ಬೀದರ್: ಬ್ರೀಮ್ಸ್ ಕೊವೀಡ್ ವಾರ್ಡ್‌ನಲ್ಲಿ ಎರಡು ವೆಂಟಿಲೇಟರ್ ಸಿಪಿಓಗಳು ಕಳ್ಳತನವಾದ ಘಟನೆ ಬೀದರ್ ನಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.

ಬೀದರ್‌ನಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಬ್ರೀಮ್ಸ್ ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಡುತ್ತಿದ್ದಂತೆ ಇತ್ತ ದರೋಡೆಕೋರರು ಕೈಚಳಕಕ್ಕೆ ಸುಸ್ತಾಗಿ ಹೋಗಿದ್ದಾರೆ. ಆಸ್ಪತ್ರೆಯ ಹಿಂಭಾಗದ ಕಿಟಕಿಯ ಗಾಜು ಹೊಡೆದು 15 ಲಕ್ಷ ಬೆಲೆ ಬಾಳು ಎರಡು ವೆಂಟಿಲೇಟರ್ ಸಿಪಿಓಗಳನ್ನು ಕಳ್ಳತನ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಕೊವೀಡ್ ಸೋಂಕಿತರು ಗುಣಮುಖಾಗಿ ಬಿಡುಗಡೆಯಾಗಿದ್ದನ್ನೆ ಗಮನಿಸಿದ್ದಾರೆ. ದರೋಡೆಕೋರು ಬ್ರೀಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿ ಸಿಸಿ ಕ್ಯಾಮರಾ ಇಲ್ಲದನ್ನು ಗಮನಿಸಿ ಕಿಟಕಿಯ ಗಾಜು ಹೊಡೆದು ವೆಂಟಿಲೇಟರ್‌ಗಳನ್ನು ಕಳ್ಳತನ ಮಾಡಿದ್ದಾರೆ.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಚಂದ್ರಕಾಂತ್ ಮೇದಾ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಷಯ ತಿಳಿದು ಬ್ರೀಮ್ಸ್ ಕೊರೊನಾ ಆಸ್ಪತ್ರೆಗೆ ಪೊಲೀಸ್ ಅಧಿಕಾರಿ ಗೋಪಾಲ್ ಬ್ಯಾಕೋಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ದೂರು ದಾಖಲಿಸಿಕೊಂಡ ನ್ಯೂ ಟೌನ್ ಪೊಲೀಸರು ತನಿಖೆ ಚುರುಕುಗೊಳ್ಳಿಸಿದ್ದಾರೆ.

The post ವೆಂಟಿಲೇಟರ್ ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು appeared first on Public TV.

Source: publictv.in

Source link