‘ವೀಲ್​ ಚೇರ್​ ರೋಮಿಯೋ’ ಚಿತ್ರ ನೋಡಿದ ಜಮೀರ್​ ಅಹ್ಮದ್​; ಹೊಸ ಹೀರೋಗೆ ಸನ್ಮಾನ | Zameer Ahmed watches Wheelchair Romeo Kannada MovieZameer Ahmed: ರಾಜಕೀಯದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡ ಜಮೀರ್ ಅಹ್ಮದ್​ ಅವರು ‘ವೀಲ್​ ಚೇರ್​ ರೋಮಿಯೋ’ ಸಿನಿಮಾ ನೋಡಿದ್ದಾರೆ. ಚಿತ್ರದ ಹೀರೋ ರಾಮ್​ ಚೇತನ್​ಗೆ ಅವರು ಸನ್ಮಾನ ಮಾಡಿದ್ದಾರೆ.

TV9kannada Web Team


| Edited By: Madan Kumar

Jun 01, 2022 | 3:35 PM
ಕನ್ನಡದ ‘ವೀಲ್​ ಚೇರ್​ ರೋಮಿಯೋ’ (Wheelchair Romeo) ಸಿನಿಮಾ ಸಖತ್​ ಸದ್ದು ಮಾಡುತ್ತಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಅಲ್ಲದೇ ಇತ್ತೀಚೆಗಷ್ಟೇ ಕಿಚ್ಚ ಸುದೀಪ್​ ಕೂಡ ಆಲ್​ ದಿ ಬೆಸ್ಟ್​ ಹೇಳಿದ್ದರು. ಈಗ ಈ ಸಿನಿಮಾವನ್ನು ಜಮೀರ್​ ಅಹ್ಮದ್ (Zameer Ahmed)​ ಅವರು ನೋಡಿದ್ದಾರೆ. ಅವರಿಗೆ ‘ವೀಲ್​ ಚೇರ್​ ರೋಮಿಯೋ’ ಸಿನಿಮಾ ತುಂಬ ಇಷ್ಟ ಆಗಿದೆ. ಹಾಗಾಗಿ ಹೊಸ ಹೀರೋ ರಾಮ್​ ಚೇತನ್​ಗೆ ಅವರು ಸನ್ಮಾನ ಮಾಡಿದ್ದಾರೆ. ಮಯೂರಿ (Mayuri), ರಂಗಾಯಣ ರಘು, ಸುಚೇಂದ್ರ ಪ್ರಸಾದ್​ ಮುಂತಾದ ಅನುಭವಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಶೇಷವಾದ ಒಂದು ಕಥೆಯನ್ನು ಹೊಂದಿರುವ ‘ವೀಲ್​ ಚೇರ್​ ರೋಮಿಯೋ’ ಚಿತ್ರಕ್ಕೆ ನಟರಾಜ್​ ಜಿ. ನಿರ್ದೇಶನ ಮಾಡಿದ್ದಾರೆ. ತಿಮ್ಮಪ್ಪ ವೆಂಕಟಾಚಲಯ್ಯ ನಿರ್ಮಾಣ ಮಾಡಿದ್ದು, ಬಿ.ಜೆ. ಭರತ್​ ಸಂಗೀತ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *