ವೇಲ್ ಕಟ್ಟಿಕೊಂಡು ಪ್ರಿಯಕರನೊಂದಿಗೆ ನದಿಗೆ ಹಾರಿ ನವವಿವಾಹಿತೆ ಆತ್ಮಹತ್ಯೆ


ಬೆಂಗಳೂರು: ಪ್ರಿಯಕರನೊಂದಿಗೆ ನದಿಗೆ ಹಾರಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಸಾಗರ ನಾರ್ತ್​ಬ್ಯಾಂಕ್ ಬಳಿಯ ಹಿನ್ನೀರಿನಲ್ಲಿ ನಡೆದಿದೆ.

ಮೈಸೂರಿನ ಮೇಟಗಳ್ಳಿಯ ಬಡವಾಣೆಯ ನಿವಾಸಿಗಳಾದ ನವೀನ್(20) ಮತ್ತು ನಿಸರ್ಗ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಕಳೆದ 7 ದಿನಗಳ ಹಿಂದೆಯಷ್ಟೇ ಬೇರೆ ಯುವಕನೊಂದಿಗೆ ನಿಸರ್ಗಗೆ ಮದುವೆಯಾಗಿತ್ತು. ಆದರೆ ಇಂದು ತನ್ನ ಪ್ರಿಯಕರನೊಂದಿಗೆ ನದಿ ಬಳಿ ಬಂದಿರೋ ಆಕೆ ಪರಸ್ಪರ ವೇಲ್ ಕಟ್ಟಿಕೊಂಡು ನೀರಿಗೆ ಹಾರಿದ್ದಾರೆ.

ಅಂದಹಾಗೇ, ಮೃತ ನವೀನ್​​ ನಿಸರ್ಗಳ ಮಾವ ಆಗಿದ್ದು, ಇಬ್ಬರ ಪ್ರೀತಿಗೆ ಯುವತಿಯ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ಇದರಂತೆ ಯುವತಿಗೆ ಚಾಮರಾಜನಗರ ಸಮೀಪದ ಗ್ರಾಮದ ಯುವನೊಬ್ಬನ ಜೊತೆ ನವೆಂಬರ್ 20 ರಂದು ಮದುವೆ ಮಾಡಿದ್ದರು. ಆದರೆ ಮದುವೆಯಾದ ಬಳಿಕ ಡಿಸೆಂಬರ್ 1ರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಕೆ.ಆರ್.ಎಸ್ ನ ನಾರ್ತ್​ಬ್ಯಾಂಕ್ ನ ಮಿಲ್ಟ್ರಿ ಕ್ಯಾಂಪ್ ಬಳಿ ಸ್ಕೂಟರ್ ನಿಲ್ಲಿಸಿ ಇಬ್ಬರು ವೆಲ್ ನಿಂದ ಕಟ್ಟಿಕೊಂದ ಹಿನ್ನಿರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *