ವೈದ್ಯಕೀಯ ಕಾಲೇಜು ಪುನರಾರಂಭಕ್ಕೆ ಸರ್ಕಾರ ಆದೇಶ; ವಿದ್ಯಾರ್ಥಿ, ಬೋಧಕರಿಗೆ ಲಸಿಕೆ ಕಡ್ಡಾಯ

ವೈದ್ಯಕೀಯ ಕಾಲೇಜು ಪುನರಾರಂಭಕ್ಕೆ ಸರ್ಕಾರ ಆದೇಶ; ವಿದ್ಯಾರ್ಥಿ, ಬೋಧಕರಿಗೆ ಲಸಿಕೆ ಕಡ್ಡಾಯ

ಬೆಂಗಳೂರು: ಮಾರಕ ಕೊರೋನಾ ಎರಡನೇ ಅಲೆಯಿಂದ ಸ್ಥಗಿತಗೊಂಡಿದ್ದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭಿಸಲು ಸರ್ಕಾರದ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಕೋವಿಡ್​​-19 ಮಾರ್ಗಸೂಚಿಗಳೊಂದಿಗೆ ಕಾಲೇಜು ಆರಂಭಿಸಲು ಆದೇಶದ ಪ್ರತಿಯಲ್ಲಿ ಸೂಚನೆ ನೀಡಲಾಗಿದೆ.

ವೈದ್ಯಕೀಯ, ಡೆಂಟಲ್, ಆಯುಷ್, ನರ್ಸಿಂಗ್, ಹೆಲ್ತ್ ಕೇರ್ ಶೈಕ್ಷಣಿಕ ಸಂಸ್ಥೆಗಳಿಗೆ ಕಾಲೇಜು ಆರಂಭಿಸಲು ಅವಕಾಶ ನೀಡಲಾಗಿದೆ. ಇದಕ್ಕೂ ಮುನ್ನ ವಿದ್ಯಾರ್ಥಿಗಳು ಹಾಗೂ ಬೋಧಕರು ಕಡ್ಡಾಯ ಲಸಿಕೆ ಪಡೆಯಲೇಬೇಕು ಎಂದು ಆದೇಶಿಸಲಾಗಿದೆ.

ಆರೋಗ್ಯ ಇಲಾಖೆ ತಜ್ಞರ ಸಮಿತಿ ಶಿಫಾರಸು ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಲೇಜು ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದಿದ್ದಾರೆ ಸರ್ಕಾರದ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್.

The post ವೈದ್ಯಕೀಯ ಕಾಲೇಜು ಪುನರಾರಂಭಕ್ಕೆ ಸರ್ಕಾರ ಆದೇಶ; ವಿದ್ಯಾರ್ಥಿ, ಬೋಧಕರಿಗೆ ಲಸಿಕೆ ಕಡ್ಡಾಯ appeared first on News First Kannada.

Source: newsfirstlive.com

Source link