ವೆಲ್​ಡನ್ ಬೆಂಗಳೂರು: ಮಹಾ ಲಸಿಕಾ ಅಭಿಯಾನದಲ್ಲಿ ಸಿಲಿಕಾನ್​ ಸಿಟಿಗೆ ಮೊದಲ ಸ್ಥಾನ

ವೆಲ್​ಡನ್ ಬೆಂಗಳೂರು: ಮಹಾ ಲಸಿಕಾ ಅಭಿಯಾನದಲ್ಲಿ ಸಿಲಿಕಾನ್​ ಸಿಟಿಗೆ ಮೊದಲ ಸ್ಥಾನ

ಬೆಂಗಳೂರು: ಇಡೀ ದೇಶದಲ್ಲೇ ಲಸಿಕೆ ಮಹಾ ಅಭಿಯಾನದಲ್ಲಿ ಬೆಂಗಳೂರು ಜಿಲ್ಲೆ ಒಂದೇ ದಿನದಲ್ಲಿ ಅತೀ ಹೆಚ್ಚು ಲಸಿಕೆ ನೀಡುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಇಂದು 2 ಲಕ್ಷದ14ಸಾವಿರದ 709 ಜನರಿಗೆ ವ್ಯಾಕ್ಸಿನೇಷನ್‌ ಹಾಕಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷದ 72 ಸಾವಿರದ 713 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 41 ಸಾವಿರ 996 ಮಂದಿಗೆ ವ್ಯಾಕ್ಸಿನ್ ಹಾಕಲಾಗಿದೆ. ಕರ್ನಾಟಕ ಒಂದರಲ್ಲೇ 10 ಲಕ್ಷದ 86 ಸಾವಿರ 708 ಮಂದಿಗೆ ವ್ಯಾಕ್ಸಿನ್ ಹಾಕಲಾಗಿದೆ. ಇಡೀ‌, ದೇಶದಲ್ಲಿ ಇಂದು 76 ಲಕ್ಷದ 18 ಸಾವಿರದ 558 ಮಂದಿಗೆ ವ್ಯಾಕ್ಸಿನ್ ಹಾಕಲಾಗಿದೆ. ಇನ್ನು ರಾಜ್ಯ ಮಟ್ಟದಲ್ಲಿ ಅತೀ ಹೆಚ್ಚು ಲಸಿಕೆ ನೀಡುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ.

The post ವೆಲ್​ಡನ್ ಬೆಂಗಳೂರು: ಮಹಾ ಲಸಿಕಾ ಅಭಿಯಾನದಲ್ಲಿ ಸಿಲಿಕಾನ್​ ಸಿಟಿಗೆ ಮೊದಲ ಸ್ಥಾನ appeared first on News First Kannada.

Source: newsfirstlive.com

Source link