ವೇಗಿ ಜಯದೇವ್ ಉನಾದ್ಕಟ್​ಗೆ ಬಿಸಿಸಿಐ ಅನ್ಯಾಯ ಮಾಡಿತಾ..?

ವೇಗಿ ಜಯದೇವ್ ಉನಾದ್ಕಟ್​ಗೆ ಬಿಸಿಸಿಐ ಅನ್ಯಾಯ ಮಾಡಿತಾ..?

ಜಯದೇವ್ ಉನಾದ್ಕಟ್… ದೇಶಿ ಕ್ರಿಕೆಟ್​ನ ಬೆಸ್ಟ್​​ ಪೇಸ್ ಅಟ್ಯಾಕರ್​. 140ರ ವೇಗದಲ್ಲಿ ದಾಳಿ ನಡೆಸುವ ಈ ಎಡಗೈ ವೇಗಿ​, 19ನೇ ವರ್ಷಕ್ಕೆ ಟೀಮ್ ಇಂಡಿಯಾ ಪರ ಡೆಬ್ಯು ಮಾಡಿಯೂ ನತದೃಷ್ಟ ಸಾಲಿನಲ್ಲಿ ಗುರುತಿಸಿಕೊಂಡ ಕ್ರಿಕೆಟಿಗ…

ಹೌದು..! 19ನೇ ವರ್ಷಕ್ಕೆ ಟೀಮ್ ಇಂಡಿಯಾಕ್ಕೆ ಕಾಲಿಟ್ಟ ಉನಾದ್ಕಟ್, ರಿವರ್ಸ್​ ಸ್ವಿಂಗ್ ಎಸೆತಗಳನ್ನ ಎಸೆಯುವಲ್ಲಿ ಮಾಸ್ಟರ್​.. ತನ್ನ ಕರಾರು​ವಾಕ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಈತ, ಐಪಿಎಲ್​​ನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದು​ ಇತಿಹಾಸವೇ ಆಗಿದೆ. ಆದ್ರೆ ಇಷ್ಟೆಲ್ಲಾ ಸಾಧನೆ ಹೊರತಾಗಿ ಟೀಮ್ ಇಂಡಿಯಾ ಬಾಗಿಲು ಮಾತ್ರ ಮುಚ್ಚಿಯೇ ಇದೆ. ಅದ್ರಲ್ಲೂ ನಾಲ್ಕು ತಿಂಗಳ ಸುದೀರ್ಘ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಪರಿಗಣಿಸದೇ ಇರೋದು, ಹಲವು ಕ್ರಿಕೆಟಿಗರ ಆಕ್ರೋಶಕ್ಕೂ ಕಾರಣವಾಗಿದೆ.

ಟೀಮ್ ಇಂಡಿಯಾದ ಗೆಸ್ಟ್​ ವೇಗಿ ಉನಾದ್ಕಟ್..!
2010ರಲ್ಲಿ ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್​ ತಂಡಕ್ಕೆ ಕರೆ ಪಡೆದಿದ್ದ ಉನಾದ್ಕಟ್, ಸೆಂಚೂರಿಯನ್​ನಲ್ಲಿ ಒಂದೇ ಒಂದು ವಿಕೆಟ್ ಪಡೆಯದೇ ದುಬಾರಿ ಎನಿಸಿಕೊಂಡಿದ್ದರು. ಬಳಿಕ ತಂಡದಿಂದ ಗೇಟ್​ಪಾಸ್ ಪಡೆದ ಜೈಯದೇವ್, ನಂತರ 2013ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದರು. ನಂತರದ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಸರಣಿಗೂ ಆಯ್ಕೆಯಾಗಿದ್ದ ಉನಾದ್ಕಟ್, ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು ಒಂದೊಂದು ಪಂದ್ಯದಲ್ಲಿ ಮಾತ್ರ.. ಈ ಬಳಿಕ ಮತ್ತೆ ತಂಡದಿಂದ ಹೊರದಬ್ಬಿಸಿಕೊಂಡಿದ್ದ ಜಯದೇವ್, 2017ರ ಐಪಿಎಲ್​​ನಲ್ಲಿ ಉತ್ತಮ ಪ್ರದರ್ಶನದ ಶ್ರಮ, ವರ್ಷ್ಯಾಂತ್ಯದಲ್ಲಿ ಲಂಕಾ ವಿರುದ್ಧದ ಟಿ20 ಹಾಗೂ ಸೌತ್​ ಆಫ್ರಿಕಾ ಸರಣಿಗೆ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ರು. ಇದಾದ ಬಳಿಕ ನಿದಹಾಸ್ ಟಿ20 ತ್ರಿಕೋನ ಸರಣಿಗೆ ಆಯ್ಕೆಯಾಗಿದ್ದ ಉನಾದ್ಕಟ್, ನಂತರ ತಂಡದಿಂದ ಸಂಪೂರ್ಣ ಹೊರಗೇ ಉಳಿದಿದ್ದರು.

2019-20ರ ರಣಜಿ ಟೂರ್ನಿಯಲ್ಲಿ ಸೆನ್ಸೇಷನ್..!
ರಣಜಿ ಟೂರ್ನಿ ಆರಂಭಕ್ಕೂ ಮುನ್ನ ಕೋಟಿ ವೀರ ಎನಿಸಿಕೊಂಡಿದ್ದ ಉನಾದ್ಕಟ್​​ಗೆ, ರಾಜಸ್ಥಾನ ರಾಯಲ್ಸ್ ಐಪಿಎಲ್ ಹರಾಜಿಗೂ ಮುನ್ನ​ ಕೈಬಿಟ್ಟಿತ್ತು. ಈ ಬಳಿಕ 2019-20 ರಣಜಿ ಸೀಸನ್​​ನಲ್ಲಿ ಸೌರಾಷ್ಟ್ರ ನಾಯಕನಾಗಿ ಉನಾದ್ಕಟ್, ನಿಜಕ್ಕೂ ಸೆನ್ಸೇಷನ್ ಸೃಷ್ಟಿಸಿದ್ದರು. ಸೀಮ್ ಆ್ಯಂಡ್ ಸ್ವಿಂಗ್ ಮೂಲಕ ಎದುರಾಳಿಗೆ ಇನ್ನಿಲ್ಲದಂತೆ ಕಾಡಿದ್ದ ಉನಾದ್ಕಟ್, ಟೂರ್ನಿಯಲ್ಲಿ ಬರೋಬ್ಬರಿ 67 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು. ಅಷ್ಟೇ ಅಲ್ಲದೆ, ಸೌರಾಷ್ಟ್ರ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಉನಾದ್ಕಟ್, ಟೀಮ್ ಇಂಡಿಯಾ ಕರೆಯ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿತ್ತು…!

ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದ ಜಯದೇವ್
14ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಬೆಂಚ್​​ಗೆ ಸೀಮಿತಗೊಂಡಿದ್ದ ಜೈದೇವ್ ಉನಾದ್ಕಟ್, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರು. ಪವರ್​​ಪ್ಲೇನಲ್ಲೇ ಪವರ್​ಪ್ಯಾಕ್ ಪರ್ಫಾಮೆನ್ಸ್ ನೀಡಿದ್ದ ಉನಾದ್ಕಟ್, 15 ರನ್ ನೀಡಿ 3 ವಿಕೆಟ್ ಉರುಳಿಸಿದ್ದರು. ಇಷ್ಟೇ ಅಲ್ಲ..! ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 7ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದ ಉನಾದ್ಕಟ್, ಸಹಜವಾಗೇ ಟೀಮ್ ಇಂಡಿಯಾ ಕರೆಯ ನಿರೀಕ್ಷೆಯಲ್ಲಿದ್ದರು. ಆದ್ರೆ ಬಿಸಿಸಿಐ ಆಯ್ಕೆ ಸಮಿತಿ, ಇಂಗ್ಲೆಂಡ್ ಪ್ರವಾಸದ ಟಿಕೆಟ್ ನಿರಾಕರಿಸಿ ಶಾಕ್ ನೀಡಿತ್ತು. ಬಿಸಿಸಿಐನ ಈ ನಡೆಗೆ ಸ್ವತಃ ಮಾಜಿ ಕ್ರಿಕೆಟರ್ ದೊಡ್ಡ ಗಣೇಶ್​ ಕೆಂಡಕಾರಿದ್ದಾರೆ.

‘ಭಾರತೀಯ ಟೆಸ್ಟ್ ತಂಡಕ್ಕೆ ಪ್ರವೇಶಿಸಲು ಉನಾದ್ಕಟ್, ಇನ್ನೇನು ಮಾಡಬೇಕಿದೆ. ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೂ ಉನಾದ್ಕಟ್​ರನ್ನ ಮತ್ತೆ ಮತ್ತೆ ಟೀಮ್ ಇಂಡಿಯಾ ಆಯ್ಕೆಯಲ್ಲಿ ಕಡೆಗಣಿಸಲಾಗುತ್ತಿದೆ.’
ದೊಡ್ಡ ಗಣೇಶ್, ಮಾಜಿ ಕ್ರಿಕೆಟಿಗ

ಇನ್ನೂ ಮಾಜಿ ಕ್ರಿಕೆಟರ್ ಟ್ವೀಟ್​ಗೆ ಪ್ರತಿಕ್ರಿಯಿಸಿರೋ ಉನಾದ್ಕಟ್, ನಿಮ್ಮ ಕಾಳಜಿ ನನ್ನನ್ನು ಇನ್ನಷ್ಟು ಪ್ರೇರೇಪಿಸುತ್ತದೆ. ಮುಂದಿನ ಸೀಸನ್​ನಲ್ಲಿ ಮತ್ತಷ್ಟು ಫೈರ್​ ಪರ್ಫಾಮೆನ್ಸ್​ ನೀಡುವ ಅರ್ಥದಲ್ಲಿ ಉತ್ತರಿಸಿದ್ದಾರೆ. ಒಟ್ನಲ್ಲಿ …ಕಳೆದೈದು ವರ್ಷಗಳಿಂದ ದೇಶಿ ಕ್ರಿಕೆಟ್​​​ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಹೊರತಾಗಿಯೂ, ರಾಷ್ಟ್ರೀಯ ತಂಡಕ್ಕೆ ಎಂಟ್ರಿಕೊಡದಿರುವುದು ನಿಜಕ್ಕೂ ಅಚ್ಚರಿಯ ವಿಚಾರ. ಅದೆನೇ ಆಗಲಿ, ತಮ್ಮ ಪ್ರದರ್ಶನ ಹೀಗೆ ಮುಂದುವರಿಯಲಿ, ಮುಂದಿನ ದಿನಗಳಲ್ಲಿ ಅವಕಾಶಗಳು ಸಿಗಲಿ ಅನ್ನೋದೆ ಅಭಿಮಾನಿಗಳ ಆಶಯ

The post ವೇಗಿ ಜಯದೇವ್ ಉನಾದ್ಕಟ್​ಗೆ ಬಿಸಿಸಿಐ ಅನ್ಯಾಯ ಮಾಡಿತಾ..? appeared first on News First Kannada.

Source: newsfirstlive.com

Source link