ವೆಂಕಟೇಶ್ ಅಯ್ಯರ್ ಅವರನ್ನ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಆಯ್ಕೆ ಮಾಡಿರೋದು ಹಲವರ ಟೀಕೆಗಳಿಗೆ ಕಾರಣವಾಗಿದೆ. ಆದರೆ ಅಯ್ಯರ್ ಪರ ಮಾಜಿ ಕ್ರಿಕೆಟಿಗ ಬ್ಯಾಟ್ ಬೀಸಿದ್ದಾರೆ. ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ವೆಂಕಟೇಶ್ ಅಯ್ಯರ್, ಮ್ಯಾಚ್ ಫಿನಿಷರ್ ಆಗಲಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ವೆಂಕಟೇಶ್ ಅಯ್ಯರ್ಗೆ ಬೆಸ್ಟ್ ಆಲ್ರೌಂಡರ್ ಆಗುವ ಅವಕಾಶ ಸಿಕ್ಕಿದೆ. ವೆಂಕಟೇಶ್ ಅಯ್ಯರ್ ಐದು ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ನನ್ನ ಭಾವನೆ. ಅವರೊಂದಿಗೆ ಬೌಲಿಂಗ್ ಕೂಡ ಮಾಡಿಸಬೇಕು ಎಂದು ಟೀಮ್ ಮ್ಯಾನೇಜ್ಮೆಂಟ್ ಸಲಹೆ ನೀಡಿದ್ದಾರೆ.
ಐಪಿಎಲ್ನಲ್ಲಿ ಅದ್ಭುತ ಆಟವಾಡಿದ ಅಯ್ಯರ್, ರಾಷ್ಟ್ರೀಯ ತಂಡದಲ್ಲಿ ಶಾಶ್ವತವಾಗಿ ನೆಲೆಯೂರಬೇಕೆಂದರೆ ಇದೊಂದು ಅದ್ಭುತ ಅವಕಾಶ. ಯಾವುದೇ ಕಾರಣಕ್ಕೂ ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಬಾರದು ಎಂದು ಲಕ್ಷ್ಮಣ್ ಹೇಳಿದ್ದಾರೆ. ನವೆಂಬರ್ 17ರಿಂದ ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿ ಆರಂಭವಾಗಲಿದೆ. ಪ್ರಕಟವಾದ 16 ಸದಸ್ಯರ ತಂಡದಲ್ಲಿ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಲಿದ್ದಾರೆ.
The post ವೆಂಕಟೇಶ್ ಅಯ್ಯರ್ ಪರ VVS ಲಕ್ಷ್ಮಣ್ ಬ್ಯಾಟ್; ಮಾಜಿ ಕ್ರಿಕೆಟಿಗನಿಂದ ‘ಬಂಗಾರ’ದಂಥ ಸಲಹೆ appeared first on News First Kannada.