ನವದೆಹಲಿ: ಎಬೋಲಾ ನಂತರ ಇಡೀ ಜಗತ್ತು ಯಾವ ವೈರಸ್​​ಗಳ ಕಾಲವೂ ಇಲ್ಲದೆ ತನ್ನ ಪಾಡಿಗೆ ತಾನು ನಡೆಯುತ್ತಿತ್ತು. ಕಳೆದ ವರ್ಷದ ಜನವರಿ ಹೊತ್ತಿಗೆ ಚೀನಾದಲ್ಲಿ ಕೊರೊನಾ ಸೋಂಕಿನ ಕುರಿತು ವರದಿಗಳಾಗೋಕೆ ಪ್ರಾರಂಭವಾಗಿದ್ದವು. ಇದರಾಂದೆಚೆಗೆ ನಡೆದಿದ್ದೆಲ್ಲಾ ದುರಂತ. ಚೀನಾದಿಂದ ಒಂದೊಂದೇ ದೇಶಗಳಿಗೆ ಹರಡಿದ ಕೊರೊನ ವೈರಸ್ ಜಗತ್ತಿನ ಬಹುತೇಕ ದೇಶಗಳಿಗೆ ವ್ಯಾಪಿಸಿತು. ಇಲ್ಲಿವರೆಗೆ ಕೊರೊನಾ ಸೋಂಕಿನಿಂದಾಗಿ ಜಗತ್ತಿನಾದ್ಯಂತ 31 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಮೊದಲ ಅಲೆಯಿಂದ ಜಗತ್ತು ಇನ್ನೇನು ಚೇತರಿಸಿಕೊಳ್ಳುತ್ತಿದೆ ಎನ್ನುತ್ತಿರುವಾಗಲೇ ಕೊರೊನಾ ಸೋಂಕು 2, 3, 4 ನೇ ಅಲೆಗಳ ಲೆಕ್ಕದಲ್ಲಿ ಹರಡಲು ಶುರುವಾಯ್ತು. ಕೊರೊನಾ ವಿರುದ್ಧ ಹೋರಾಡಿದಂತೆಲ್ಲಾ ಅದು ಹೊಸ ಹೊಸ ಮಾದರಿಯಲ್ಲಿ ರೂಪಾಂತರಗೊಂಡು ಮತ್ತಷ್ಟು ವೇಗವಾಗಿ ಹರಡುತ್ತಿದೆ.

ವಿಚಿತ್ರ ಎಂದರೆ ಜಗತ್ತಿಗೆ ಕೊರೊನಾ ಸೋಂಕು ಹಂಚಿದ ಚೀನಾದಲ್ಲಿ ಇದೀಗ ಭಾರತದ ಮಾದರಿಯ ಡಬ್ಬಲ್ ಮ್ಯೂಟಂಟ್ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಚೀನಾದ ಕೆಲವು ನಗರಗಳಲ್ಲಿ ಈ ಡಬಲ್ ಮ್ಯೂಟಂಟ್ ವೈರಸ್ ಪತ್ತೆಯಾಗಿದೆ ಎಂದು ಅಲ್ಲಿಯ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮಾಹಿತಿ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರೋ ಅವರು.. ಭಾರತೀಯ ಮಾದರಿಯ ವೈರಸ್​ ದೇಶದ ಕೆಲವು ನಗರಗಳಲ್ಲಿ ಪತ್ತೆಯಾಗಿದೆ. ಈ ಕುರಿತು ಎಲ್ಲರೂ ಕಳವಳಗೊಂಡಿದ್ದಾರೆ. ಮತ್ತು ಆತಂಕಗೊಂಡಿದ್ದಾರೆ ಎಂದು ಮುಖ್ಯ ರೋಗಶಾಸ್ತ್ರಜ್ಞ ವು ಜುನ್ಯೋವು ಸುದ್ದಿಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಚೀನಾ ಮಾತ್ರವಲ್ಲ ಚೀನಾ ಹೊರತಾಗಿ 17 ದೇಶಗಳಲ್ಲಿ Sars-CoV-2 ವೈರಸ್​ನ ಭಾರತೀಯ ಮಾದರಿಯ ಡಬಲ್ ಮ್ಯೂಟಂಟ್ B.1.617 ಕೊರೊನಾ ವೈರಸ್​ ಪತ್ತೆಯಾಗಿದೆ.

ಇನ್ನು ಚೀನಾ ತನ್ನ ದೇಶದ ಯಾವ್ಯಾವ ನಗರಗಳಲ್ಲಿ ಭಾರತೀಯ ಮಾದರಿಯ ವೈರಸ್ ಪತ್ತೆಯಾಗಿದೆ ಎಂದು ಹೇಳಿಲ್ಲ, ಇತ್ತೀಚೆಗೆ ಅಲ್ಲಿ ಕಾರ್ಗೋ ಶಿಪ್​ನಲ್ಲಿ ಕೆಲಸ ಮಾಡುವ 11 ಚೀನೀಯರಲ್ಲಿ ಕೊರೊನಾ ಸೋಂಕು ಪತ್ತೆಯಾದ ಬಗ್ಗೆ ವರದಿ ಮಾಡಿತ್ತು. ಅದರ ಬೆನ್ನಿಗೇ ಇದೀಗ ಡಬಲ್ ಮ್ಯೂಟಂಟ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಇನ್ನು ಕೊರೊನಾ ಪಾಸಿಟಿವ್ ಬಂದ ಸಿಬ್ಬಂದಿ ಕೆಲಸ ಮಾಡುತ್ತಿದ್ದ ಕಾರ್ಗೋ ಶಿಪ್​ ಆಂಧ್ರಪ್ರದೇಶದ ಕಾಕಿನಾಡದಲ್ಲಿ, ಬಾಂಗ್ಲಾದ ಚಿತ್ತಗಾಂಗ್, ಸಿಂಗಾಪೂರ್ ಮತ್ತು ಚೀನಾದ ಕ್ಸಿಯಾಮೆನ್​ನಲ್ಲಿ ತಾತ್ಕಾಲಿಕ ನಿಲುಗಡೆಯಾಗಿತ್ತು ಎನ್ನಲಾಗಿದೆ.

The post ವುಹಾನ್​ಗೆ ಮರಳಿದ ಕೊರೊನಾ ವೈರಸ್; ಆದ್ರೆ ಈ ಬಾರಿ ಚೀನಾಕ್ಕೆ ಟೆನ್ಶನ್ ತಂದ ಭಾರತೀಯ ಮ್ಯೂಟಂಟ್ appeared first on News First Kannada.

Source: newsfirstlive.com

Source link