ಲಾಕ್​ಡೌನ್​ ನಂತರ ಸೋಷಿಲ್ ಮೀಡಿಯಾ ಸಾಮ್ರಾಜ್ಯದಲ್ಲಿ ‘ವ್ಹೀಲ್ ಚೇರ್ ರೋಮಿಯೋ’ದೆ ಸದ್ದು. ಕನಸ್ಸಿನಲ್ಲಿ ನಾ ನಡೆವೆ ಅಂತ ಹಾಡುತ್ತ ಸಂಗೀತ ಪ್ರಿಯರ ಮನಸ್ಸಲ್ಲಿ ಅರಮನೆ ಕಟ್ಟಿದ್ದಾರೆ ಈ ರೋಮಿಯೋ.

ಸಿನಿಮಾ ವ್ಯವಸಾಯವೇ ನಿಂತಿರುವ ಹೊತ್ತಲ್ಲಿ ಭರ್ಜರಿ ಫಸಲು ಪಡೆದಿರುವ ಈ ಸ್ಪೆಷಲ್ ರೋಮಿಯೋ ಯಾರು? ರೋಮಿಯೋಗೆ ಸಾಥ್ ನೀಡಿರುವ ಜೂಲಿಯಟ್ ಯಾರು? ಅಂತೀರಾ ಹಾಗಾದ್ರೆ ಇಲ್ಲಿದೆ ನೋಡಿ ಒಂದು ಕ್ಯೂಟ್ ಸ್ಟೋರಿ.

ಸ್ಯಾಂಡಲ್​ವುಡ್​ನಲ್ಲಿ ರೋಮಿಯೋ ಅಂದಾಕ್ಷಣ ಥಟ್ ಅಂತ ನೆನಪಾಗೋದು ಮಳೆ ಹುಡುಗ. ಯಾಕಂದ್ರೆ ಗಣಿ ‘ರೋಮಿಯೋ’ ಆಗಿ ಜಾಕಿ ಭಾವನ ಜೊತೆ ರೊಮ್ಯಾನ್ಸ್​ ಮಾಡಿ ಸಿನಿ ರಸಿಕರನ್ನ ರಂಜಿಸಿದ್ರು. ಆದರೆ ಈಗ ಸ್ಯಾಂಡಲ್​ವುಡ್​ನಲ್ಲಿ ಮತ್ತೊಬ್ಬ ಸ್ಪೆಷಲ್ ರೋಮಿಯೋ ಉದಯಿಸ್ತಿದ್ದಾನೆ. ಇದ್ಯಾರಪ್ಪ ಆ ರೋಮಿಯೋ ಅಂತೀರಾ ಅದಕ್ಕೆ ಉತ್ತರ ‘ವ್ಹೀಲ್ ಚೇರ್ ರೋಮಿಯೋ’.

ಯೆಸ್.. ಸದ್ಯ ಗಾಂಧಿನಗರದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ವ್ಹೀಲ್ ಚೇರ್ ರೋಮಿಯೋ ಚಿತ್ರದ್ದೆ ಮಾತು. ಪೋಸ್ಟರ್​ನಿಂದಲೇ ಗಮನ ಸೆಳೆದ್ದಿದ್ದ ‘ವ್ಹೀಲ್ ಚೇರ್ ರೋಮಿಯೋ’ ಈಗ ಒಂದು ರೊಮ್ಯಾಂಟಿಕ್ ಹಾಡಿನ ಮೂಲಕ ಸಂಗೀತ ಪ್ರಿಯರ ಅಡ್ಡದಲ್ಲಿ ಸೌಂಡ್​ ಮಾಡ್ತಿದ್ದಾನೆ.

ಕಳೆದವಾರ ‘ವ್ಹೀಲ್ ಚೇರ್ ರೋಮಿಯೋ’ ಚಿತ್ರದ ಕನಸ್ಸಿನಲ್ಲಿ ನಾ ನಡೆವೆ ಎಂಬ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಬಿಡುಗಡೆಯಾದ ವಾರದಲ್ಲೇ ಈ ಹಾಡನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

ಜಿ.ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ವ್ಹೀಲ್ ಚೇರ್ ರೋಮಿಯೋ’ ಚಿತ್ರದಲ್ಲಿ ವ್ಹೀಲ್​ ಚೇರ್ ರೋಮಿಯೋ ಆಗಿ ರಾಮ್ ಚೇತನ್ ನಟಿಸಿದ್ರೆ. ಕಣ್ಣಿಲ್ಲದ ಹುಡುಗಿ ಪಾತ್ರದಲ್ಲಿ ಕೃಷ್ಣ ಲೀಲಾ ಖ್ಯಾತಿಯ ಮಯೂರಿ ಮೋಡಿ ಮಾಡಿದ್ದಾರೆ. ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ರೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಬರೆದಿರುವ ಕನಸಿನಲ್ಲಿ ನಾ ನಡೆವೆ ಹಾಡನ್ನು ಗಾಯಕ ಸಂಚಿತ್ ಹೆಗ್ಡೆ ಹಾಡಿದ್ದಾರೆ. ವ್ಹೀಲ್ ಚೇರ್ ರೋಮಿಯೋ ಚಿತ್ರದಲ್ಲಿ ಕಾಲು ಕಳೆದುಕೊಂಡಿರುವ ಹುಡುಗ ಹಾಗೂ ಕಣ್ಣಿಲ್ಲದಿರುವ ಹುಡುಗಿಯ ಪ್ರೇಮಕಥೆಯಾಗಿದೆ.

ಒಂದನೇ ಲಾಕ್ ಡೌನ್​​ನಲ್ಲಿ ಮದುವೆಯಾಗಿ ಎರಡನೇ ಲಾಕ್ ಡೌನ್​​ನಲ್ಲಿ ಮಗುವಿಗೆ ತಾಯಿಯಾಗಿ ಹ್ಯಾಪಿ ಆಂಡ್ ಸೆಫ್ಟಿ ಲೈಫ್ ಸಾಗಿಸುತ್ತಿದ್ದಾರೆ ಮಯೂರಿ. ಈ ವ್ಹೀಲ್​ ಚೇರ್ ರೋಮಿಯೋ ಸಿನಿಮಾದ ಮೇಲೆ ಮಯೂರಿ ಅವರಿಗೆ ಅಪಾರ ವಿಶ್ವಸವಿದ್ದು ಒಂದೊಳ್ಳೆ ಹಿಟ್ ಕೊಡೋ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು ಬಾಕಿ ಇರುವ ಕೆಲಸವನ್ನು ಆದಷ್ಟು ಬೇಗ ಕಂಪ್ಲೀಟ್ ಮಾಡಿ, ಈ ವರ್ಷದ ಅಂತ್ಯದೊಳಗೆ ‘ವ್ಹೀಲ್ ಚೇರ್ ರೋಮಿರೋ’ ಚಿತ್ರಪ್ರೇಮಿಗಳ ಮುಂದೆ ಬರುವ ತಯಾರಿಯಲ್ಲಿದ್ದಾನೆ.

The post ವೀಲ್​ ಚೇರ್​ ರೊಮಿಯೊಗೆ ಜೂಲಿಯಟ್.. ಕಣ್ಣಿಲ್ಲದ ಹುಡುಗಿ ಪಾತ್ರದಲ್ಲಿ ಮಯೂರಿ appeared first on News First Kannada.

Source: newsfirstlive.com

Source link