ಚಾಮರಾಜನಗರ: ಕಳೆದ 29 ವರ್ಷಗಳಿಂದ ಕಾಡುಗಳ್ಳ ವೀರಪ್ಪನ್ ಹಾರಿಸಿದ ಮೂರು ಗುಂಡುಗಳನ್ನ ತಲೆಯಲ್ಲೇ ಇಟ್ಟುಕೊಂಡಿದ್ದ ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅಪರಾಧ ವಿಭಾಗದಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜ ನಾಯಕ್ ಇಂದು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ.

1992 ರ ಆಗಸ್ಟ್ 14 ರಂದು ಎಸ್​ಪಿ ಹರಿಕೃಷ್ಣ ಹಾಗೂ ಎಸ್​ಐ ಶಕೀಲ್ ಅಹಮದ್ ಕಪತೆ ವೀರಪ್ಪನ್​ನ್ನು ಹುಟ್ಟಡಗಿಸಲು ಕಾರ್ಯಾಚರಣೆ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಸಿದ್ದರಾಜ ನಾಯಕ್ ಸಹ ಪಾಲ್ಗೊಂಡಿದ್ರು. ಅಂದಿನ ಕಾರ್ಯಾಚರಣೆಯಲ್ಲಿ ಎಸ್​ಪಿ ಹರಿಕೃಷ್ಣ, ಎಸ್ಐ ಶಕೀಲ್ ಅಹಮದ್ ಸೇರಿ ಆರುಮಂದಿ ಪ್ರಾಣ ಕಳೆದುಕೊಂಡಿದ್ದರು. ಸಿದ್ದರಾಜ ನಾಯಕ್ ಅವರ ದೇಹಕ್ಕೆ ಒಟ್ಟು 7 ಗುಂಡುಗಳು ನುಗ್ಗಿದ್ದರೂ ಪವಾಡದೃಶವಾಗಿ ಬದುಕುಳಿದಿದ್ದರು.

ಸಿದ್ದರಾಜ ನಾಯಕ್ ಅವರ ದೇಹದಿಂದ ಆಪರೇಷನ್ ಮೂಲಕ 4 ಗುಂಡುಗಳನ್ನ ತೆಗೆಯಲಾಗಿತ್ತು. ಇನ್ನೂ ಮೂರು ಗುಂಡುಗಳು ಈಗಲೂ ಸಹ ಅವರ ತಲೆಯಲ್ಲೇ ಇದೆ ಎಂದ್ರೆ ನೀವು ನಂಬಲೇಬೇಕು.

ಇಂಥ ಸಿದ್ದರಾಜ ನಾಯಕ್ ಕಳೆದ ವರ್ಷ ಕೊರೊನಾ ಸಮಯದಲ್ಲಿ 75 ದಿನಗಳ ಕಾಲ ರಜೆ ತೆಗೆದುಕೊಳ್ಳದೇ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇಂದು ಸಿದ್ದರಾಜ ನಾಯಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಚಾಮರಾಜನಗರ ಪೊಲೀಸರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ಸಿದ್ದರಾಜ ನಾಯಕ್ ಈ ಹಿಂದೆ ನ್ಯೂಸ್​ಫಸ್ಟ್​ ಜೊತೆಗೆ 1992 ರ ಘಟನೆ ಕುರಿತು ತಮ್ಮ ಅನುಭವ, ಕಾರ್ಯಾಚರಣೆಯ ರೋಚಕ ಸನ್ನಿವೇಶಗಳ ಕುರರಿತು ಹಂಚಿಕೊಂಡಿದ್ದರು.

The post ವೀರಪ್ಪನ್ 7 ಗುಂಡು ಹಾರಿಸಿದ್ರೂ ಬದುಕುಳಿದಿದ್ದ ಪಿಎಸ್​ಐ ಹೃದಯಾಘಾತದಿಂದ ಸಾವು appeared first on News First Kannada.

Source: newsfirstlive.com

Source link