ವೃದ್ಧ ದಂಪತಿ ಬಾಳಿಗೆ ಬೆಳಕಾದ ನಟ ಕಿಚ್ಚ ಸುದೀಪ್; ಮಗ ದೂರ ಮಾಡಿದ್ರೂ ಮಾಣಿಕ್ಯ ಮಾಡ್ಲಿಲ್ಲ​​

ವೃದ್ಧ ದಂಪತಿ ಬಾಳಿಗೆ ಬೆಳಕಾದ ನಟ ಕಿಚ್ಚ ಸುದೀಪ್; ಮಗ ದೂರ ಮಾಡಿದ್ರೂ ಮಾಣಿಕ್ಯ ಮಾಡ್ಲಿಲ್ಲ​​

ಲಾಕ್​ಡೌನ್​ ಸಂದರ್ಭದಲ್ಲಿ ಸಾವಿರಾರು ಬಡವರಿಗೆ ಸಹಾಯಹಸ್ತ ಚಾಚಿದವರು ನಟ ಕಿಚ್ಚ ಸುದೀಪ್​​. ಸುದೀಪ್ ಅವರ ಸಾಮಾಜಿಕ ಕಳಕಳಿ ಬಗ್ಗೆ ಯಾರು ಪ್ರಶ್ನಿಸುವಂತಿಲ್ಲ. ಹಾಗೇ ಪ್ರತಿನಿತ್ಯ ನೂರಾರು ಮಂದಿಗೆ ತಮ್ಮ ಕೈಲಾದ ಮಾಡುತ್ತಲೇ ಬಂದಿದ್ದಾರೆ.

ತಮ್ಮ ಟ್ರಸ್ಟ್‌ ಮತ್ತು ಅಭಿಮಾನಿ ಸಂಘಗಳ ಹಿಂದೆ ಬೆನ್ನೆಲುಬಾಗಿ ನಿಂತು ತೆರೆಮರೆಯಲ್ಲೇ ಸಮಾಜ ಸೇವೆ ಮಾಡಿಸುತ್ತಾರೆ ಸುದೀಪ್​​. ಈಗ ಅಂತಹುದ್ದೇ ಕೆಲಸ ಮಾಡಿ ಹಿರಿ ಜೀವಿಗಳ ಪಾಲಿಗೆ ದೇವರಾಗಿದ್ದಾರೆ. ದೊಡ್ಡಬಳ್ಳಾಪುರದ ವೃದ್ಧ ದಂಪತಿಗಳ ಸಂಪೂರ್ಣ ಜವಾಬ್ದಾರಿ ತಾವೇ ಹೊತ್ತುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. 78 ವರ್ಷದ ಶ್ರೀನಿವಾಸ್ ಹಾಗೂ 70 ವರ್ಷದ ಕಮಲಮ್ಮಾ ದಂಪತಿಗೆ ಸುದೀಪ್ ಆಸರೆಯಾಗಿದ್ದಾರೆ.

ಇಬ್ಬರು ಮಕ್ಕಳಿದ್ದರೂ ಯಾರು ಸಹಾಯಕ್ಕೆ ಬಾರದ ಕಾರಣ ಅನಾಥವಾಗಿ ಈ ಹಿರಿ ಜೀವಗಳು ಜೀವನ ಸಾಗಿಸುತ್ತಿದ್ರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸುದೀಪ್​​ ವಯೋವೃದ್ಧ ದಂಪತಿ ಸಹಾಯಕ್ಕೆ ಬಂದಿದ್ದಾರೆ. ನನ್ನ ಕೊನೆಯ ಉಸಿರೋವರೆಗೂ ನಿಮ್ಮನ್ನು ನೋಡಿಕೊಳ್ಳುತ್ತೇನೆ. ಊಟ, ವಸತಿ ಆರೋಗ್ಯದ ಸಂಪೂರ್ಣ ಜವಾಬ್ಧಾರಿ ನನ್ನದೇ ಎಂದು ಸುದೀಪ್​ ಮಾತು ಕೊಟ್ಟಿದ್ದಾರೆ.

ಸುದೀಪ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಮೇಶ್​ ಕಿಟ್ಟಿ ಈಗಾಗಲೇ ವೃದ್ದ ದಂಪತಿಯನ್ನು ಭೇಟಿಯಾಗಿ ಭರವಸೆ ನೀಡಿದ್ದಾರೆ. ವೃದ್ಧ  ದಂಪತಿಗೆ ಇಬ್ಬರು ಮಕ್ಕಳು, ಒಬ್ಬ ಮಗನಿಗೆ ಕಾಲಿಲ್ಲ. ಇನ್ನೊಬ್ಬ ಮಗ ಮೈಸೂರಿನಲ್ಲಿ ನೆಲೆಸಿದ್ದರೂ, ಅಮ್ಮ ಅಪ್ಪನ ನೆರವಿಗೆ ಬಂದಿಲ್ಲ. ಸದ್ಯ ಈ ಹಿರಿ ಜೀವಗಳು ಬೆಂಗಳೂರಿನಲ್ಲಿದ್ದ ಆಸ್ತಿಯನ್ನು ಮಾರಿ ದೊಡ್ಡಬಳ್ಳಾಪುರಕ್ಕೆ ಶಿಫ್ಟ್​ ಆಗಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಓದಲು ಸಹಾಯ ಮಾಡುವ, ಬಡವರಿಗೆ ನೆರವಾಗುವ ಹಲವು ಕಾರ್ಯಗಳನ್ನು ಸುದೀಪ್ ಮಾಡಿದ್ದಾರೆ.

The post ವೃದ್ಧ ದಂಪತಿ ಬಾಳಿಗೆ ಬೆಳಕಾದ ನಟ ಕಿಚ್ಚ ಸುದೀಪ್; ಮಗ ದೂರ ಮಾಡಿದ್ರೂ ಮಾಣಿಕ್ಯ ಮಾಡ್ಲಿಲ್ಲ​​ appeared first on News First Kannada.

Source: newsfirstlive.com

Source link