ವೃದ್ಧೆಗೆ ಚಾಕು ತೋರಿಸಿ ಚಿನ್ನಾಭರಣ ಎಗರಿಸಿದ ಖದೀಮ.. ದೂರು ನೀಡಿದ್ರೂ FIR ದಾಖಲಿಸಿದ ಪೊಲೀಸರು


ಬೆಂಗಳೂರು ಗ್ರಾಮಾಂತರ: ವೃದ್ಧೆಗೆ ಚಾಕು ತೋರಿಸಿದ ಖದೀಮ ಚಿನ್ನಾಭರಣ, ಮೊಬೈಲ್​ ಕಸಿದುಕೊಂಡು ಎಸ್ಕೇಪ್​ ಆಗಿರುವ ಘಟನೆ ದೊಡ್ಡಬಳ್ಳಾಪುರದ ಮಧುರನಹೊಸಹಳ್ಳಿಯಲ್ಲಿ ನಡೆದಿದೆ.

ಹನುಮಕ್ಕ ಎಂಬ ವೃದ್ಧೆ ಪಕ್ಕದ ನೀಲಗಿರಿ ತೋಪಿನಲ್ಲಿ ಪೊರಕೆ ಕಡ್ಡಿ ಕೊಯ್ಯುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ದುಷ್ಕರ್ಮಿ ನಿಮ್ಮ ಸಂಬಂಧಿ ಎಂದು ಹೇಳಿ ನಂತರ ಚಾಕು ತೋರಿಸಿ ಓಲೆ, ತಾಳಿ ಸೇರಿದಂತೆ ಮೊಬೈಲ್ ದೋಚಿ ಪರಾರಿ‌ಯಾಗಿದ್ದಾನೆ.

ಈ ಘಟನೆ ಜನವರಿ 6 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಎಫ್ಐಆರ್ ದಾಖಲಿಸಿಲು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಅಂತಾ ಹನುಮಕ್ಕ ಆರೋಪಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *