ವೇದಿಕೆ ಮೇಲೆ ‘ಲವ್​ ಮಾಕ್ಟೇಲ್​ 2’ ನಟಿಯ ಕಣ್ಣೀರು; ಅಪ್ಪ ಮತ್ತು 5 ವರ್ಷದ ಕಷ್ಟ ನೆನೆದ ನಟಿ | Actress Khushi gets emotional in Love Mocktail 2 pre release event


‘ಲವ್​ ಮಾಕ್ಟೇಲ್​ 2’ (Love Mocktail 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆ.11ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ. ‘ಲವ್​ ಮಾಕ್ಟೇಲ್​’ ಹಿಟ್​ ಆಗಿದ್ದರಿಂದ ಅದರ ಸೀಕ್ವೆಲ್​ ಮೇಲೆ ಸಹಜವಾಗಿಯೇ ನಿರೀಕ್ಷೆ ಮೂಡಿದೆ. ಈ ಬಾರಿಯೂ ಡಾರ್ಲಿಂಗ್​ ಕೃಷ್ಣ ಅವರು ನಟನೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಮಿಲನಾ ನಾಗರಾಜ್ (Milana Nagaraj)​ ಅವರು ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಲವ್​ ಮಾಕ್ಟೇಲ್​’ ಸಿನಿಮಾದಿಂದ ಕೇವಲ ಮಿಲನಾ ಮತ್ತು ಕೃಷ್ಣ ಅವರಿಗೆ ಯಶಸ್ಸು(Actress Khushi) ಸಿಕ್ಕಿಲ್ಲ. ಬದಲಾಗಿದೆ. ಆ ಚಿತ್ರದಲ್ಲಿ ನಟಿಸಿದ್ದ ಇನ್ನಿಬ್ಬರು ಕಲಾವಿದರಾದ ಅಭಿಲಾಶ್​ ಮತ್ತು ಖುಷಿ  ಅವರ ಜನಪ್ರಿಯತೆ ಕೂಡ ಹೆಚ್ಚಿತು. ಈಗ ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲೂ ಅವರಿಬ್ಬರು ಮುಂದುವರಿದಿದ್ದಾರೆ. ನಟಿ ಖುಷಿ ಅವರ ಸಿನಿಜರ್ನಿಯ ಹಿಂದೆ ಅನೇಕ ಕಷ್ಟಗಳಿವೆ. ಅದನ್ನು ನೆನಪಿಸಿಕೊಂಡು ಅವರು ಕಣ್ಣೀರು ಹಾಕಿದ್ದಾರೆ. ‘ಲವ್​ ಮಾಕ್ಟೇಲ್​ 2’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಅವರು ಎಮೋಷನಲ್​ ಆಗಿ ಮಾತನಾಡಿದರು.

TV9 Kannada


Leave a Reply

Your email address will not be published.