಿದ ಬಳಿಕ ಬಾಲಿವುಡ್ ನಟ ಸೋನು ಸೂದ್ ಅವರ ಸಹಾಯವನ್ನು ಇಡೀ ದೇಶವೇ ಕೊಂಡಾಡಿದೆ. ಸಂಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುವ ನಟನ ಮಾನವೀಯ ಹೃದಯಕ್ಕೆ ಮಾರು ಹೋಗದವರಿಲ್ಲ. ಇದೀಗ ಬೀದಿ ಬದಿ ವ್ಯಾಪಾರಿಗಳಿಗೆ ಮನೋಸ್ಥೈರ್ಯ ತುಂಬಿರುವ ನಟನ ಕಾರ್ಯಕ್ಕೆ ಮತ್ತೊಮ್ಮೆ ಜನ ಭೇಷ್ ಎಂದಿದ್ದಾರೆ.

ಹೌದು. ಕೊರೊನಾ ಲಾಕ್ ಡೌನ್ ನಿಂದ ಅದೆಷ್ಟೋ ಮಂದಿ ಉದ್ಯೋಗ ಇಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ಸದ್ಯ ನಟ ಸಣ್ಣ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ತಾವೇ ರಸ್ತೆ ಬದಿಯಲ್ಲಿ ಬ್ರೆಡ್ ಹಾಗೂ ಮೊಟ್ಟೆ ಮಾರಾಟ ಮಾಡಲು ಇಳಿದಿದ್ದಾರೆ. ಅಲ್ಲದೆ ತಮ್ಮ ಅಭಿಮಾನಿಗಳಲ್ಲಿ ಸಣ್ಣ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವಂತೆ ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ರಘು ಕಿವಿಯಲ್ಲಿ ಹೂ ಇಟ್ಟ ಬಿಗ್‍ಬಾಸ್ ಸ್ಪರ್ಧಿಗಳು

ಈ ಸಂಬಂಧ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ನಟ ಅಪ್ಲೋಡ್ ಮಾಡಿದ್ದಾರೆ. ವೀಡಿಯೋದಲ್ಲಿ ನಟ ಬೈಸಿಕಲ್ ನಲ್ಲಿ ಮೊಟ್ಟೆ, ಬ್ರೆಡ್ ಹಾಗೂ ಇನ್ನಿತರ ಅತ್ಯವಶ್ಯಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಸೋನು ಸೋದ್ ಸೂಪರ್ ಮಾರ್ಕೆಟ್ ಎಂದು ಹೆಸರಿಟ್ಟಿದ್ದಾರೆ. 10 ಮೊಟ್ಟೆ ತಗೊಂಡ್ರೆ 1 ಬ್ರೆಡ್ ಉಚಿತ. ಅಲ್ಲದೆ ಉಚಿವಾಗಿ ಡೆಲಿವರಿ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಒಟ್ಟನಲ್ಲಿ ತನ್ನ ಸಹಾಯ ಮಾಡುವ ಮನೋಭಾವದಿಂದಲೇ ಈಗಾಗಲೇ ಎಲ್ಲರ ಮನಸ್ಸನ್ನು ಗೆದ್ದಿರುವ ಸೋನು ಸೂದ್, ತನ್ನ ಹೊಸ ವೀಡಿಯೊದಿಂದ ಜನರನ್ನು ನಗಿಸುವಂತೆ ಮಾಡಿದ್ದಾರೆ. ಮಾಲ್‍ಗಳು ಮುಚ್ಚಲ್ಪಟ್ಟಿದ್ದರೂ ಸಹ ಒಂದು ಪ್ರಮುಖ ಸೂಪರ್ ಮಾರ್ಕೆಟ್ ತೆರೆದಿರುತ್ತದೆ ಎಂದು ಹೇಳುವ ಮೂಲಕ ಅವನು ಅದನ್ನು ಪ್ರಾರಂಭಿಸಿದ್ದಾರೆ. ಮೊಟ್ಟೆಯಿಂದ ಹಿಡಿದು ಬ್ರೆಡ್‍ವರೆಗೆ ‘ಸೋನು ಸೂದ್ ಕಿ ಸೂಪರ್ಮಾರ್ಕೆಟ್ ಎಕ್ಡಮ್ ಹೈ ಬಾಸ್ ಹಿಟ್’ ಹೇಳುತ್ತಾ ಬೀದಿ ಬೀದಿಯಲ್ಲಿ ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಗಾಳಿಪಟದ ದಾರ ಸಿಲುಕಿ ವ್ಯಕ್ತಿಗೆ ಗಂಭೀರ ಗಾಯ – ವಿಡಿಯೋ ವೈರಲ್

 

View this post on Instagram

 

A post shared by Sonu Sood (@sonu_sood)

The post ವೀಡಿಯೋ: ರಸ್ತೆ ಬದಿಯಲ್ಲಿ ಬ್ರೆಡ್ ಮಾರಿ ಸಣ್ಣ ವ್ಯಾಪಾರಿಗಳಿಗೆ ಸೋನು ಸೂದ್ ಪ್ರೋತ್ಸಾಹ appeared first on Public TV.

Source: publictv.in

Source link