ವೈಟ್​ಹೌಸ್​ನಲ್ಲಿ ದೀಪಾವಳಿ ಸಂಭ್ರಮ; ಹಬ್ಬಕ್ಕೆ ಶುಭಾಶಯ ಕೋರಿದ ಬೈಡೆನ್​​​, ಕಮಲ ಹ್ಯಾರೀಸ್​​


ನಾಡಿನ ಬೆಳಕಿನ ಹಬ್ಬ ದೀಪಾವಳಿ. ಭಾರತದಲ್ಲೂ ಈ ಹಬ್ಬಕ್ಕೆ ಸರ್ಕಾರಿ ರಜೆ ಇದೆ. ಈಗ ಅಮೆರಿಕಾದಲ್ಲೂ ಈ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಬೇಕು ಎಂದು ಯುಎಸ್​​ ಜನಪ್ರತಿನಿಧಿಯಾದ ಕರೊಲಿನ್‌ ಬಿ. ಮಲೋನ್‌ ಒತ್ತಾಯಿಸಿದ್ದಾರೆ. ಕೂಡಲೇ ಜೋ ಬೈಡೆನ್​​ ನೇತೃತ್ವದ ಅಮೆರಿಕಾ ಸರ್ಕಾರ ದೀಪಾವಳಿ ಹಬ್ಬವನ್ನು ನ್ಯಾಷನಲ್​​ ಹಾಲಿಡೇ ಎಂದು ಘೋಷಿಸಿ ಎಂದು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಸೂದೆ ಮಂಡಿದ್ದಾರೆ.

ಇನ್ನು, ದೀಪಾವಳಿಯನ್ನು ಅಧಿಕೃತವಾಗಿ ಫೆಡರಲ್ ಸಾರ್ವಜನಿಕ ರಜಾ ದಿನ ಎಂದು ಘೋಷಿಸಲು ಮಂಡನೆಯಾದ ಮಸೂದೆಗೆ ಭಾರತೀದ ಮೂಲದ ಅಮೆರಿಕನ್ ರಾಜಾ ಕೃಷ್ಣಮೂರ್ತಿ, ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಗ್ರೆಗೊರಿ ಮೀಕ್ಸ್ ಹಲವರು ಬೆಂಬಲಿಸಿದ್ದಾರೆ.

ಈ ನಡುವೆ ಅಮೆರಿಕಾ ಪ್ರೆಸಿಡೆಂಟ್​​ ಜೋ ಬೈಡೆನ್​​ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ದೀಪ ಬೆಳೆಗುವ ಮೂಲಕ ದೀಪಾವಳಿ ಸೆಲೆಬ್ರೇಟ್​​ ಮಾಡಿದ್ದಾರೆ. ಈ ದೀಪಾವಳಿ ನಿಮ್ಮ ಬಾಳಿನಲ್ಲಿ ಬೆಳಕು ತರಲಿ. ಅಮೆರಿಕಾದ ಹಿಂದೂ, ಸಿಖ್​​, ಜೈನ್​​ ಸೇರಿದಂತೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಟ್ವೀಟ್​ ಮಾಡಿದ್ದಾರೆ. ಹಾಗೆಯೇ ಅಮೆರಿಕಾದ ಉಪಾಧ್ಯಕ್ಷರಾದ ಕಮಲಾ ಹ್ಯಾರೀಸ್​​ ಕೂಡ ದೀಪಾವಳಿ ಸೆಲೆಬ್ರೇಟ್​​​ ಮಾಡಿದರು.

News First Live Kannada


Leave a Reply

Your email address will not be published. Required fields are marked *