ವುಹಾನ್ ಕೊರೊನಾ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆಗೆ 4 ವರ್ಷ ಜೈಲು; ಈಗ ಆಕೆ ಬದುಕೋದೇ ಡೌಟ್


ನವದೆಹಲಿ: ಚೀನಾದ ವುಹಾನ್​​ನಲ್ಲಿ ಉಲ್ಬಣಿಸಿದ್ದ ಕೊರೊನಾ ಪ್ರಕರಣಗಳ ಬಗ್ಗೆ ವರದಿ ಮಾಡಿದ್ದ ಅಲ್ಲಿನ ಪತ್ರಕರ್ತೆಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಚೀನಾ ಸರ್ಕಾರದ ನಿರ್ಧಾರವನ್ನ ಖಂಡಿಸಿ ಇವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇದೀಗ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ತುಂಬಾ ಗಂಭೀರವಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.

38 ವರ್ಷದ ಝಾಂಗ್ ಝಾನ್ ಎಂಬ ಮಹಿಳೆ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮಾಜಿ ವಕೀಲೆ ಕೂಡ ಆಗಿರುವ ಇವರು 2020 ಫೆಬ್ರವರಿಯಲ್ಲಿ, ಕೊರೊನಾ ಪರಿಸ್ಥಿತಿ ಬಗ್ಗೆ ವರದಿ ಮಾಡಲು ವುಹಾನ್​ಗೆ ತೆರಳಿದ್ದರು. ಅಲ್ಲದೇ ತಮ್ಮ ಸ್ಮಾರ್ಟ್​ ಫೋನ್​ ಮೂಲಕ ಕೆಲವು ವಿಡಿಯೋಗಳನ್ನ ಹರಿಬಿಟ್ಟು ವುಹಾನ್ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು.

ನಂತರ ಅಂದರೆ ಮೇ 2020ರಲ್ಲಿ ಅವರನ್ನ ವಶಕ್ಕೆ ಪಡೆಯಲಾಗಿತ್ತು. 2020 ಡಿಸೆಂಬರ್​ನಲ್ಲಿ ಆಕೆಯನ್ನ ಜೈಲಿಗೆ ಕಳುಹಿಸಲಾಗಿತ್ತು. ದೀರ್ಘಕಾಲದ ಉಪವಾಸದ ಬಳಿಕ ಸಹೋದರಿಯ ತೂಕದಲ್ಲಿ ಭಾರೀ ಇಳಿಮುಖ ಕಂಡಿದೆ. ಅಲ್ಲದೇ ಅವರು ಸಾವಿಗೆ ಹತ್ತಿರದಲ್ಲಿ ಇದ್ದಾರೆ ಎಂದು ಆಕೆಯ ಸಹೋದರ ಝಂಗ್ ಜು ತಮ್ಮ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಆಹಾರವನ್ನ ಸಂಪೂರ್ಣವಾಗಿ ತ್ಯಜಿಸಿರುವ ಝಾಂಗ್ ಝಾನ್​ಗೆ ಮೂಗಿನ ಒಳಗೆ ಪೈಪ್​ ಅಳವಡಿಸಿ ಬಾಲ್ ಮೂಲಕ ಆಹಾರ ನೀಡಲಾಗುತ್ತಿದೆ. ಆದರೆ ಅವರ ಕಂಡಿಷನ್ ತುಂಬಾ ಕಷ್ಟವಾಗಿದೆ. ಅವಳ ಹೃದಯದಲ್ಲಿ ದೇವರು ಮತ್ತು ಅವಳ ನಂಬಿಕೆಗಳು ಮಾತ್ರ ಇದೆ ಎಂದು ತೋರುತ್ತದೆ. ತಮ್ಮ ಆರೋಗ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಆಕೆಯ ಸಹೋದರ ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *